KRS Reservoir Level Today: ಇಂದು 552 ಕ್ಯೂಸೆಕ್ಸ್ ನೀರು ಬಿಡುಗಡೆ, ಒಳ ಹರಿವು-ಸಂಗ್ರಹಣೆ ಮಾಹಿತಿ
ಬೆಂಗಳೂರು, ಜೂನ್ 07: ಕರ್ನಾಟಕ ರಾಜ್ಯದಲ್ಲಿ ಹಲವು ದಿನಗಳಿಂದ ಉತ್ತಮ ಮಳೆ ಆಗುತ್ತಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಾವೇರಿ ಕೊಳ್ಳದ ಸುತ್ತಮುತ್ತಲಿನ ರೈತರಿಗೆ ಆಧಾರವಾದ ಕೆಆರ್‌ಎಸ್ ಜಲಾಶಯದ ನೀರಿನ ಒಳಹರಿವು ಹೆಚ್ಚಾಗಿದೆ. ಇನ್ನೂ ಮುಂದಿನ ಬೇಸಿಗೆ ವರೆಗೆ ನಿಶ್ಚಿಂತರಾಗಿ ರೈತರು ವ್ಯವಸಾಯ ಮಾಡಬಹುದು.
ರಾಜ್ಯದ ನದಿಗಳು ಮೈದುಂಬಿ ಹರಿಯುತ್ತಿವೆ. ಎರಡು ರಾಜ್ಯಗಳಿಗೆ ಆಧಾರವಾಗಿರುವ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಮಂಡ್ಯದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ 'ಕೃಷ್ಣ ರಾಜ ಸಾಗರ' (KRS Dam) ಆಣೆಕಟ್ಟಿನಲ್ಲಿ ಇಂದು ಜೂನ್ 7ರಂದು ನೀರು ಸಂಗ್ರಹ ಹೆಚ್ಚಾಗಿದೆ. ಒಳಹರಿವು ಸಹ ಏರಿಕೆ ಆಗಿದೆ.

KRS ಡ್ಯಾಮ್ ಒಟ್ಟು ಸಾಮರ್ಥ್ಯ 49.452 ಟಿಎಂಸಿ
ಕೆ.ಆರ್‌ಎಸ್ ಜಲಾಶಯದ ಒಟ್ಟು ನೀರು ಸಂಗ್ರಹಣೆ ಸಾಮರ್ಥ್ಯ 49.452 ಟಿಎಂಸಿ. ಇನ್ನೂ ಜಲಾಶಯ ಪೂರ್ಣ ಭರ್ತಿಯಾಗಲು (FRL) 124.80 ಅಡಿ ಬೇಕಿದೆ. ಅದರಲ್ಲಿ ಇಂದಿಗೆ ಪ್ರಸೆಂಟ್ ಸಂಗ್ರಹಣಾ ಮಟ್ಟ (PSL) 84.80 ಅಡಿಯಷ್ಟು ಆಗಿದೆ. ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಸಾಧಾರಣದಿಂದ ಭಾರೀ ಮಳೆ ಆಗಿದೆ. ಮುಂದಿನ ಇನ್ನೋ ಒಂದು ವಾರ ಮಳೆ ಆಗಲಿದ್ದು, ಇನ್ನಷ್ಟು ಒಳ ಹರಿವು, ನೀರಿನ ಸಂಗ್ರಹಣೆ ಹೆಚ್ಚಾಗಲಿದೆ.
KRS ಜಲಾಶಯದ ಇಂದಿನ ಒಳ-ಹೊರ ಹರಿವು
ಇಂದು ಶುಕ್ರವಾರ ಕೆಆರ್‌ಎಸ್ ಜಲಾಶಯದ ಒಳಹರಿವು 1823 ಕ್ಯೂಸೆಕ್ ಹಾಗೂ ಜಲಾಶಯದಿಂದ ನದಿಗೆ 502 ಕ್ಯೂಸೆಕ್ ನೀರು ಹರಿಸಲಾಗುತ್ತದೆ. ಇನ್ನೂ ಆಣೆಕಟ್ಟಿನಿಂದ ಕಾಲುವೆಗಳಿಗೆ 50 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇದೆಲ್ಲ ಜಲ ಮೂಗಳಿಗೆ ಆಣೆಕಟ್ಟಿನಿಂದ ಒಟ್ಟು 552 ಕ್ಯೂಸೆಕ್ಸ್ ನೀರು ಹೊರ ಹರಿವಿನ ಮೂಲಕ ಬಿಡಲಾಗುತ್ತದೆ.

ಕೆಆರ್‌ಎಸ್ ಜಲಾಶಯದಲ್ಲಿ ಇಂದು ಶೇಕಡಾ 26.42 ರಷ್ಟು ಸಂಗ್ರಹಣೆ ಆಗಿದೆ. ಮುಂದಿನ ದಿನಗಳಲ್ಲಿ ಕಾವೇರಿ ಕೊಳ್ಳದಲ್ಲಿ ಮತ್ತಷ್ಟು ಮಳೆ ಆಗುವ ಸಾಧ್ಯತೆಗಳು ಇವೆ. ಕೆವಲ ಕೆಆರ್‌ಎಸ್ ಮಾತ್ರವಲ್ಲದೇ, ಕಬಿನಿ, ಹಾರಂಗಿ, ಭದ್ರಾ ಆಣೆಕಟ್ಟುಗಳಲ್ಲಿ ಸಹ ನೀರಿನ ಒಳಹರಿವು ಹೆಚ್ಚಾಗಿದೆ. ರಾಜ್ಯದ ಪ್ರಮುಖ ಆಣೆಕಟ್ಟುಗಳಲ್ಲಿ ನೀರಿನ ಸಂಗ್ರಹಣೆ ಹೆಚ್ಚಾಗಿದೆ.
#KRS Dam - Mandya
— ರವಿ ಕೀರ್ತಿ ಗೌಡ (@ravikeerthi22) June 7, 2024
7th June 2024 , 8 AM
FRL - 124.80 ft
PRL - 84.80 ft
Storage - 13.067 / 49.452 TMC
Inflow - 1823 cusecs
Outflow - River : 502 cusecs
Canal : 50 cusecs
Total Outflow - 552 cusecs
Storage - 26.42%
ಭಾರೀ ಮಳೆ ಮುನ್ಸೂಚನೆ
ರಾಜ್ಯದಲ್ಲಿ ಮುಂಗಾರು ಮಳೆ ಸಕ್ರಿಯವಾಗಿದೆ. ಮುಂದಿನ ಇನ್ನೂ ಕೆಲವು ದಿನಗಳ ಕಾಲ ಭಾರೀ ಮಳೆ ಆಗಲಿದೆ ಎಂದು ಐಎಂಡಿ ತಿಳಿಸಿದೆ. ರಾಜ್ಯದಲ್ಲಿ ಭಾರೀ ಮಳೆಗೆ ನೆನ್ನೆ 2 ಸಾವಾಗಿದೆ. ಉತ್ತರ ಕರ್ನಾಟಕದಲ್ಲೂ ಭಾರೀ ಮಳೆ ಮುನ್ಸೂಚನೆ ಇದೆ. ಹೀಗಾಗಿ, ಕೃಷ್ಣೆ, ವರದಾ, ತುಂಗಭದ್ರಾ ಸೇರಿದಂತೆ ಇನ್ನಿತರ ನದಿಗಳ ಸಂಗ್ರಹದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications