ಸಿದ್ದರಾಮಯ್ಯ ಗೆಲುವಿಗಾಗಿ ಮುಡಿಕೊಟ್ಟ ಚಾಮುಂಡೇಶ್ವರಿ ಕಾರ್ಯಕರ್ತರು
ಮೈಸೂರು, ಮೇ 5 : ರಾಜ್ಯದ ಹೈವೋಲ್ಟೇಜ್ ಕ್ಷೇತ್ರವೆಂದೇ ಹೆಸರಾದ ಚಾಮುಂಡೇಶ್ವರಿ ಯಲ್ಲಿ ಸಿಎಂ ಸಿದ್ದರಾಮಯ್ಯ ಗೆಲುವಿಗಾಗಿ ಕಾರ್ಯಕರ್ತರು ಮುಡಿ ಕೊಟ್ಟ ಘಟನೆ ನಡೆದಿದೆ.
ನಮ್ಮ ನಿಷ್ಠೆ ಸಿಎಂಗಾಗಿ ಮುಡಿಪು ಎಂದು ಕಾರ್ಯಕರ್ತರು ತಿಳಿಸಿದ್ದು, ಎರಡು ಕ್ಷೇತ್ರಗಳಲ್ಲಿ ಸಿಎಂ ಗೆಲುವಿಗಾಗಿ ಮುಡಿ ಹರಕೆಯನ್ನೊಪ್ಪಿಸುತ್ತಿದ್ದಾರೆ. ರಮಾಬಾಯಿ ನಗರದ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯನವರಿಗೆ ಗೆಲುವಾಗಲೆಂದು ಮುಡಿಕೊಡುತ್ತಿದ್ದಾರೆ. ವಿಭಿನ್ನವಾಗಿ ಹರಕೆಯನ್ನೊಪ್ಪಿಸುತ್ತಿದ್ದಾರೆ.

ಇತ್ತ ಚಾಮುಂಡೇಶ್ವರಿಯಲ್ಲಿ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿನ ಚಾಮುಂಡೇಶ್ವರಿ ಸಹೋದರಿ ಬನಶಂಕರಿ ಭಾವಚಿತ್ರವಿಟ್ಟು ಮಹಿಳಾ ಕಾರ್ಯಕರ್ತರು ಸಿಎಂಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ಕಳಶ ಹೊತ್ತು ಸಿಎಂ ಗೆಲ್ಲಲೂ ವಿಶೇಷ ಪೂಜೆ ಸಹ ನೆರವೇರಿಸಿದರು.












Click it and Unblock the Notifications