ಬಾಲಕನಿಗೆ ಎರಡೂ ಕಿಡ್ನಿ ವಿಫಲ : ಸಹಾಯ ಮಾಡಿ

ಎರಡೂ ಮೂತ್ರಕೋಶಗಳ ಬದಲಿಸುವಿಕೆ, ಆಸ್ಪತ್ರೆ ಮತ್ತು ಔಷಧಿಗಳ ಖರ್ಚು, ಡಯಾಲಿಸಿಸ್ ಗಾಗಿ ಪ್ರತಿ ತಿಂಗಳು 25 ಸಾವಿರ ರು. ಸೇರಿದಂತೆ ಒಟ್ಟು 6.85 ಲಕ್ಷ ರು.ಗಳ ಅಗತ್ಯವಿದೆ. ಹೃದಯವಂತ ದಾನಿಗಳು ಹಣದ ಸಹಾಯ ನೀಡಿ ಮಾನವೀಯತೆ ಮೆರೆಯಬೇಕು ಎಂದು ಮಂಡ್ಯದ ನಿವಾಸಿಯಾಗಿರುವ ನವೀನನ ತಾಯಿ ಮಧುಶ್ರೀ ಅವರು ತಿಳಿಸಿದ್ದಾರೆ.
ನವೀನನ ತಂದೆ ಶಂಕರ್ ಅವರು ತೀರಿಕೊಂಡಿದ್ದು, ತಾಯಿ ಮಧುಶ್ರೀ ಅವರು ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಬಳಿ ಮಗನಿಗೆ ಚಿಕಿತ್ಸೆ ಒದಗಿಸಲು ಯಾವುದೇ ಮೂಲಗಳಿಲ್ಲ ಎಂದು ಮಧುಶ್ರೀ ಅವರು ಅಲವತ್ತುಕೊಂಡಿದ್ದಾರೆ. [ಬಡವರಿಗಾಗಿ ಮಿಡಿಯುತ್ತಿರುವ ಹೃದಯವಂತೆ]
ನವೀನನಿಗೆ ಎರಡೂ ಕಿಡ್ನಿಗಳು ವಿಫಲವಾಗಿದ್ದು, ಎರಡನ್ನೂ ಬದಲಿಸಬೇಕೆಂದು ಮೈಸೂರಿನ ಕೃಷ್ಣ ರಾಜೇಂದ್ರ ಮೆಡಿಕಲ್ ಆಸ್ಪತ್ರೆಯ ವೈದ್ಯ ಡಾ. ಮುದ್ದುಕೃಷ್ಣ ಅವರು ಸರ್ಟಿಫಿಕೇಟ್ ನೀಡಿದ್ದಾರೆ. ಬಾಲಕನ ಸ್ಥಿತಿ ತುಂಬಾ ಚಿಂತಾಜನಕವಾಗಿದ್ದು, ಆತನಿಗೆ ಕನಿಷ್ಠ 2 ವರ್ಷಗಳ ಕಾಲ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಹೃದಯವಂತ ದಾನಿಗಳು ಕೆಳಗೆ ನೀಡಿರುವ ಮೊಬೈಲ್ ನಂಬರ್ ನಲ್ಲಿ ವಿಚಾರಿಸಿ, ದೃಢಪಡಿಸಿಕೊಂಡು ನಮೂದಿಸಿರುವ ಬ್ಯಾಂಕ್ ವಿಳಾಸಕ್ಕೆ ಹಣವನ್ನು ಜಮಾ ಮಾಡಬಹುದು. ಈಗಾಗಲೆ ಆತ ಅಧ್ಯಯನ ಮಾಡುತ್ತಿರುವ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಂದಿಷ್ಟು ಹಣವನ್ನು ಕೂಡಿಸಿ ಕೊಟ್ಟಿದ್ದಾರೆ. ಆದರೆ, ಅಷ್ಟು ಹಣ ಸಂಪೂರ್ಣ ಚಿಕಿತ್ಸೆಗೆ ಸಾಕಾಗದ ಕಾರಣ ತಾಯಿ ಸಹಾಯಕ್ಕೆ ಹಸ್ತ ಚಾಚಿದ್ದಾರೆ.
ವಿಳಾಸ : ಮಧುಶ್ರೀ, ಮಣಿಪುರ ಹೌಸ್, ದುಡ್ಡ, ಮಂಡ್ಯ ತಾಲೂಕ್, ಮಂಡ್ಯ ಜಿಲ್ಲೆ, ಕರ್ನಾಟಕ. ಮೊಬೈಲ್ ನಂ. : 97314 76106.
ಬ್ಯಾಂಕ್ ವಿವರ : Madhushree, A/c No : 64099688700, IFSC : SBMY0040035, State Bank of Mysore (Mandya) [ಹಿಂದೂ ಕಿಡ್ನಿ ಮುಸ್ಲಿಂಗೆ, ಮುಸ್ಲಿಂ ಕಿಡ್ನಿ ಹಿಂದೂಗೆ!]












Click it and Unblock the Notifications