Get Updates
Get notified of breaking news, exclusive insights, and must-see stories!

ಕಾದಂಬರಿಗಾರ್ತಿ ತ್ರಿವೇಣಿ ನಿವಾಸ ಇನ್ಮುಂದೆ ವಸ್ತುಸಂಗ್ರಹಾಲಯ..!

ಮೈಸೂರು, ಡಿಸೆಂಬರ್‌ 15: ಕನ್ನಡದ ಖ್ಯಾತ ಕಾಂದಬರಿಗಾರ್ತಿ ತ್ರಿವೇಣಿಯವರ ಬಗ್ಗೆ ಗೊತ್ತಿಲ್ಲದವರಿಲ್ಲ. ಕನ್ನಡದಲ್ಲಿ ಒಳ್ಳೊಳ್ಳೆಯ ಕಾದಂಬರಿಗಳನ್ನು ಬರೆದು ಓದುಗರನ್ನು ಸೆಳೆದವರು. ಅಷ್ಟೇ ಅಲ್ಲದೆ ಇವರ ಕಾದಂಬರಿಗಳು ಚಲನಚಿತ್ರವಾಗಿಯೂ ಜನಪ್ರಿಯಗೊಂಡಿವೆ. ಇಂತಹ ಕಾದಂಬರಿಗಾರ್ತಿ ಬಾಳಿ ಬದುಕಿದ ಮೈಸೂರಿನ 120 ವರ್ಷದ ಹಳೆಯ ನಿವಾಸವನ್ನು ದುರಸ್ತಿಗೊಳಿಸಿ ವಸ್ತುಸಂಗ್ರಹಾಲಯವನ್ನಾಗಿ ಮಾಡುವ ಕಾರ್ಯಕ್ಕೆ ಇದೀಗ ಚಾಲನೆ ಸಿಕ್ಕಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರವೇ ಶಿಥಿಲಗೊಂಡಿರುವ ಹಳೆಯ ಕಾಲದ ಅವರ ಮನೆ ಜನಮನಸೆಳೆಯುವ ವಸ್ತು ಸಂಗ್ರಹಾಲಯವಾಗಿ ರೂಪುಗೊಳ್ಳಲಿದೆ. ಮೈಸೂರಿನ ಚಾಮರಾಜಪುರಂ ರೈಲ್ವೆ ನಿಲ್ದಾಣದ ಬಳಿಯಿರುವ 120 ವರ್ಷ ಹಳೆಯದಾದ ತ್ರಿವೇಣಿ ಅವರ ಮನೆಯ ಬಗ್ಗೆ ಗೊತ್ತೇ ಇರಲಿಲ್ಲ. ಏಕೆಂದರೆ ಅವರ ನಿವಾಸ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಜೊತೆಗೆ ದುರಸ್ತಿ ಕಾಣದೆ ಶಿಥಿಲಾವಸ್ಥೆಗೆ ತಲುಪಿತ್ತು. ಇದೀಗ ಗತಕಾಲದ ವೈಭವವನ್ನು ಸಾರುವ ಕೆಲಸ ಮಾಡಲು. ತ್ರಿವೇಣಿ ಅವರ ಪುತ್ರಿ ಮೀರಾ ಕುಮಾರ್ ಮುಂದಾಗಿದ್ದು, ಮನೆ ವಸ್ತುಸಂಗ್ರಹಾಲಯವಾಗಿ ಮೈಸೂರಿಗೆ ಹೆಮ್ಮೆ ತರಲಿದೆ ಎನ್ನುದರಲ್ಲಿ ಎರಡು ಮಾತಿಲ್ಲ.

ಈಗಾಗಲೇ ತ್ರಿವೇಣಿ ಅವರ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಸ್ವತಃ ಅವರ ಪುತ್ರಿ ಮೀರಾ ಕುಮಾರ್ ಭೂಮಿ ಪೂಜೆ ನೆರವೇರಿಸಿದ್ದಾರೆ. ತ್ರಿವೇಣಿ ಅವರ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿಸುವ ಆಲೋಚನೆ ಅವರ ಪುತ್ರಿಗೆ ಬರಲು ಮುಖ್ಯ ಕಾರಣ ನಾಟಕಕಾರ ವಿಲಿಯಂ ಷೇಕ್ಸ್‌ ಪಿಯರ್. ಲಂಡನ್ ಪ್ರವಾಸ ಹೋಗಿದ್ದಾಗ ಅಲ್ಲಿ ನಾಟಕಕಾರ ವಿಲಿಯಂ ಷೇಕ್ಸ್ ಪಿಯರ್ ಜೀವಿಸಿದ್ದ ಮನೆಗೆ ಭೇಟಿ ನೀಡಿದ್ದರಂತೆ. ಆ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ರೂಪಿಸುವ ಮೂಲಕ ಮನೆಯನ್ನು ಉಳಿಸಿಕೊಳ್ಳಲಾಗಿದೆ. ಆ ಮನೆಯಲ್ಲಿ ಅವರು ಬಳಸಿದ ವಸ್ತುಗಳು, ಬರೆದ ಪತ್ರಗಳು, ಪಡೆದ ಪ್ರಶಸ್ತಿಗಳು ಎಲ್ಲವನ್ನೂ ರಕ್ಷಿಸಿಡಲಾಗಿದೆಯಂತೆ. ಅದನ್ನು ನೋಡಿ ಪ್ರೇರಿತರಾಗಿ ತಾಯಿ ತ್ರಿವೇಣಿ ಅವರ ಮನೆಯನ್ನೂ ಸ್ಮಾರಕ ಮಾಡಬೇಕೆಂಬ ಬಯಕೆ ಮೂಡಿದ್ದರೂ, ಅದಕ್ಕೆ ಬೇಕಾದ ಅನುದಾನದ ಕೊರತೆಯಿಂದ ಮೌನಕ್ಕೆ ಶರಣಾಗಿದ್ದರು.

ಅಭಿಮಾನಿಯಿಂದ ತ್ರಿವೇಣಿ ಅವರ ಮನೆ ಜೀರ್ಣೋದ್ಧಾರ

ಅಭಿಮಾನಿಯಿಂದ ತ್ರಿವೇಣಿ ಅವರ ಮನೆ ಜೀರ್ಣೋದ್ಧಾರ

ಈಗ ಕಾಲ ಕೂಡಿ ಬಂದಿದ್ದು, ತ್ರಿವೇಣಿ ಅವರ ಅಭಿಮಾನಿಯೊಬ್ಬರು ಮನೆಯನ್ನು ಜೀರ್ಣೋದ್ಧಾರ ಮಾಡಿಕೊಡಲು ಮುಂದೆ ಬಂದಿದ್ದರಿಂದ ಸಂಗ್ರಹಾಲಯ ಮಾಡುವ ಕಾರ್ಯಕ್ಕೆ ವೇಗ ಸಿಕ್ಕಿದಂತಾಗಿದೆ. 75x100 ಅಡಿ ಅಳತೆಯ ನಿವೇಶನದಲ್ಲಿ ಎರಡು ಮನೆಗಳಿದ್ದು, ಒಂದಕ್ಕೊಂದು ಹೊಂದಿಕೊಂಡಂತಿವೆ. ಒಂದು ಮನೆ 120 ವರ್ಷ ಹಳೆಯದಾದರೆ ಇನ್ನೊಂದು 90 ವರ್ಷದಷ್ಟು ಹಳೆಯದು. ಎರಡನೇ ಮನೆಯನ್ನು ತ್ರಿವೇಣಿ ಅವರೇ ಅವರ ಯಜಮಾನರಿಗೆ ಹೇಳಿ ಕಟ್ಟಿಸಿಕೊಂಡಿದ್ದರಂತೆ. ಈಗ ಎರಡು ಮನೆಗಳು ಯಾರೂ ವಾಸವಿಲ್ಲದ ಕಾರಣದಿಂದ ಶಿಥಿಲವಾಗಿರುವುದರಿಂದ ಹಳೆಯ ಕಟ್ಟಡ ಶಿಲ್ಪಶಾಸ್ತ್ರಜ್ಞ ಪಂಕಜ್ ಮೋದಿ ಮತ್ತು ರಘುನಾಥ್ ತಂಡ ಕಟ್ಟಡ ಪರಿಶೀಲಿಸಿ ದುರಸ್ತಿಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ವಸ್ತು ಸಂಗ್ರಾಹಲಯ ನಿರ್ಮಾಣಕ್ಕೆ ಒಂದು ವರ್ಷ ಕಾಲಾವಕಾಶ

ವಸ್ತು ಸಂಗ್ರಾಹಲಯ ನಿರ್ಮಾಣಕ್ಕೆ ಒಂದು ವರ್ಷ ಕಾಲಾವಕಾಶ

ಹಳೆಯ ಕಟ್ಟಡಗಳ ಶಿಲ್ಪಶಾಸ್ತ್ರಜ್ಞ ಪಂಕಜ್ ಮೋದಿ ಅವರು ಹೇಳುವಂತೆ ಮನೆಯು ಸಂಪೂರ್ಣ ಅಲ್ಲಲ್ಲಿ ಶಿಥಿಲವಾಗಿದ್ದು, ಕೆಲ ಭಾಗಗಳನ್ನು ತೆಗೆದು ಮೊದಲಿನಂತೆಯೇ ನಿರ್ಮಿಸಬೇಕಿದೆ. ಇದಕ್ಕೆ ಒಂದು ವರ್ಷ ಕಾಲಾವಕಾಶ ಅಗತ್ಯವಿದೆ. ತ್ರಿವೇಣಿ ಅವರು ಬದುಕಿದ್ದ ಮನೆಯಾದ್ದರಿಂದ ಬದುಕಿನ ಚಿತ್ರಣಗಳನ್ನು ಮನೆಯಲ್ಲಿ ಕಟ್ಟಿಕೊಡುವ ಕೆಲಸ ಮಾಡಬೇಕಾಗಿದೆ. ಹಿಂದೆ ಕಟ್ಟಡ ನಿರ್ಮಾಣ ಮಾಡುವಾಗ ಬಳಸಿದ್ದ ವಸ್ತುಗಳನ್ನೇ ಬಳಸಿ, ದುರಸ್ತಿ ಮಾಡಬೇಕಾಗಿದೆಯಂತೆ.

ಅಮೋಘ ಯಶಸ್ಸು ಪಡೆದುಕೊಂಡಿದ್ದ ಬೆಳ್ಳಿಮೋಡ ಕಾದಂಬರಿ

ಅಮೋಘ ಯಶಸ್ಸು ಪಡೆದುಕೊಂಡಿದ್ದ ಬೆಳ್ಳಿಮೋಡ ಕಾದಂಬರಿ

ಇನ್ನು ತ್ರಿವೇಣಿ ಎಂಬ ಹೆಸರಿನಿಂದ ಕಾದಂಬರಿಗಳನ್ನು ರಚಿಸಿರುವ ಅನಸೂಯ ಶಂಕರ್ ಕನ್ನಡದ ಪ್ರಮುಖ ಕಾದಂಬರಿಕಾರರು. ಇವರು ಇದೇ ಮನೆಯಲ್ಲಿ 1950ರಿಂದ 1963ರ ಅವಧಿಯಲ್ಲಿ 3 ಕತೆ, 21 ಕಾದಂಬರಿಗಳನ್ನು ರಚಿಸಿದ್ದಲ್ಲದೆ ಅಲ್ಲಿಯೇ ಬಾಳಿ ಬದುಕಿದ್ದರು. ಅವರ 21 ಕಾದಂಬರಿಗಳಲ್ಲಿ ಬೆಳ್ಳಿಮೋಡ, ಹಣ್ಣೆಲೆಚಿಗುರಿದಾಗ, ಶರಪಂಜರ, ದೂರದ ಬೆಟ್ಟ, ಬೆಕ್ಕಿನ ಕಣ್ಣು ಹೀಗೆ ಐದು ಚಲನಚಿತ್ರಗಳಾಗಿವೆ.. ಅದರಲ್ಲಿ ಬೆಳ್ಳಿಮೋಡ ಚಿತ್ರ ಅಮೋಘ ಯಶಸ್ಸು ಪಡೆದುಕೊಂಡಿತು. ಹಾಗಾಗಿ ಮನೆಯನ್ನು ಜೀರ್ಣೋದ್ಧಾರ ಮಾಡಿದ ಬಳಿಕ ಬೆಳ್ಳಿ ಮೋಡ ಎಂಬ ಹೆಸರಿಡುವ ಚಿಂತನೆ ಮಾಡಲಾಗಿದೆ ಎನ್ನಲಾಗಿದೆ.

ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನ ಬಾಳಿ ಬದುಕಿದ ಮನೆಯನ್ನು ಜೀರ್ಣೋದ್ಧಾರಗೊಳಿಸಿ, ವಸ್ತು ಸಂಗ್ರಹಾಲಯವನ್ನಾಗಿ ಮಾಡಿ ಸಾಹಿತ್ಯಕ ಚಟುವಟಿಕೆಗಳಿಗೆ ವೇದಿಕೆ ಒದಗಿಸಲು ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನದಿಂದ ಯೋಜನೆ ರೂಪಿಸಲಾಗಿದೆ. ತ್ರಿವೇಣಿ ಸಾಹಿತ್ಯವನ್ನು ಗಡಿಯಾಚೆಗೂ ದಾಟಿಸುವ ಸಲುವಾಗಿ ಇ-ಬುಕ್ ಮತ್ತು ಆಡಿಯೋ ಬುಕ್ ತಯಾರಿ ಕಾರ್ಯ ನಡೆಯುತ್ತಿದೆ. ಜೊತೆಗೆ ಆ ಮನೆಯನ್ನು ಮುಂದಿನ ಪೀಳಿಗೆಗೂ ಪಾರಂಪರಿಕ ಶೈಲಿಯಲ್ಲಿಯೇ ಉಳಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿರುವುದು ಕಂಡು ಬಂದಿದೆ.

ವಸ್ತುಸಂಗ್ರಹಾಲಯದಲ್ಲಿ ಏನೇನು ಇರಲಿದೆ..?

ವಸ್ತುಸಂಗ್ರಹಾಲಯದಲ್ಲಿ ಏನೇನು ಇರಲಿದೆ..?

ಇದೆಲ್ಲದರ ಜೊತೆಗೆ ತ್ರಿವೇಣಿ ಅವರ ಎಲ್ಲಾ ಕೃತಿಗಳನ್ನು ಇ-ಬುಕ್ ರೂಪಕ್ಕೆ ಇಳಿಸಲಾಗಿದ್ದು, ಜನವರಿ ವೇಳೆಗೆ ಲೋಕಾರ್ಪಣೆಗೊಳಿಸಲು ತಯಾರಿ ನಡೆಸಲಾಗಿದೆ. ವಿದೇಶಗಳಲ್ಲಿರುವ ಕನ್ನಡಿಗರಿಗೆ ಅನುಕೂಲವಾಗುವಂತೆ 24 ಕೃತಿಗಳನ್ನು ಧ್ವನಿ ಮುದ್ರಿಕೆ ಮಾಡುವ ಕಾರ್ಯವೂ ಆರಂಭಗೊಂಡಿದೆ. ವಸ್ತುಸಂಗ್ರಹಾಲಯದಲ್ಲಿ ತ್ರಿವೇಣಿಯವರು ಉಪಯೋಗಿಸಿದ ಸೀರೆ, ಮೇಕಪ್ ಬಾಕ್ಸ್, ಪೆನ್ನುಗಳು, ಡೈರಿ, ಬರೆದ ಪತ್ರಗಳು, ಪಡೆದುಕೊಂಡಿದ್ದ ಪ್ರಶಸ್ತಿಗಳು, ಅಪರೂಪದ ಛಾಯಾಚಿತ್ರಗಳು, ಬಳಸಿದ ಪೀಠೋಪಕರಣಗಳನ್ನು ಇಡಲಾಗುತ್ತಿದೆ. ಆಪ್ತಸಲಹಾ ಕೇಂದ್ರ ತೆರೆದು ಅಗತ್ಯ ಸಲಹೆ ನೀಡುವ ಕಾರ್ಯಕ್ಕೂ ಚಾಲನೆ ನೀಡಲಾಗುತ್ತದೆಯಂತೆ. ಒಟ್ಟಾರೆ ಎಲ್ಲವೂ ನಿರೀಕ್ಷಿಸಿದಂತೆ ಆದರೆ ಶೀಘ‍್ರವೇ ವಸ್ತುಸಂಗ್ರಹಾಲಯ ಎಲ್ಲರನ್ನು ಆಕರ್ಷಿಸಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+