KRS Dam: ಭಾರೀ ಮಳೆಗೆ ಜಲಾಶಯದಲ್ಲಿ ಒಳಹರಿವು ಹೆಚ್ಚಳ, ಇಂದಿನ ಮಟ್ಟ?
ಮೈಸೂರು, ಜೂನ್ 21: ಕರ್ನಾಟಕದಲ್ಲಿ ಈ ವರ್ಷ ಉತ್ತಮ ಮುಂಗಾರು ಮಳೆ ದಾಖಲಾಗುವ ನಿರೀಕ್ಷೆಗಳು ಇವೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅದರಿಂದ ಮೇ ಮತ್ತು ಜೂನ್ ತಿಂಗಳಲ್ಲಿ ಮಳೆ ಆರ್ಭಟಿಸುವ ಮೂಲಕ ತಾಪಮಾನಕ್ಕೆ ಮುಕ್ತಿ ನೀಡಿದೆ. ಮತ್ತೊಂದೆಡೆ ರಾಜ್ಯದ ಎಲ್ಲ ನದಿಗಳಿಗೆ, ಜಲಾಶಯಗಳಿಗೆ ಜೀವಕಳೆ ಬಂದಿದೆ.
ಇದೇ ರೀತಿ ಮಂಡ್ಯ ಜಿಲ್ಲೆಯಲ್ಲಿ ಕಾವೇರಿಗೆ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೃಷ್ಣ ರಾಜ ಸಾಗರ (KRS Dam) ಜಲಾಶಯವು ರಾಜ್ಯದ ದಕ್ಷಿಣ ಭಾಗದ ಪ್ರಮುಖ ಆಣಕೆಟ್ಟು ಆಗಿದೆ. ಇಲ್ಲಿ ಜೂನ್ 21ರಂದು ಶುಕ್ರವಾರ ನೀರಿನ ಪ್ರಮಾಣ, ಒಳಹರಿವು ಏರಿಕೆ ಆಗಿದೆ. ಹಾಗಾದರೆ ಎಷ್ಟು ಹೆಚ್ಚಾಗಿದೆ. ಒಟ್ಟು ಸಾಮರ್ಥ್ಯದ ಮಾಹಿತಿ ಇಲ್ಲಿದೆ.

ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ಸೇರಿದಂತೆ ಜಲಾನಯನ ಪ್ರದೇಶಗಳಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಕೆಆರ್‌ಎಸ್ ಆಣೆಕಟ್ಟು ಭರ್ತಿಯಾಗಿದೆ 21 ಜೂನ್ 2024 ರಂತೆ ಕಾವೇರಿ ಜಲಾನಯನ ಅಣೆಕಟ್ಟಿನ ನೀರಿನ ಮಾಹಿತಿ ಇಲ್ಲಿದೆ.
ಒಳಹರಿವು 1338 ಕ್ಯೂಸೆಕ್ ಹೆಚ್ಚಳ
ಕೆಆರ್‌ಎಸ್ ಜಲಾಶಯದ ಒಟ್ಟು ಸಾಮರ್ಥ್ಯದಲ್ಲಿ (49.452 TMC) ಇಂದು ಶುಕ್ರವಾರ 1338 ಕ್ಯೂಸೆಕ್ ನೀರಿನ ಒಳಹರಿವು ಕಂಡು ಬಂದಿದೆ. ಇನ್ನೂ 50 ಕ್ಯೂಸೆಕ್ ಕ್ಯಾನಾಲ್ ಗೆ ಮತ್ತು 417 ಕ್ಯೂಸೆಕ್ ನೀರು ಕಾವೇರಿ ನದಿ ನೀರಿಗೆ ಬಿಡಲಾಗಿದೆ. ಈ ಮೂಲಕ ಒಟ್ಟು ಹೊರ ಹರಿವಿನ ಪ್ರಮಾಣ 467 ಕ್ಯೂಸೆಕ್ ಇದೆ.
ಇಂದಿನ ನೀರಿನ ಸಂಗ್ರಹ ಮಟ್ಟ ಶೇಕಡಾ 29.3ರಷ್ಟಿದ್ದು, ಮುಂದಿನ ಒಂದು ವಾರ ಅತ್ಯಧಿಕ ಮಳೆಯ ಮುನ್ಸೂಚನೆ ಕಾರಣಕ್ಕೆ ಜಲಾಶಯದಲ್ಲಿನ ನೀರಿನ ಮಟ್ಟ, ಒಳಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
ಇದರೊಂದಿಗೆ ಸಕಲೇಶಪುರದಲ್ಲಿ 2019 ರಲ್ಲಿ ಹೇಮಾವತಿ ನದಿ ಸುತ್ತಮುತ್ತ ಪ್ರವಾಹ ಉಂಟಾಗಿದ್ದಾಗ ಇದ್ದ ನೀರಿನ ಪ್ರಮಾಣದ, ಫೋಟೋಗಳನ್ನು ಉಸ್ತುವಾರಿ ಕೇಂದ್ರ ಹಂಚಿಕೊಂಡಿದೆ. ಅಂದು ದೀರ್ಘಕಾಲದವರೆಗೆ ಪ್ರವಾಹದ ಸ್ಥಿತಿ ಉಂಟಾಗಿತ್ತು. ಅಂದಿನ ಪ್ರವಾಹ ಸಮಯದಲ್ಲಿ ಈ ನದಿಯಲ್ಲಿ ನೀರಿನ ಸಂಗ್ರಹ ಪ್ರಮಾಣ 10.72 ಮೀಟರ್ ನಷ್ಟು ಏರಿಕೆ ಆಗಿತ್ತು ಎಂದು ತಿಳಿಸಲಾಗಿದೆ.
ಭಾರೀ ಮಳೆ ಮುನ್ಸೂಚನೆ
ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಅಬ್ಬರಿಸಲಿದೆ. ಬದಲಾದ ಹವಾಮಾನ ವೈಪರಿತ್ಯದ ಪ್ರಭಾವದಿಂದ ರಾಜ್ಯಾದ್ಯಂತ ಮಂಗಾರು ಮಳೆ ಸಕ್ರಿಯವಾಗಲಿದೆ. ಮುಂದಿನ ದಿನಗಲ್ಲಿ ಅತ್ಯಧಿಕ ಮಳೆ ಆಗಲಿದೆ. ಯಾವ ಭಾಗಕ್ಕೆ ಮಳೆ ಕೊರತೆ ಆಗದ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.












Click it and Unblock the Notifications