ರಾಜ್ಯಕ್ಕೆ ಬಂದ ಕೇರಳ ತ್ಯಾಜ್ಯ, ಲಾರಿ ತಡೆದ ಕನ್ನಡ ಸಂಘಟನೆಗಳು

ಮೈಸೂರು, ಜನವರಿ 18: ನಾಗರೀಕರು, ಸಂಘ ಸಂಸ್ಥೆಗಳ ಪ್ರತಿರೋಧದ ನಡುವೆಯೂ ಕೇರಳ ರಾಜ್ಯದಿಂದ ತ್ಯಾಜ್ಯಗಳನ್ನು ಲಾರಿಯಲ್ಲಿ ತಂದು ಕರ್ನಾಟಕದೊಳಗೆ ಸುರಿಯುತ್ತಿರುವ ದಂಧೆ ನಿರಂತರವಾಗಿ ಸಾಗಿದ್ದು, ತ್ಯಾಜ್ಯ ತರುವ ಲಾರಿಗಳಿಗೆ ತಡೆಯೊಡ್ಡುವ ಕಾರ್ಯಾಚರಣೆಯನ್ನು ಕನ್ನಡ ಪರ ಸಂಘಟನೆಗಳು ಮುಂದುವರಿಸಿವೆ.

ನಿನ್ನೆ ಮತ್ತು ಇಂದು ಕೇರಳದಿಂದ ತ್ಯಾಜ್ಯವನ್ನು ತುಂಬಿರುವ 2 ಲಾರಿಗಳು ಕರ್ನಾಟಕದೊಳಗೆ ಬರುವ ಮಾಹಿತಿ ದೊರಕಿದ ತಕ್ಷಣ ಕಾರ್ಯ ಪ್ರವೃತ್ತರಾದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಪಟ್ಟಣ ಸಮೀಪದ ಊಟಿ ವೃತ್ತದಲ್ಲಿ 9 ಗಂಟೆಗೆ ಲಾರಿಗಳನ್ನು ತಡೆದಿದ್ದಾರೆ.

Kannada organizations stopped Kerala Lorries

ನಂತರ ಕಾರ್ಯಕರ್ತರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಲಾರಿಗಳನ್ನು ವಶಪಡಿಸಿಕೊಂಡ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಸುರೇಶ್, ಕಾವಲು ಪಡೆಯ ಅಬ್ದುಲ್ ಮಾಲಿಕ್ ಹಾಗೂ ಸಂಘಟನೆಗಳ ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+