ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮೈಸೂರು ದಸರಾ ಪ್ರವಾಸ ಪ್ಯಾಕೇಜ್: ಇಲ್ಲಿದೆ ಮಾಹಿತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್‌, 01: ಮೈಸೂರು ದಸರಾ ವೀಕ್ಷಿಸಲು ರಾಜ್ಯಾದಾದ್ಯಂತ ವಿವಿಧೆಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು 'ದಸರಾ ಟೂರ್' ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದೆ.

ಮೈಸೂರು ಸಾಂಸ್ಕೃತಿಕ ನಗರಿ, ಅರಮನೆ ನಗರಿ ಜೊತೆಗೆ ಪ್ರವಾಸಿತಾಣ ಅಂತಲೂ ಹೆಸರುವಾಸಿ ಆಗಿದೆ. ಮೈಸೂರಿಗೆ ದಸರಾ ವೇಳೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಬೇರೆ ದಿನಗಳಲ್ಲಿ 15 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಅರಮನೆಗೆ ಆಗಮಿಸಿದರೆ, 10 ಸಾವಿರಕ್ಕೂ ಹೆಚ್ಚು ಜನರು ಮೃಗಾಲಯಕ್ಕೆ ಭೇಟಿ ನೀಡುತ್ತಾರೆ. ಮೈಸೂರಿನಲ್ಲಿ ಚಾಮುಂಡಿ ಬೆಟ್ಟ, ಕಾರಂಜಿಕೆರೆ, ಮೃಗಾಲಯ, ಕೆಆರ್‌ಎಸ್, ಅರಮನೆ ಸೇರಿದಂತೆ ನಾನಾ ಪ್ರವಾಸಿ ತಾಣಗಳಿವೆ. ಮಹಾಮಾರಿ ಕೊರೊನಾ ಕಾರಣ ಕಳೆದ ಎರಡು ವರ್ಷಗಳಿಂದ ದಸರಾ ಮಹೋತ್ಸವವನ್ನು ಸರಳವಾಗಿ ಆಚರಣೆ‌ ಮಾಡಲಾಗಿತ್ತು. ಆದರೆ ಈ ಬಾರಿ ಮಹಾಮಾರಿ ಕೊರೊನಾ ಅಟ್ಟಹಾಸ ತಗ್ಗಿದ ಕಾರಣ ಅದ್ಧೂರಿಯಾಗಿ ದಸರಾ ಆಚರಣೆಗೆ ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಪ್ರವಾಸೋದ್ಯಮವನ್ನು ಬೂಸ್ಟ್ ಮಾಡುವುದರ ಜೊತೆಗೆ, ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಕೆಎಸ್‌ಟಿಡಿಸಿಯಿಂದ ರಾಜ್ಯ, ಅಂತಾರಾಜ್ಯ ಸಂಪರ್ಕಿಸುವ 13 ಟೂರಿಂಗ್‌ ಪ್ಯಾಕೇಜ್‌ ಅನ್ನು ಘೋಷಿಸಿದೆ.

ಮೈಸೂರು ದಸರಾ: ಮನೆ, ಮನೆಗಳಲ್ಲಿ ಬೊಂಬೆಗಳ ದರ್ಬಾರ್!ಮೈಸೂರು ದಸರಾ: ಮನೆ, ಮನೆಗಳಲ್ಲಿ ಬೊಂಬೆಗಳ ದರ್ಬಾರ್!

 ದಸರಾ ಟೂರ್' ವಿಶೇಷ ಪ್ಯಾಕೇಜ್

ದಸರಾ ಟೂರ್' ವಿಶೇಷ ಪ್ಯಾಕೇಜ್

ಮೊದಲ ಬಾರಿಗೆ ಸೆಪ್ಟೆಂಬರ್‌ನಲ್ಲೇ ಪ್ರವಾಸ ಆಯೋಜಿಸಲು ಕೆಎಸ್‌ಟಿಡಿಸಿ ಚಿಂತನೆ‌ ನಡೆಸಿದೆ. ದಸರಾ ಉತ್ಸವವನ್ನು ವೀಕ್ಷಿಸಲು ಬಂದವರಿಗೆ ರಾಜ್ಯದ ಪ್ರವಾಸಿ ತಾಣಗಳನ್ನು ಪರಿಚಯಿಸುವ ವಿಶೇಷ ಟೂರ್ ಪ್ಯಾಕೇಜ್ ಇದಾಗಿದೆ. ರಾಜ್ಯದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ.‌‌ ದಸರಾ ನೆಪದಲ್ಲಿ ಎಲ್ಲಾ ಪ್ರವಾಸಿ ತಾಣಗಳನ್ನು ದರ್ಶನ ಮಾಡಿಸುವುದು ಈ ಯೋಜನೆಯ ಉದ್ದೇಶ ಆಗಿದೆ. ಎಲ್ಲಾ ಟೂರ್ ಪ್ಯಾಕೇಜ್‌ಗಳು ಮೈಸೂರಿನಿಂದಲೇ ಆರಂಭ ಆಗುತ್ತವೆ. ಇದಕ್ಕೆ ಆನ್‌ಲೈನ್‌, ಆಫ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು. ಸಿದ್ದಲಿಂಗಸ್ವಾಮಿ ತಿಳಿಸಿದರು.

 ಪ್ರವಾಸದ ಸಮಯ ನಿಗದಿ

ಪ್ರವಾಸದ ಸಮಯ ನಿಗದಿ

ಸಿಗಂದೂರು ಚೌಡೇಶ್ವರಿ, ಮಂತ್ರಾಲಯ, ಗೋವಾ, ಸೋಮನಾಥಪುರ, ಮುಡುಕುತೊರೆ, ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಬೈಲುಕುಪ್ಪೆ, ಕಾವೇರಿ ನಿಸರ್ಗಧಾಮ, ಅಬ್ಬಿ ಫಾಲ್ಸ್, ರಾಜಾಸೀಟ್, ಭಾಗಮಂಡಲ, ತಲಕಾವೇರಿ, ದುಬಾರೆ ಆನೆ ಶಿಬಿರ, ಊಟಿ, ಬಟಾನಿಕಲ್ ಗಾರ್ಡನ್ ಹಾಗೂ ದೊಡ್ಡ ಬೆಟ್ಟ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿ.ಆರ್.ಹಿಲ್ಸ್, ಮೇಲುಕೋಟೆ, ಎಡೆಯೂರು, ಆದಿಚುಂಚನಗಿರಿ ಇತ್ಯಾದಿ ಪ್ರವಾಸಿ ತಾಣಗಳಿವೆ. ಒಂದರಿಂದ ನಾಲ್ಕು ದಿನದವರೆಗೂ ಟ್ರಿಪ್‌ಗೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 7ಕ್ಕೆ ಹೊರಟು ರಾತ್ರಿ 9ಕ್ಕೆ ವಾಪಸಾಗುವುದು ಒಂದು ದಿನದ ಪ್ರವಾಸ ಆಗಿದೆ. ಇದನ್ನು ಹೊರತುಪಡಿಸಿ ಎರಡು, ಮೂರು, ನಾಲ್ಕು ದಿನದ ಪ್ರವಾಸ ಕೈಗೊಂಡು ತಂಗುವವರಿಗೆ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕೆ ತಕ್ಕಂತೆ ದರ ನಿಗದಿ ಮಾಡಲಾಗಿದೆ.

 ಮೂರು ದಿನಕ್ಕೆ ತಗಲುವ ವೆಚ್ಚ

ಮೂರು ದಿನಕ್ಕೆ ತಗಲುವ ವೆಚ್ಚ

ರಾತ್ರಿ 9ಕ್ಕೆ ಮೈಸೂರಿನಿಂದ ಹೊರಟು ಜೋಗ, ಸಿಗಂದೂರು ವೀಕ್ಷಣೆ ಬಳಿಕ ಬೆಳಗ್ಗೆ 6ಕ್ಕೆ ವಾಪಸ್‌ ಬರಲಾಗುತ್ತದೆ. ಮೂರು ದಿನಗಳ ಪ್ರವಾಸಕ್ಕೆ 2,145 ರೂಪಾಯಿಯನ್ನು ನಿಗದಿ ಮಾಡಲಾಗಿದೆ.

 ಪ್ರವಾಸಕ್ಕೆ ತಗಲುವ ವೆಚ್ಚ

ಪ್ರವಾಸಕ್ಕೆ ತಗಲುವ ವೆಚ್ಚ

ಬೆಳಗ್ಗೆ 6:30ಕ್ಕೆ ಮೈಸೂರಿನಿಂದ ಹೊರಟು ನಂಜುಂಡೇಶ್ವರ ದರ್ಶನ, ಊಟಿಯಲ್ಲಿ 2 ದಿನ, ಕೊಡೈಕೆ ನಾಲ್‌ನಲ್ಲಿ 1 ದಿನ ತಂಗುವುದು. ರಾತ್ರಿ ಹೊರಟು ಬೆಳಗ್ಗೆ 6ಕ್ಕೆ ವಾಪಸಾಗಲಾಗುವುದು. ಇದಕ್ಕೆ 5,075 ರೂಪಾಯಿ ದರವನ್ನು ನಿಗದಿ ಮಾಡಲಾಗಿದೆ.


ಮೈಸೂರಿನಿಂದ ಸಂಜೆ 5ಕ್ಕೆ ಹೊರಟು ಬೆಳಗ್ಗೆ 7ಕ್ಕೆ ಮಂತ್ರಾಲಯ, ಟಿಬಿ ಡ್ಯಾಮ್‌, ನಂತರ ಹಂಪಿಯಲ್ಲಿ ತಂಗಲಾಗುವುದು. ರಾತ್ರಿ ಹೊರಟು ಬೆಳಗ್ಗೆ 6ಕ್ಕೆ ವಾಪಸಾಗುವುದು. ಈ ಪ್ರವಾಸಕ್ಕೆ 4,382 ರೂಪಾಯಿ ದರವನ್ನು ನಿಗದಿ ಮಾಡಲಾಗಿದೆ. ಮೈಸೂರಿನಿಂದ ರಾತ್ರಿ 8ಕ್ಕೆ ಹೊರಟು ಜೋಗ ಜಲಪಾತ ನಂತರ ಫ್ರೆಶ್ ಅಪ್ ಆಗಲು ವ್ಯವಸ್ಥೆ ಮಾಡಲಾಗುತ್ತದೆ. ಗೋಕರ್ಣ ಪ್ರವಾಸ ಮುಗಿಸಿ ಗೋವಾದಲ್ಲಿ 2 ದಿನ ತಂಗಲು ವ್ಯವಸ್ಥೆ ಮಾಡಲಾಗಿದೆ. ನಂತರ ಗೋವಾದಿಂದ ರಾತ್ರಿ ಹೊರಟು ಬೆಳಗ್ಗೆ 7ಕ್ಕೆ ಮೈಸೂರಿಗೆ ವಾಪಸ್‌ ಬರಲಾಗುತ್ತದೆ. ಐದು ದಿನದ ಪ್ರವಾಸಕ್ಕೆ 6,358 ರೂಪಾಯಿ ದರವನ್ನು ಫಿಕ್ಸ್ ಇದೆ.

English summary
Karnataka’s Department of Tourism has announced Dasara Special Tour Packages to promote the state festival. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X