ಸಿದ್ದರಾಮಯ್ಯ ಸ್ಪರ್ಧಿಸುವ ವರುಣಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲಾವಣೆ, ಯಾರು ತಿಳಿಯರಿ

ಮೈಸೂರು, ಏಪ್ರಿಲ್ 19: ವರುಣಾ ಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಂತೆ ಇತ್ತ ಜೆಡಿಎಸ್‌ ಪಕ್ಷ ವರುಣದಲ್ಲಿ ತನ್ನ ಅಭ್ಯರ್ಥಿಯನ್ನು ಬದಲಾವಣೆ ಮಾಡಿದೆ. ಅಲ್ಲದೇ ಮಂಡ್ಯದಲ್ಲೂ ಅಭ್ಯರ್ಥಿಯನ್ನು ಬದಲಿಸಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲಿ ಕೊನೆಯ ಕ್ಷಣದಲ್ಲಿ​ ಅಭ್ಯರ್ಥಿ ಬದಲಾವಣೆ ನಿರ್ಧಾರ ಮಾಡಿರುವ ಜೆಡಿಎಸ್‌ ಅಲ್ಲಿ ಡಾ. ಭಾರತಿ ಶಂಕರ್ ಅವರನ್ನು ಅಖಾಡಕ್ಕೆ ಇಳಿಸಿದೆ. ಬುಧವಾರ 59 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳುಳ್ಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ವರುಣಾದಿಂದ ಭಾರತಿ ಶಂಕರ್ ಅವರ ಹೆಸರಿದೆ.

JDS candidate change in Varuna constituency: Bharti Shankar contest from Varuna

ಸಿದ್ದು ನಾಮಪತ್ರ ದಿನವೇ ಭಾರತೀ ಶಂಕರ್‌ಗೆ ಜೆಡಿಎಸ್ ಟಿಕೆಟ್

ವರುಣಾದಲ್ಲಿ ಸಿದ್ದರಾಮಯ್ಯನವರು ನಿಲ್ಲುವುದು ಖಚಿತವಾಗುತ್ತಿದ್ದಂತೆ ಅವರ ಪುತ್ರ ಯತೀಂದ್ರ ಅವರು ಮತಯಾಚನೆ ಆರಂಭಿಸಿದ್ದರು. ಆದರೆ ಜೆಡಿಎಸ್ ನ ಅಭಿಷೇಕ್ ಎಲ್ಲೂ ಕಾಣಲಿಲ್ಲ. ಇದರಿಂದ ಕಾರ್ಯಕರ್ತರಲ್ಲಿ ಉತ್ಸಹ ಕಂಡು ಬರಲಿಲ್ಲ. ಇದೀಗ ಸಿದ್ದರಾಮಯ್ಯನವರು ನಾಮಪತ್ರ ಸಲ್ಲಿಸಿದ ದಿನವೇ ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬದಲಾಯಿಸಿದ. ಅಭಿಷೇಕ್ ಜಾಗದಲ್ಲಿ ಡಾ.ಭಾರತಿ ಶಂಕರ್‌ ಅವರನ್ನು ಕಣಕ್ಕಿಳಿಸಲಾಗಿದೆ.

ವರುಣಾದಲ್ಲಿ ಜೆಡಿಎಸ್‌ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸದೇ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆಯೇ ಎಂಬ ಪ್ರಶ್ನೆಯು ಸೃಷ್ಟಿಯಾಗಿತ್ತು. ಇದೀಗ ಅದಕ್ಕೆಲ್ಲ ತೆರೆ ಎಳೆದ ಜೆಡಿಎಸ್ ಅಭ್ಯರ್ಥಿಯನ್ನು ಬದಲಿಸುವ ಮೂಲಕ ಕಾಂಗ್ರೆಸ್‌ ವಿರುದ್ಧ ಸೆಣಸಲು ಜೆಡಿಎಸ್‌ ಸಜ್ಜಾಗಿದೆ.

ಮಂಡ್ಯದಲ್ಲೂ ಜೆಡಿಎಸ್ ಅಭ್ಯರ್ಥಿ ಬದಲಾವಣೆ

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ತನ್ನ ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕ ಎಂ. ಶ್ರೀನಿವಾಸ್‌ಗೆ ನೀಡಲಾಗಿತ್ತು. ಇದೀಗ ಬುಧವಾರ ಬಿಡುಗಡೆಗೊಂಡ ಜೆಡಿಎಸ್ ಮೂರನೇ ಪಟ್ಟಿಯಲ್ಲಿ ಮನ್ಮುಲ್ ಅಧ್ಯಕ್ಷ ರಾಮಚಂದ್ರ ಅವರಿಗೆ ಟಿಕೆಟ್ ಘೋಷಿಸಲಾಗಿದೆ.

https://kannada.oneindia.com/news/mysuru/jds-candidate-change-in-varuna-constituency-bharti-shankar-contest-from-varuna-290612.html

ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದ ಹಾಲಿ ಶಾಸಕ ಶ್ರೀನಿವಾಸ್ ಅವರಿಗೆ ಅವಮಾನ ಮಾಡಿದಂತಾಗಿದೆ. ಜೆಡಿಎಸ್‌ ಟಿಕೆಟ್ ಬದಲವಣೆ ನಿರ್ಧಾರದಿಂದ ಹಾಲಿ ಶಾಸಕರಿಗೆ ಮುಖಭಂಗವಾಗಿದೆ.

ಇನ್ನೂ ಜೆಡಿಎಸ್‌ಗೆ ಮಂಡ್ಯ ಕ್ಷೇತ್ರವು ಪ್ರತಿಷ್ಠೆಯ ಕಣವಾಗಿದೆ. ಇಲ್ಲಿಂದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರೇ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಜೆಡಿಎಸ್ ಟಿಕೆಟ್ ಕೈ ಜಾರಿದ ಎಂ ಶ್ರೀನಿವಾಸ್‌ ಅವರು ಗಣಿ ವಿಚಾರದಲ್ಲಿ ಒಂದಷ್ಟು ಆರೋಪ ಎದುರಿಸುತ್ತಿದ್ದಾರೆ ಎನ್ನಲಾಗಿದೆ.
ಈ ಕಾರಣಕ್ಕೆ ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಿ ರಾಮಚಂದ್ರ ಅವರಿಗೆ ಕೊಡಲಾಗಿದೆ. ಇಲ್ಲಿ ಜೆಡಿಎಸ್‌ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಅಭ್ಯರ್ಥಿ ಬದಲಾವಣೆಯ ತಂತ್ರಕ್ಕೆ ಜೆಡಿಎಸ್ ಮೊರೆ ಹೋದಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+