• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನ ಮೃಗಾಲಯದಲ್ಲಿ ಗಂಡುಹುಲಿ, ಕಾಳಿಂಗ ಸರ್ಪ ಸಾವು

|

ಮೈಸೂರು, ಮಾರ್ಚ್ 2: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಗಂಡುಹುಲಿ ಹಾಗೂ ಕಾಳಿಂಗ ಸರ್ಪ ಸಾವನ್ನಪ್ಪಿದೆ. ಇತ್ತೀಚೆಗಷ್ಟೇ ಮಂಗಳೂರಿನಿಂದ ಇವುಗಳನ್ನು ಮೈಸೂರಿಗೆ ತರಲಾಗಿತ್ತು.

ಪ್ರಾಣಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಗಂಡು ಹುಲಿಯು ಹೃದಯಾಘಾತದಿಂದ ಹಾಗೂ ಕಾಳಿಂಗ ಸರ್ಪ ಯಕೃತ್ ಸಮಸ್ಯೆಯಿಂದ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಹುಲಿ, ಕಾಳಿಂಗ ಸರ್ಪದ ಅನಿರೀಕ್ಷಿತ ಸಾವಿಗೆ ಮೈಸೂರು ಮೃಗಾಲಯದ ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದೆ.

1 ರೂ ಹಾಲು ಖರೀದಿ ದರ ಹೆಚ್ಚಿಸಿದ ಮೈಸೂರು ಒಕ್ಕೂಟ

ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಮಂಗಳೂರಿನ ಪಿಲಿಕುಳ ಬಯಲಾಜಿಕಲ್ ಪಾರ್ಕ್‌ನಿಂದ ಫೆಬ್ರವರಿ 28 ರಂದು ಎರಡು ಜೊತೆ ಕಾಳಿಂಗ ಸರ್ಪ, ಎರಡು ಹುಲಿ, ಎರಡು ಬಾತುಕೋಳಿ ಮತ್ತು ಒಂದು ಜೊತೆ ಉಡವನ್ನು ಮೈಸೂರಿಗೆ ತರಲಾಗಿತ್ತು.

ಮೈಸೂರಿನಲ್ಲಿ ಹಳೇ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನ ರಾಸಲೀಲೆ

ಮೃತ ಪ್ರಾಣಿಗಳ ವಿವಿಧ ಅಂಗಾಂಗಗಳ ಮಾದರಿಗಳನ್ನು ಹೆಚ್ಚಿನ ಅಧ್ಯಯನಕ್ಕಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಮೃಗಾಲಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅರಣ್ಯ ಉಪಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.

English summary
King cobra snake and tiger death in Mysore zoo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X