ಮೈಸೂರಿಗೆ ಒಲಿದ ಕರ್ನಾಟಕ ಚಲನಚಿತ್ರ ಕಪ್ ಪಂದ್ಯಾವಳಿ ಆತಿಥ್ಯ

ಮೈಸೂರು, ಜುಲೈ 30: 2019ರ ಕರ್ನಾಟಕ ಚಲನಚಿತ್ರ ಕಪ್ ಪಂದ್ಯಾವಳಿಯ ಆತಿಥ್ಯವನ್ನು ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರು ವಹಿಸಿಕೊಳ್ಳಲಿದೆ. ಇದೇ ಸೆಪ್ಟೆಂಬರ್ 6, 7 ಮತ್ತು 8ರಂದು ಕೆಸಿಸಿ ಮೂರನೇ ಆವೃತ್ತಿಯ ಪಂದ್ಯಗಳು ನಗರದಲ್ಲಿ ನಡೆಯಲಿವೆ ಎಂದು ನಟ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ.

"ಈ ಬಾರಿ ಮೈಸೂರಿನಲ್ಲಿ ಕೆಸಿಸಿ ಸೀಸನ್ 3 ನಡೆಯಲಿದೆ. ಸೆಪ್ಟೆಂಬರ್‌ 6, 7 ಮತ್ತು 8 ರಂದು ಪಂದ್ಯಾವಳಿ ಇರುತ್ತದೆ. ಕೆಸಿಸಿ ಕ್ರಿಕೆಟ್‌ ಲೀಗ್‌ನಲ್ಲಿ ಪಾಲ್ಗೊಳ್ಳಲು ಖುಷಿಯಾಗುತ್ತಿದೆ" ಎಂದು ಹೇಳಿಕೊಂಡಿದ್ದಾರೆ ಸುದೀಪ್. ಒಟ್ಟಾರೆ 10 ಓವರ್ ಗಳ ಪಂದ್ಯದಲ್ಲಿ ಈ ಬಾರಿ ಪ್ರತಿ ತಂಡ ಒಟ್ಟು ಐದು ಪಂದ್ಯಗಳನ್ನು ಆಡಲಿದ್ದು, ಬಳಿಕ ಫೈನಲ್ ಪಂದ್ಯ ನಡೆಯಲಿದೆ. ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳ ಒಟ್ಟು ಆರು ತಂಡಗಳು ಟೂರ್ನಮೆಂಟ್ ನಲ್ಲಿ ಭಾಗವಹಿಸಲಿವೆ.

Karnataka Chalanachithra Cup Season 3 Cricket League

ಕಳೆದ ಬಾರಿ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ನಟ ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಗೋಲ್ಡನ್ ‍ಸ್ಟಾರ್ ಗಣೇಶ್, ರಾಕಿಂಗ್ ಸ್ಟಾರ್ ಯಶ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ನೇತೃತ್ವದ ಆರು ತಂಡಗಳು ಆಟವಾಡಿದ್ದವು. ಈ ಬಾರಿ ಕೆಸಿಸಿ ಟಿ-10 ಕ್ರಿಕೆಟ್‌ ಲೀಗ್‌ನಲ್ಲಿ ಸಿಸಿಎಲ್ ಮತ್ತು ಕೆಪಿಎಲ್ ಆಟಗಾರರೂ ಆಡಲಿರುವುದು ವಿಶೇಷ. ಈ ಲೀಗ್‌ನ ತಂಡಗಳಲ್ಲಿ ಕಲಾವಿದರೊಂದಿಗೆ ಬರಹಗಾರರು, ತಂತ್ರಜ್ಞರು ಕೂಡ ಆಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+