ಮಳೆಗಾಲ: ಕೊಡವರು ಆತಂಕಪಡುವುದು ಬೇಡ ಎಂದ ಸಾರಾ ಮಹೇಶ್
ಮೈಸೂರು, ಮೇ 17: ಸಿಎಂ ಕುಮಾರಸ್ವಾಮಿಯವರು ಕೊಡಗಿನಲ್ಲಿ ವಾಸ್ತವ್ಯ ಮಾಡುವ ಮೂಲಕ ಕೊಡಗು ಸುರಕ್ಷಿತ ಪ್ರದೇಶ ಎಂಬುದನ್ನು ಜನತೆಗೆ ತೋರಿಸಿಕೊಟ್ಟಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೂಡ ಮಡಿಕೇರಿಯಲ್ಲಿ ವಾಸ್ತವ್ಯ ಹೂಡಿದ್ದರು. ಈ ಮೂಲಕ ಕೊಡಗು ಜಿಲ್ಲೆಯು ಪ್ರವಾಸಿಗರಿಗೆ ಸುರಕ್ಷಿತವಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಮತ್ತೆ ಅನಾಹುತ ಉಂಟಾಗಬಹುದೆಂದು ಕೆಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ ಬಾರಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂಬ ವರದಿಯನ್ನು ವಿಕೋಪ ನಿರ್ವಹಣಾ ವಿಭಾಗ ನೀಡಿದೆ. ಮಡಿಕೇರಿಯಲ್ಲಿ ಹೆಚ್ಚು ಮಳೆ ಬಂದರೆ ಬೆಂಗಳೂರು, ಮೈಸೂರು ಜನರಿಗೆ ಕುಡಿಯಲು ಹಾಗೂ ರೈತರಿಗೆ ನೀರು ಸಿಗುತ್ತದೆ. ಹೀಗಾಗಿ, ಮಳೆ ಬರಲಿ ಎಂದು ಪ್ರಾರ್ಥಿಸೋಣ ಎಂದರು.












Click it and Unblock the Notifications