ರಾಜ್ಯ ಸರಕಾರದಿಂದ ಕೇಂದ್ರದ ಬಗ್ಗೆ ಅಪಪ್ರಚಾರ: ಪಿಯೂಷ್ ಗೋಯಲ್
ಮೈಸೂರು, ಆಗಸ್ಟ್ 19:- ಕೇಂದ್ರದ ಯೋಜನೆಗಳನ್ನು ರಾಜ್ಯ ಸರ್ಕಾರ ತನ್ನದೆಂದು ಹೇಳಿಕೊಂಡು ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಆರೋಪಿಸಿದರು.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್.ಇ.ಡಿ ಬಲ್ಬ್ ಗಳನ್ನು ಅಗ್ಗದ ದರಕ್ಕೆ ವಿತರಣೆ ಮಾಡುವ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಆದರೆ ರಾಜ್ಯ ಸರ್ಕಾರ ಇದಕ್ಕೆ ಹೊಸಬೆಳಕು ಯೋಜನೆ ಎಂದು ಹೆಸರಿಟ್ಟಿದೆ. ರಾಯಭಾರಿಗಳನ್ನು ನೇಮಕ ಮಾಡಿಕೊಂಡು ಕೇಂದ್ರದ ಯೋಜನೆ ತನ್ನದೆಂದು ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ದೂರಿದರು.

ಇದೀಗ ದೇಶದಾದ್ಯಂತ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಆದರೂ ಲಭ್ಯವಿರುವ ವಿದ್ಯತ್ತನ್ನು ಖರಿದೀಸಿ ಜನತೆಗೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.












Click it and Unblock the Notifications