Mobile Thrown At PM Modi : ಪ್ರಧಾನಿ ಮೋದಿ ರೋಡ್ ಶೋನಲ್ಲಿ ಹೂವು ಬದಲು ಮೊಬೈಲ್ ಎಸೆದ ಅಪರಿಚಿತ: ಭದ್ರತಾ ಲೋಪ
ಮೈಸೂರು, ಏಪ್ರಿಲ್ 30: ಕರ್ನಾಟಕ ಸಾರ್ವತ್ರಿಕ ಚುನಾವಣೆ ಅಂಗವಾಗಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ಲಕ್ಷಾಂತರ ಜನರ ಮಧ್ಯೆ ಭರ್ಜರಿ ರೋಡ್ ನಡೆಸಿದ್ದಾರೆ. ಪ್ರಚಾರದ ಈ ವೇಳೆ ಭದ್ರತಾ ಲೋಪ ಉಂಟಾಗಿದ್ದು, ಅಪರಿಚಿತ ವ್ಯಕ್ತಿಯೊಬ್ಬರು ಮೊಬೈಲ್ ಎಸೆದ ಘಟನೆ ನಡೆದಿದೆ.
ಮೈಸೂರಿನ ವಿದ್ಯಾಪೀಠದಿಂದ ಹೈವೇ ವೃತ್ತದ ಬಳಿ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಸಂಜೆ ರೋಡ್ ಶೋ ನಡೆಸಿ ಅವರು ಬಿಜೆಪಿ ಪರ ಮತಯಾಚಿಸಿದರು. ಈ ಮೂಲಕ ಬಿಜೆಪಿಯ ಶಕ್ತಿ ಪ್ರದರ್ಶಿಸಿದರು. ಪ್ರಚಾರ ಕಾರ್ಯದ ವೇಳೆ ರಸ್ತೆ ಬದಿ ಜನಸ್ತೋಮವೇ ಕಂಡು ಬಂತು. ಎಲ್ಲರೂ ಮೋದಿ ಮೋದಿ ಎಂದು ಜೈ ಕಾರ ಕೂಗುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಮೊಬೈಲ್ ಅನ್ನು ಎಸೆದ ಘಟನೆ ನಡೆದಿದೆ.

ರೋಡ್ ಶೋಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲೆ ಹೂವುಗಳನ್ನು ಎಸೆಯುವುದು ಸಾಮಾನ್ಯವಾಗಿತ್ತು. ಆದರೆ ವಾಹನದ ಮೇಲೆ ನಿಂತ ಪ್ರಧಾನಿಯತ್ತ ಮೊಬೈಲ್ ಎಸೆದಿರುವುದು ಕರ್ನಾಟಕದ ಮಟ್ಟಿಗೆ ಇದೆ ಮೊದಲು. ಈ ಮೂಲಕ ಪ್ರಧಾನಿ ರ್ಯಾಲಿಯಲ್ಲಿ ಭದ್ರತಾ ಲೋಪ ಉಂಟಾಗಿದೆ.
ಸ್ಥಳದಲ್ಲಿದ್ದ ಕೆಲವು ಪ್ರಧಾನಿ ಬರುತ್ತಿದ್ದ ವಾಹನದ ಪಕ್ಕದಲ್ಲೇ ರಸ್ತೆಗಳಲ್ಲಿ ನಿಂತು ಜನರು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದಾರೆ. ಆದರೆ ಸದ್ಯ ಸೆರೆ ಸಿಕ್ಕ ವಿಡಿಯೋದಲ್ಲಿ ಮಾತ್ರ ಪ್ರಧಾನಿಯತ್ತ ಎಸೆದ ಮೊಬೈಲ್ ಮಾತ್ರ ಕಾಣಿಸಿದೆ. ಆದರೆ ಯಾರು ಎಸೆದವರು, ಆತನನ್ನು ಪೊಲೀಸರು ವಿಚಾರಿಸಿದರಾ, ಯಾವ ಉದ್ದೇಶದಿಂದ ಮೊಬೈಲ್ ಎಸೆಯಲಾಯಿತು ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬರಬೇಕಿದೆ.

ಇದು ಮೊದಲ ಘಟನೆ?
ಕಳೆದ ವಾರವಷ್ಟೇ ಬೇರೆ ರಾಜ್ಯದಲ್ಲಿ ಪ್ರಧಾನಿ ಹೀಗೆ ರೋಡ್ ನಡೆಸುತ್ತಿದ್ದರು. ರಸ್ತೆ ನಡೆದುಕೊಂಡು ಹೋಗುವಾಗ ಪಕ್ಕದಲ್ಲೇ ಬ್ಯಾರಿಕೇಡ್ ಪಕ್ಕ ನಿಂತಿದ್ದ ಜನರು ಹೂವುಗಳನ್ನು ಪ್ರಧಾನಿ ಮೇಲೆ ಮತ್ತು ಅವರು ಬರುವ ದಾರಿಯಲ್ಲಿ ಎಸೆಯುತ್ತಿದ್ದರು. ಈ ವೇಳೆ ಸಹ ಹೂವಿನ ಜೊತೆಗೆ ಮೊಬೈಲ್ ಎಸೆದಿದ್ದ ವಿಡಿಯೋ ವೈರಲ್ ಆಗಿತ್ತು. ಆಗ ಮೊಬೈಲ್ ಪ್ರಧಾನಿಯತ್ತ ಬರುವುದನ್ನು ಭದ್ರತಾ ಕಮಾಂಡರ್ ತಡೆದಿದ್ದರು.












Click it and Unblock the Notifications