ಹಾಸನದಲ್ಲಿ ಜೆಡಿಎಸ್ ಬೇರು ಅಲುಗಾಡುತ್ತಿದೆ: ಪ್ರತಾಪ್ ಸಿಂಹ

Recommended Video

      ಪ್ರತಾಪ್ ಸಿಂಹ ಸೇರಿದಂತೆ ಹಲವರಿಂದ ಜೆಡಿಎಸ್ ವಿರುದ್ಧ ಪ್ರತಿಭಟನೆ

      ಮೈಸೂರು, ಫೆಬ್ರವರಿ 15: ಹಾಸನದಲ್ಲಿ ಶಾಸಕ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ದಾಳಿ ನಡೆಸಿದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮೈಸೂರಿನಲ್ಲಿ ನಿನ್ನೆ (ಫೆ.14 )ಪ್ರತಿಭಟನೆ ನಡೆಸಿದರು.

      ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಜಮಾಯಿಸಿದ ಕಾರ್ಯಕರ್ತರು, ಜೆಡಿಎಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಶಾಸಕ ಪ್ರೀತಂಗೌಡರನ್ನು ರಾಜಕೀಯವಾಗಿ ಮಾತ್ರವಲ್ಲದೇ, ದೈಹಿಕವಾಗಿಯೂ ಮುಗಿಸಲು ಪ್ರಯತ್ನಿಸಿದ್ದಾರೆ. ಇದೊಂದು ವ್ಯವಸ್ಥಿತ ಪಿತೂರಿ.

      ಹಾಸನದಲ್ಲಿ ಜೆಡಿಎಸ್ ಬೇರು ಅಲಾಗಾಡುತ್ತಿದೆ. ಅದಕ್ಕಾಗಿ ಈ ರೀತಿಯ ದಾಳಿ ಯತ್ನಗಳು ನಡೆಯುತ್ತಿವೆ. ಜನರಿಂದ ತಿರಸ್ಕೃತಗೊಂಡವರು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಈ ವೇಳೆ ನಾವು ಸರ್ಕಾರ ರಚಿಸಲು ಮಾಡಿರುವ ಪ್ರಯತ್ನದಲ್ಲಿ ತಪ್ಪೇನಿದೆ. ಇದನ್ನೇ ನೆಪ ಮಾಡಿಕೊಂಡು ಬಿಜೆಪಿ ಮೇಲೆ ದಾಳಿ ಮಾಡೋದು ಹೇಯ ಕೃತ್ಯ ಎಂದರು.

      JDS is trying to finish Preetham Gowda politically:Pratap simha

      ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುತ್ತೀವಿ ಎಂದು ಹಲವು ತಿಂಗಳು ಕಳೆಯಿತು. ಆದರೆ, ಇದುವರೆಗೂ ಒಬ್ಬ ರೈತರ ಸಾಲ ಮನ್ನಾ ಆಗಿಲ್ಲ. ರಾಜ್ಯದಲ್ಲಿ ಎಂಥಹ ಆಡಳಿತ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

      ಕೊಡಗು ಜಿಲ್ಲೆಯಲ್ಲಿ ಭೀಕರ ಮಳೆಯಾದಾಗ ನೆರೆ ಸಂತ್ರಸ್ಥರಿಗೆ ಕೇಂದ್ರ ಸರ್ಕಾರ ನೆರವು ನೀಡಿತು. ನೆರೆ ಪೀಡಿತರಿಗೆ ರಾಜ್ಯ ಸರ್ಕಾರದ ಕೊಡುಗೆಯೇನು ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+