KRS Dam: ಭಾರೀ ಮಳೆಗೆ ಜಲಾಶಯದ ಒಳ ಹರಿವು ಹೆಚ್ಚಳ, KRS ಉದ್ಯಾನಕ್ಕೆ ಬಂತು ಕಳೆ
ಮೈಸೂರು, ಜೂನ್ 08: ಕಾವೇರಿ ಜಲಾಯನಯ ಪ್ರದೇಶಗಳು ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧೆಡೆ ಭಾರೀ ಮಳೆ ಆಗುತ್ತಿದೆ. ಈ ಕಾರಣದಿಂದ ಕೃಷ್ಣ ರಾಜ ಸಾಗರ (KRS Dam Water Level) ಆಣೆಕಟ್ಟಿನಲ್ಲಿ ನೀರನ ಸಂಗ್ರಹ ಹೆಚ್ಚಾಗಿದೆ. ಒಳ ಹರಿವು ಏರಿಕೆ ಆಗಿದೆ.
ಮೈಸೂರು, ಮಂಡ್ಯ, ತಲಕಾಡು, ತಲಕಾವೇರಿ ಭಾಗದ ಪ್ರದೇಶ ಹಾಗೂ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಅತ್ಯಧಿಕ ಮಳೆ ಆಗುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಾವೇರಿ ನದಿ ನೀರಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಕೆಆರ್‌ಎಸ್ ಆಣೆಕಟ್ಟು ಲಕ್ಷಾಂತರ ಜನರಿಗೆ ಕುಡಿಯುವ ನೀರೊದಗಿಸುವ ಜೊತೆಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಹೀಗಾಗಿ ನದಿಗಳು ಮೈದುಂಬಿ ಹರಿಯುತ್ತಿರುವುದು, ಆಣೆಕಟ್ಟುಗಳು ಭರ್ತಿಯಾಗುತ್ತಿರುವ ಕಾವೇರಿ ಕೊಳ್ಳದ ಸುತ್ತಮುತ್ತಲಿನ ಜನರಲ್ಲಿ ಸಂತಸ ಮೂಡಿಸಿದೆ.
ಇಂದಿನ ಒಳ-ಹೊರ ಹರಿವಿನ ಪ್ರಮಾಣ
ಭಾನುವಾರ ಜೂನ್ 08ರ ಮಾಹಿತಿ ನೋಡುವುದಾರೆ, 49.452 ಟಿಎಂಸಿ ಇದು ಕೆಆರ್‌ಎಸ್ ಜಲಾಶಯದ ಒಟ್ಟು ಸಾಮರ್ಥ್ಯವಾಗಿದೆ. ಇದರ ಒಳಹರಿವು 1423 ಕ್ಯೂಸೆಕ್ ಹೆಚ್ಚಾಗಿದೆ. ಇಂದು ಮಳೆಯಿಂದಾಗಿ ಆಣೆಕಟ್ಟಿನಲ್ಲಿ ಶೇಕಡಾ 26.58ರಷ್ಟು ನೀರು ಸಂಗ್ರಹವಾಗಿದೆ.
ಇನ್ನೂ ಜಲಾಶಯದಿಂದ ಕಾವೇರಿ ನದಿಗೆ 394 ಕ್ಯೂಸೆಕ್ಸ್ ಹಾಗೂ ಉದ್ದೇಶಿತ ಕಾಲುವೆಗಳಿಗೆ ಎಂದಿನಂತೆ 50 ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಜಲಾಯಶದ ಒಟ್ಟು ಹೊರ ಹರಿವಿನ ಪ್ರಮಾಣ 444 ಕ್ಯೂಸೆಕ್ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ಕೆಆರ್‌ಎಸ್ ಉದ್ಯಾನಕ್ಕೆ ಕಳೆ
ಕೃಷ್ಣ ರಾಜ ಸಾಗರ ಆಣೆಕಟ್ಟು ಪಕ್ಕದಲ್ಲೇ ಬೃಹತ್ ಕೆಆರ್‌ಎಸ್ ಉದ್ಯಾನ ಇದೆ. ಇದು ಮೈಸೂರಿನಿಂದ ಸುಮಾರು 12 ಕಿಲೋ ಮೀಟರ್ ದೂರದಲ್ಲಿದೆ. ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಜಲಾಶಯ ಭರ್ತಿ ಆಗಿದೆ. ಇದರಿಂದ ಈ ಕೆಆರ್‌ಎಸ್ ಉದ್ಯಾನಕ್ಕೂ ಕಳೆ ಬಂದಿದೆ. ನೀರಿನ ಕಾರಂಜಿ, ಲೈಟಿಂಗ್ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಪ್ರವಾಸಿಗರಿಗೆ ಪ್ರದರ್ಶಿಸಲಾಗುತ್ತಿದೆ. ಉದ್ಯಾನಕ್ಕೆ ಆಗಮಿಸುವವರ ಸಂಖ್ಯೆಯು ಹೆಚ್ಚುತ್ತಿದೆ. ಈ ಉದ್ಯಾನ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ತೆರೆದಿರುತ್ತದೆ.
ಜೂನ್ 10ರಿಂದ ನಾಲ್ಕು ದಿನ ರಾಜ್ಯದಲ್ಲಿ ಅತ್ಯಧಿಕ ಮಳೆಯ ವಾತಾವರಣ ನಿರ್ಮಾಣವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ಕರಾವಳಿ ಮೂರು ಜಿಲ್ಲೆ, ಉತ್ತರ ಒಳನಾಡು ಜಿಲ್ಲೆಗಳು ಸೇರಿದಂತೆ ಕೆಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಮುನ್ಸೂಚನೆ ಕೋಡಲಾಗಿದೆ. ಹಿಗಾಗಿ ಮುಂದಿನ ದಿನಗಳಲ್ಲಿ ನದಿ ನೀರು ಇನ್ನಷ್ಟು ತುಂಬಿ ಹರಿಯಲಿವೆ. ಜಲಾಶಯಗಳ ಒಳಹರಿವು ಮತ್ತಷ್ಟು ಹೆಚ್ಚಾಗಲಿದೆ.












Click it and Unblock the Notifications