Kiccha Sudeep: ಬಡಮಕ್ಕಳೊಂದಿಗೆ ಕಾಲ ಕಳೆದ ಕಿಚ್ಚ ಸುದೀಪ್-ವಿಡಿಯೋ ವೈರಲ್
Kiccha Sudeep: ನಟ ಕಿಚ್ಚ ಸುದೀಪ್ ಅವರು ಇಂದು (ಜೂನ್ 16) ಮೈಸೂರಿನಲ್ಲಿ ಬಡಮಕ್ಕಳೊಂದಿಗೆ ಸಮಯ ಕಳೆದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಅರ್ಜುನವರ ಜ್ಯುವೆಲ್ಲರ್ಸ್ ಅವರ ವತಿಯಿಂದ ಬಡಮಕ್ಕಳು ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ಅವರೊಂದಿಗೆ ತಿಂಡಿ ತಿನ್ನುವ ಭಾಗ್ಯವನ್ನು ಕರುಣಿಸಿದ್ದು, ಮೈಸೂರಿನಲ್ಲಿ ಇಂದು ಆ ಮಕ್ಕಳಿಗೆ ಈ ಭಾಗ್ಯ ದೊರಕಿದೆ.

ಅರ್ಜುನವರ ಜ್ಯುವೆಲ್ಲರ್ಸ್ ಕಡೆಯಿಂದ ಒಂದು ದಿನದ ಈ ಟ್ರಿಪ್‌ನಲ್ಲಿ ನಟ ಸುದೀಪ್ ಅವರು ಮೈಸೂರಿನಲ್ಲಿ ಬಡಮಕ್ಕಳ ಜೊತೆ ಕಾಲ ಕಳೆದಿದ್ದಾರೆ. ಅಲ್ಲಿದ್ದ ಬಡಮಕ್ಕಳಿಗೆ ಸ್ವತಃ ತಾವೇ ತಿಂಡಿಯನ್ನು ತಮ್ಮ ಕೈಯಾರೆ ಕೊಡುತ್ತಿರುವ ನಟ ಕಿಚ್ಚ ಸುದೀಪ್ ಅವರು ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಸಲ್ಲಿದ್ದ ಮಕ್ಕಳು ನಟ ಸುದೀಪ್ ಅವರನ್ನು ಹತ್ತಿರದಿಂದ ನೋಡಿ, ಮುಟ್ಟಿ ಮಾತನಾಡಿಸಿ ಸಂತಸಗೊಂಡಿದ್ದಾರೆ.
Arjunawara Jewellers organised a one day trip to Mysore for underprivileged kids and on their intent to meet @KicchaSudeep anna , breakfast meet was organised with boss!!
— Kiccha Sudeep Trends™ (@TheSudeepTrends) June 16, 2024
Man of million hearts!♥️ #KicchaSudeep #MaxTheMovie pic.twitter.com/b4Wn14Wtlc
ಕಿಚ್ಚ ಸುದೀಪ್ ಅವರು ಸದ್ಯ ಮ್ಯಾಕ್ಸ್ ಸಿನಿಮಾದ ಕೆಲಸಗಳಲ್ಲಿ ಕಾರ್ಯನಿರತರಾಗಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿಯೂ ಈ ಸಿನಿಮಾ ತಂಡ ತೊಡಗಿಸಿಕೊಂಡಿದೆ. ಇದೀಗ ಸಿಕ್ಕ ಅವಧಿಯಲ್ಲೇ ಮ್ಯಾಕ್ಸ್ ಬಳಿಕ ಕಿಚ್ಚ ಸುದೀಪ್ ಯಾವ ಸಿನಿಮಾಕ್ಕೆ ಚಾಲನೆ ನೀಡಲಿದ್ದಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.
ಈ ನಡುವೆಯೇ ಸುದೀಪ್ ಅವರ ಹೊಸ ಸಿನಿಮಾವೊಂದರ ಅಪ್‌ಡೇಟ್ ಕೂಡ ಹೊರಬಿದ್ದಿದ್ದು, ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಡೆಯಲಿದೆ. ನಿರ್ಮಾಪಕ ಎನ್ ಸಂದೇಶ್ ಹಾಗೂ ಅವರ ತಂದೆ ಮತ್ತು ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ಮತ್ತು ಮ್ಯಾಕ್ಸ್ ಹೀರೋ ಸುದೀಪ್ ಮನೆಗೆ ತೆರಳಿ ಸುದೀಪ್ ಅವರನ್ನು ಈಗಾಗಲೇ ಭೇಟಿ ಆಗಿದ್ದಾರೆ.
ಈಗಾಗಲೇ ನಟ ಕಿಚ್ಚ ಸುದೀಪ್ ಜೊತೆಗಿನ ಫೋಟೋ ಶೇರ್ ಮಾಡಿರುವ ಸಂದೇಶ್, ಸಂದೇಶ್ ಪ್ರೊಡಕ್ಷನ್ಸ್‌ನಿಂದ ಕುತೂಹಲಕಾರಿ ಸಂತಸದ ವಿಚಾರ ಹೊರಬರಲಿದೆ. ಅಲ್ಲದೆ ಫೆಂಟಾಸ್ಟಿಕ್ ನ್ಯೂಸ್ ಬಂದೇ ಬರುತ್ತದೆ ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಕಿಚ್ಚನ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಸಂದೇಶ್ ಅವರು ನಟ ಸುದೀಪ್ ಅವರನ್ನು ಚೆನ್ನೈನಲ್ಲಿ ಭೇಟಿಯಾಗಿದ್ದರು ಎಂಬ ಬಗ್ಗೆ ಈ ಹಿಂದೆ ಸಿನಿಮಾ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ಸಂದೇಶ್ ಪ್ರೊಡಕ್ಷನ್ ಸಿನಿಮಾದಲ್ಲಿ ಕಿಚ್ಚ ಅಭಿನಯಿಸುವ ಬಗ್ಗೆ ತಿಳಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆದರೆ ಈ ಸಿನಿಮಾದಲ್ಲಿ ಹಲವು ಬಹುಭಾಷಾ ನಟರು ಕೂಡ ನಟನೆ ಮಾಡಲಿದ್ದಾರೆ.
ಮುಂಬರುವ ಸುದೀಪ್ ಅವರ ಸಿನಿಮಾಗೆ ಹೇಮಂತ್ ಎಂ.ರಾವ್ ನಿರ್ದೇಶನ ಮಾಡುವ ಸಾಧ್ಯತೆ ಬಗ್ಗೆ ಸಂದೇಶ್ ಸುಳಿವು ನೀಡಿದ್ದಾರೆ. ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ನಿರ್ದೇಶನದ ಮೂಲಕವೇ ಗಮನ ಸೆಳೆದ ಯುವ ನಿರ್ದೇಶಕರಲ್ಲಿ ಹೇಮಂತ್ ಎಂ ರಾವ್ ಕೂಡ ಒಬ್ಬರಾಗಿದ್ದಾರೆ.
ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತಸಾಗರದಾಚೆ ಎಲ್ಲೋ ಸೈಡ್ 1 ಮತ್ತು ಸೈಡ್ 2 ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ನೆಲದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಈ ನಿರ್ದೇಶಕ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಇನ್ನು ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.












Click it and Unblock the Notifications