ಕೇರಳ ಬಸ್‌ನಲ್ಲಿ 2 ಕೋಟಿ ದರೋಡೆ, ಸಿಐಡಿ ತನಿಖೆ ಪೂರ್ಣ

ಬೆಂಗಳೂರು, ಜೂ. 29 : 2014ರಲ್ಲಿ ನಡೆದ ಕೇರಳ ಬಸ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿದ್ದು, ವರದಿಯನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಭಾಗಿಯಾದ ದಡೋರೆ ಪ್ರಕರಣವಿದಾಗಿದೆ.

ದರೋಡೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ತನ್ನ ವರದಿಯನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರಿಗೆ ಸಲ್ಲಿಕೆ ಮಾಡಿದೆ. ವರದಿ ನೋಡಿದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಅವರು ಓಂ ಪ್ರಕಾಶ್ ಅವರು, ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. [2 ಕೋಟಿ ದರೋಡೆ : ಎಸ್ಐ ಸೇರಿ ಮೂವರ ಬಂಧನ]

money

ಪ್ರಕರಣದ ವಿವರ : 2014ರ ಜನವರಿಯಲ್ಲಿ ಕೇರಳಕ್ಕೆ ಹೋಗುತ್ತಿದ್ದ ಖಾಸಗಿ ಬಸ್ಸಿನಲ್ಲಿ ದಾಖಲೆ ರಹಿತವಾದ 2.25ಕೋಟಿ ಹಣ ಪತ್ತೆಯಾಗಿತ್ತು. ಬಸ್ಸಿನ ತಪಾಸಣೆ ನಡೆಸಿದ ಎಸ್‌ಐ ಜಗದೀಶ್‌ ನೇತೃತ್ವದ ಪೊಲೀಸರ ತಂಡ ಹಣವನ್ನು ವಶಪಡಿಸಿಕೊಂಡಿತ್ತು, ಎಫ್ಐಆರ್‌ನಲ್ಲಿ ಪತ್ತೆಯಾದ ಹಣ 20 ಲಕ್ಷ ಎಂದು ನಮೂದಿಸಿತ್ತು. [ಸಿಐಡಿ ತನಿಖೆ ಹೇಗೆ ನಡೆಯುತ್ತೆ?]

ಆದರೆ, ಕೇರಳ ಮೂಲದ ಉದ್ಯಮಿಯೊಬ್ಬರು ಬಸ್ಸಿನಲ್ಲಿ 2.26 ಕೋಟಿ ಹಣವಿತ್ತು, ಪ್ರಕರಣದ ಬಗ್ಗೆ ಪೊಲೀಸರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಗಮನಕ್ಕೆ ತಂದಿದ್ದರು. ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು.

ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಗ್ರಾಮಾಂತರ ಠಾಣೆಯ ಎಸ್‌ಐ ಜಗದೀಶ್‌, ಪೇದೆಗಳಾದ ಮನೋಹರ ಹಾಗೂ ರವಿ, ಪೊಲೀಸ್‌ ಮಾಹಿತಿದಾರ ಅಬ್ದುಲ್‌ ಸಲೀಂ, ಷರೀಫ್‌, ಮುಸ್ತಫಾ, ದಕ್ಷಿಣ ವಲಯದ ಐಜಿಪಿ ಗನ್‌ಮ್ಯಾನ್‌ ಪ್ರಕಾಶ್‌ ಸೇರಿದಂತೆ 10 ಜನರನ್ನು ಬಂಧಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+