Shiva Rajkumar: ಸಿದ್ದರಾಮಯ್ಯ ಆಡಳಿತದ ಬಗ್ಗೆ ವರುಣದಲ್ಲಿ ನಟ ಶಿವರಾಜ್‌ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ, ಇಲ್ಲಿದೆ ವಿವರ
ಮೈಸೂರು, ಮೇ, 05: ರಾಜ್ಯ ವಿಧಾನಸಭೆ ಚುನವಾಣೆ ಹಿನ್ನೆಲೆ ಇಂದು ಗುರುವಾರ ಹೈವೋಲ್ಟೇಜ್ ಕ್ಷೇತ್ರವಾದ ವರುಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಭರ್ಜರಿ ರೋಡ್ ಶೋ ನಡೆಸಿ ಗಮನ ಸೆಳೆದರು, ಇನ್ನು ಇದೇ ವೇಳೆ ನಟ ಶಿವಣ್ಣ ತಮ್ಮ ಹಳೆ ದಿನಗಳನ್ನು ಸ್ಮರಿಸಿದರು.
ದಿನದಿನದಿಂದ ದಿನಕ್ಕೆ ವರುಣಾ ಕ್ಷೇತ್ರ ರಂಗೇರುತ್ತಿದೆ. ಸಿಎಂ ಸಿದ್ದರಾಮಯ್ಯ ತಮ್ಮ ಕ್ಷೇತ್ರ ವರುಣಾದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಸಿದ್ದರಾಮಯ್ಯ ಅವರಿಗೆ ನಟ ಶಿವರಾಜ್‌ಕುಮಾರ್ ಸಾಥ್ ನೀಡಿದ್ದಾರೆ.
ನಂತರ ಮಾತನಾಡಿದ ಶಿವರಾಜ್‌ಕುಮಾರ್, "ಸಿದ್ದರಾಮಯ್ಯಗೂ ನಮಗೂ ಅನೇಕ ವರ್ಷಗಳ ಒಡನಾಟ ಇದೆ. ಅಪ್ಪಾಜಿ ಬದುಕಿದ್ದಾಗಲೂ ನಿರಂತರ ಸಂಪರ್ಕ ಇತ್ತು. ಅವರ ಪರ ಪ್ರಚಾರ ಮಾಡಿರುವುದು ಸಂತಸ ತಂದಿದೆ. ಅಲ್ಲದೆ ಅವರು ದೂರದೃಷ್ಟಿಯಿಂದ ಸಾಕಷ್ಟು ಯೋಜನೆಗಳನ್ನು ಕೊಟ್ಟಿದ್ದಾರೆ. ಇದರಿಂದ ಜನರಿಗೆ ಒಳ್ಳೆದಾಗಿದೆ," ಎಂದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, 2008 ಮತ್ತು 2013ರಲ್ಲಿ ನಿಮ್ಮ ಆಶೀರ್ವಾದದಿಂದಲೇ ಗೆಲುವು ಸಾಧಿಸಿದ್ದೇವೆ. ಈ ಬಾರಿ ಆಶೀರ್ವಾದಿಸಿದರೇ ನನಗೆ ದೊಡ್ಡ ಶಕ್ತಿ ಬಂದಂತಾಗುತ್ತದೆ. ವರುಣಾವನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನನ್ನ ವಿರುದ್ದ ಬೆಂಗಳೂರು ಅಭ್ಯರ್ಥಿಯನ್ನು ತಂದು ನಿಲ್ಲಿಸಿದ್ದಾರೆ. ನಾನು ಸಿಎಂ ಆಗದ್ದಾಗ ಆ ಧರ್ಮ ಈ ಧರ್ಮ ಅಂತಾ ನೋಡಿಲ್ಲ, ಎಲ್ಲಾ ಧರ್ಮದವರಿಗೂ ಕೆಲಸ ಮಾಡಿದ್ದೇನೆ. ಬೇರೆಯವರು ಬಂದು ವರುಣಾದಲ್ಲಿ ಅಭಿವೃಧ್ದಿ ಮಾಡುವುದಕ್ಕೆ ಆಗುವುದಿಲ್ಲ ಎಂದರು.
ಬಿಜೆಪಿಗೆ ಬಹುಮತ ನಿಶ್ಚಿತ
ಹಾಗೆಯೇ ಈ ಬಾರಿಯ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಸಂಸದ ಡಿ.ವಿ.ಸದಾನಂದಗೌಡ ತಿಳಿಸಿದರು.
ಗುರುವಾರ ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರ ಚುನಾವಣೆಯಲ್ಲಿ 110, 2013ರ ಚುನಾವಣೆಯಲ್ಲಿ ನಮಲ್ಲಿನ ವ್ಯತ್ಯಾಸದಿಂದ ಬಹುಮತ ಬರಲಿಲ್ಲ. 2018ರಲ್ಲೂ 104 ಸ್ಥಾನಗಳು ಬಿಜೆಪಿಗೆ ಲಭಿಸಿದವು. 2023ರ ಚುನಾವಣೆಯಲ್ಲಿ 130 ಸ್ಥಾನಗಳು ಬಿಜೆಪಿಗೆ ದೊರೆಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲು ಪ್ರಧಾನಿ ನರೇಂದ್ರ ಮೋದಿಯವರ ಹಾದಿಯಾಗಿ ಎಲ್ಲ ನಾಯಕರು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಯಾರ ಹಂಗಿಲ್ಲದೇ ಸರ್ಕಾರ ರಚಿಸುತ್ತೇವೆ. 120-130 ಸ್ಥಾನಗಳನ್ನು ಗೆಲ್ಲಲು ಚುನಾವಣಾ ತಂತ್ರಗಳನ್ನು ಹೆಣೆದಿದ್ದೇವೆ ಎಂದು ಹೇಳಿದರು. ಅಲ್ಲದೆ ಚುನಾವಣೆಗಳು ಬರೀ ಘೋಷಣೆ, ಭರವಸೆಗಳ ಮೇಲೆ ನಡೆಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಭರವಸೆ, ಆಶ್ವಾಸನೆ ಆಧಾರದಲ್ಲಿ ಚುನಾವಣೆಗಳು ನಡೆಯಬಾರದು. ಈ ದೇಶ ಹಾಗೂ ರಾಜ್ಯವನ್ನು ಕಾಂಗ್ರೆಸ್ 60 ವರ್ಷಗಳ ಕಾಲ ಆಡಳಿತ ನಡೆಸಿದೆ. ಜೆಡಿಎಸ್ 10 ವರ್ಷಗಳ ಕಾಲ ಆಳ್ವಿಕೆ ನಡೆಸಿದೆ. ಬಿಜೆಪಿ 9 ವರ್ಷಗಳ ಕಾಲ ಅಧಿಕಾರ ನಡೆಸಿದೆ. ಈ ಮೂರು ಪಕ್ಷಗಳು ಎಷ್ಟು ಭರವಸೆಗಳನ್ನು ಜನರಿಗೆ ನೀಡಿದ್ದವು. ಎಷ್ಟನ್ನು ಈಡೇರಿಸಿವೆ ಎಂಬುದರ ಬಗ್ಗೆ ರಿಪೋರ್ಟ್ ಕಾರ್ಡನ್ನು ಜನರ ಮುಂದಿಟ್ಟು ಮತಯಾಚನೆ ಮಾಡೋಣ ಎಂದರು.
ರಿಪೋರ್ಟ್ ಕಾರ್ಡ್‌ಗಳನ್ನು ಮೌಲ್ಯ ಮಾಪನ ಮಾಡಲಿ, ತಮಗೆ ಯಾವ ಸರ್ಕಾರ ಬೇಕು ಎಂದು ಜನರೇ ತೀರ್ಮಾನ ಮಾಡಲಿ. ಆ ಮೂಲಕ ಹೊಸದೊಂದು ಚುನಾವಣೆಯ ದಿಕ್ಕನ್ನು ನೀಡೋಣ. ಈ ಚುನಾವಣೆಯನ್ನು ಪ್ರಜಾತಂತ್ರ ಮೌಲ್ಯದ ಆಶಯದಲ್ಲಿ ನಡೆಸಲು ಬಿಜೆಪಿ ಬದ್ಧವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡ ಇದಕ್ಕೆ ಬದ್ಧರಾಗಬೇಕು ಎಂದು ನುಡಿದರು.
ಕಾಂಗ್ರೆಸ್ ಜನರ ಮುಂದೆ ಬರೀ ಘೋಷಣೆ, ಭರವಸೆಯ ಗ್ಯಾರಂಟಿ ಕಾರ್ಡ್‌ಗಳನ್ನು ಮಾತ್ರ ಇಡಬಾರದು. ಕಳೆದ 60 ವರ್ಷಗಳ ಆಡಳಿತದಲ್ಲಿ ಏನೇನು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಎಷ್ಟೊಂದು ಭರವಸೆಗಳನ್ನು ಈಡೇರಿಸಿದ್ದೇವೆ, ಯಾವೆಲ್ಲಾ ಭರವಸೆಗಳನ್ನು ಈಡೇರಿಸಿಲ್ಲ ಎಂಬುದರ ಬಗ್ಗೆಯೂ ರಿಪೋರ್ಟ್ ಕಾರ್ಡ್ ಅನ್ನು ಜನರ ಮುಂದಿಡಬೇಕು ಎಂದರು.
ರಾಜಕೀಯವನ್ನು ಹೆಚ್ಚಾಗಿ ದುರ್ಬಳಕೆ ಮಾಡಿಕೊಂಡಿದ್ದು ಕಾಂಗ್ರೆಸ್, ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದ್ದು ಕಾಂಗ್ರೆಸ್ ಸರ್ಕಾರದಿಂದಲೇ. ಶೇಕಡಾ 85ರಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆ ಪಕ್ಷದ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರೇ ಒಪ್ಪಿಕೊಂಡಿದ್ದರು. ಆದರೆ ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರ ಶೇಕಡಾ 40 ಕಮಿಷನ್ ಭ್ರಷ್ಟಚಾರ ಸರ್ಕಾರ ಎಂದು ಸುಮ್ಮನೆ ಆರೋಪಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳನ್ನು ನೀಡುತ್ತಿಲ್ಲ ಎಂದು ಹರಿಹಾಯ್ದರು.












Click it and Unblock the Notifications