• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬುಲೆಟ್ ನಾಪತ್ತೆ ಪ್ರಕರಣ; ಆರೋಪಿಗೆ ಮತ್ತೆ ನ್ಯಾಯಾಂಗ ಬಂಧನ

By ಮೈಸೂರು ಪ್ರತಿನಿಧಿ
|

ಮೈಸೂರು, ಜೂನ್ 14: ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ 303 ಬಂದೂಕಿನ 50 ಬುಲೆಟ್ ಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿ ಹೆಡ್ ಕಾನ್ಸ್​ಟೆಬಲ್ ಕೃಷ್ಣೇಗೌಡ ಅವರನ್ನು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರು 15 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

   Karnataka Budget 2020 LIVE | 05-03-2020 | BS Yediyurappa (3)

   ಸಜೀವ ಗುಂಡು ನಾಪತ್ತೆ ಪ್ರಕರಣ ಸಂಬಂಧ ಹೆಡ್ ಕಾನ್ಸ್ ಟೆಬಲ್ ಕೃಷ್ಣೇಗೌಡ ಅವರನ್ನು ಅಮಾನತುಗೊಳಿಸಲಾಗಿತ್ತು. ಅಮಾನತಿನಿಂದ ಕಂಗಾಲಾಗಿದ್ದ ಅವರು ಕಪಿಲಾ ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಹೈಡ್ರಾಮಾ ಸೃಷ್ಟಿ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಬಳಿಕ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

   ಟಿ.ನರಸೀಪುರ ಠಾಣೆಯಲ್ಲಿ ಕಾಣೆಯಾಗಿದ್ದ ಬುಲೆಟ್‌ ಗಳು ಕೊನೆಗೂ ಸಿಕ್ಕಿದ್ದು ಎಲ್ಲಿ?

   ಪೊಲೀಸರು ವಶಕ್ಕೆ ಪಡೆದು ಅವರು ನೀಡಿದ ಮಾಹಿತಿ ಮೇರೆಗೆ ನಂಜನಗೂಡಿನ ಕಪಿಲಾ ನದಿ ಸೇತುವೆ ಬಳಿ ಎಸೆದಿದ್ದ 20 ಗುಂಡುಗಳನ್ನು ಮುಳುಗು ತಜ್ಞರ ಸಹಾಯದಿಂದ ವಶಕ್ಕೆ ಪಡೆದಿದ್ದರು. ಪೊಲೀಸ್ ವಶಕ್ಕೆ ಪಡೆದ ಅವಧಿ ಮುಗಿದ ಹಿನ್ನೆಲೆಯಲ್ಲಿ ನಿನ್ನೆ ತಿ.ನರಸೀಪುರ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.

   English summary
   Head Constable Krishna Gowda, who was arrested in connection with the 50 bullets missing case at T. Narasipura police station, has been produced before the JMFC court and given a 15 day judicial custody
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X