ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಹಬ್ಬ: ಬಾಗಿನ ಕೊಡುವ ಹಿನ್ನೆಲೆ, ವಾಡಿಕೆ, ಮಹತ್ವ

|
Google Oneindia Kannada News

Recommended Video

Swarna Gowri Vratha : ವ್ರತಾಚರಣೆ ಯಾಕೆ? ಹೇಗೆ? | ಇಲ್ಲಿದೆ 7 ಸಂಗತಿಗಳು | Oneindia Kannada

ಮೈಸೂರು, ಸೆಪ್ಟೆಂಬರ್.11: ಶ್ರಾವಣ ಮತ್ತು ಭಾದ್ರಪದ ಮಾಸದಲ್ಲಿ ಬರುವ ಸಾಲು ಸಾಲು ಹಬ್ಬಗಳಲ್ಲಿ ದೇವರನ್ನು ಪೂಜಿಸಿ ಐದು ಜನ ಮುತ್ತೈದೆಯರಿಗೆ ಬಾಗಿನ ಕೊಡುವುದು ವಾಡಿಕೆ.
ಗೌರಿಯನ್ನು ಪೂಜಿಸುವ ಪ್ರತಿಯೊಬ್ಬರು ಬಾಗಿನವನ್ನು ಕೊಡುತ್ತಾರೆ.

ಐದು ಜನಕ್ಕೆ ನೀಡದೆ ಇದ್ದರೂ ಸಹ ತಾವು ಪೂಜಿಸುವ ಗೌರಮ್ಮ ಹಾಗೂ ಇನ್ನೊಬ್ಬ ಹಿರಿಯ ಮುತ್ತೈದೆಯನ್ನು ಕರೆದು ಊಟ ಹಾಕಿ, ಕೈ ಕಾಲಿಗೆ ಅರಿಶಿಣ ಹಚ್ಚಿ, ಗಂಧ ಅಕ್ಷತೆ ಹಾಕಿ ಮೂರು ಬಾರಿ ನಿವ್ವಾಳಿಸಿ ಬಾಗಿನ ಕೊಡಲಾಗುತ್ತದೆ. ಈ ಬಾಗಿನ ಕೊಡಲು ಮುಖ್ಯವಾಗಿ ಬೇಕಾಗಿರುವುದು ಬಿದಿರಿನ ಮೊರಗಳು.

ಸೆ.12 ಸ್ವರ್ಣಗೌರಿ ವ್ರತ: ಆಚರಣೆ ಏಕೆ? ಹೇಗೆ? 7 ಸಂಗತಿಸೆ.12 ಸ್ವರ್ಣಗೌರಿ ವ್ರತ: ಆಚರಣೆ ಏಕೆ? ಹೇಗೆ? 7 ಸಂಗತಿ

ಹೊಸದಾಗಿ ಮದುವೆಯಾಗಿ ಮೊದಲ ಬಾರಿಗೆ ಮನೆಗೆ ಬರುವ ಹೆಣ್ಣುಮಕ್ಕಳಿಗೆ, ಅತ್ತೆಯಂದಿರಿಗೆ ಹಾಗೂ ಇನ್ನಿಬ್ಬರು ಮುತ್ತೈದೆಯರು ಚಿಕ್ಕಮಕ್ಕಳು ಅಥವಾ ಹಿರಿಯ ಮುತ್ತೈದೆ ಹಾಗೂ ಸ್ವರ್ಣಗೌರಿಗೆ ಸೇರಿ ಒಟ್ಟು ಐದು ಜನರಿಗೆ ಬಾಗಿನವನ್ನು ನೀಡಲಾಗುತ್ತದೆ.

ದೊಡ್ಡವರಿಗೆ ಎರಡು ಜತೆ ದೊಡ್ಡ ಮೊರ, ಚಿಕ್ಕವರಿಗೆ ಒಂದು ಜತೆ ಸಣ್ಣ ಮೊರಕ್ಕೆ ಮಧ್ಯದಲ್ಲಿ ಕುಂಕುಮ ಇಟ್ಟು ಕೆಳಗೆ ಮೇಲೆ ಸಿಂಧೂರ ಮತ್ತು ಕಾಡಿಗೆ ಚುಕ್ಕೆಗಳನ್ನು ಇಟ್ಟು ಕೊಡುವುದು ವಾಡಿಕೆಯಾಗಿದೆ.

ಮೊರವನ್ನು ಲಕ್ಷ್ಮಿ ದೇವತೆಗೆ ಹೋಲಿಸಲಾಗುತ್ತದೆ. ಆದ್ದರಿಂದ ಮೊರದಲ್ಲಿ ಮಂಗಳದ್ರವ್ಯಗಳನ್ನು ಹಾಕಿ ಕೊಡುವುದರಿಂದ ಆರ್ಥಿಕವಾಗಿ, ಉತ್ತಮ ಆರೋಗ್ಯ, ಸುಖ, ಶಾಂತಿ, ಸಮೃದ್ಧಿ, ಸಕಲ ಸೌಲಭ್ಯಗಳನ್ನು ಪಡೆದು ಸದಾ ಕಾಲ ಮುತ್ತೈದೆಯಾಗಿ ಬಾಳು ಎನ್ನುವುದು ಈ ಬಾಗಿನ ಕೊಡುವುದರ ಉದ್ದೇಶವಾಗಿದೆ.

ಸುವರ್ಣ ಗೌರಿ ವ್ರತ: ತಿಳಿದಿರಲಿ ಈ 17 ಸಂಗತಿಸುವರ್ಣ ಗೌರಿ ವ್ರತ: ತಿಳಿದಿರಲಿ ಈ 17 ಸಂಗತಿ

ಅಂದಹಾಗೆ ಇಲ್ಲಿ ಗೌರಿ ಪೂಜೆಯ ಕುರಿತು ವಿವರವಾದ ಮಾಹಿತಿ ಕೊಡಲಾಗಿದ್ದು, ಬಾಗಿನದ ಮಹತ್ವವನ್ನು ತಿಳಿಸಲಾಗಿದೆ ಓದಿ...

 ಸ್ವರ್ಣಗೌರಿ ವ್ರತ ಎಂದರೆ..

ಸ್ವರ್ಣಗೌರಿ ವ್ರತ ಎಂದರೆ..

ಸ್ವರ್ಣಗೌರಿ ವ್ರತ. ಅಂದರೆ ಸ್ವರ್ಣ ಎಂದರೆ ಬಂಗಾರ. ಬಂಗಾರದಲ್ಲಿ ಪ್ರತಿಮೆಯನ್ನು ಮಾಡಿ, ಪೂಜಿಸಬೇಕು ಎಂದು ಹೇಳುತ್ತಾರೆ. ಆದರೂ ಚಿಂತೆಯಿಲ್ಲ, ನಮ್ಮ ದೇವರು, ನಮ್ಮ ದೇವತೆಯರು ಕರುಣಾಳುಗಳು, ಒಂದು ದಳ ತುಳಸಿಗೆ, ಒಂದು ಬಿಲ್ವಪತ್ರೆಗೆ, ಒಂದು ಹೂವಿಗೆ, ಒಂದು ಗರಿಕೆಗೆ, ಬಿಂದು ಗಂಗೋದಕಕ್ಕೆ ಒಲಿಯುವವರು.

ಹೀಗಾಗಿ ಮಣ್ಣಿನಲ್ಲಿ ಪ್ರತಿಮೆಯನ್ನು ಮಾಡಿಸಿ, ಪೂಜಿಸಿ ಶುದ್ಧವಾದ ನೀರಿನಲ್ಲಿ ವಿಸರ್ಜಿಸುವುದು ಶ್ರೇಷ್ಠ ಕ್ರಮ. ಅಷ್ಟೇ ಅಲ್ಲ, ನೀವು ಬಂಗಾರದಲ್ಲಿ ಗೌರಿಯ ಪ್ರತಿಮೆ ಮಾಡಿಸಿದರೂ, ಮಣ್ಣಿನಲ್ಲಿ ಒಂದು ಪ್ರತಿಮೆಯನ್ನು ಮಾಡಿಸಲೇಬೇಕು. ಏಕೆಂದರೆ ಪಾರ್ವತೀದೇವಿ ಸಮಗ್ರ ಚರಾಚರ ವಸ್ತುಗಳ, ವಿಶೇಷವಾಗಿ ಭೂಮಿಯ ಒಡತಿ.

 ಪಾರಂಪರಿಕ ಸಂಸ್ಕೃತಿ ಉಳಿಸಿಕೊಂಡ ಹಬ್ಬ

ಪಾರಂಪರಿಕ ಸಂಸ್ಕೃತಿ ಉಳಿಸಿಕೊಂಡ ಹಬ್ಬ

ಆಧುನಿಕ ಭರಾಟೆಯಲ್ಲಿ ಜೀವನಶೈಲಿ ಬದಲಾದರೂ, ನಿತ್ಯದ ಜೀವನದಲ್ಲಿ ಎಷ್ಟೇ ಹೊಸತನಕ್ಕೆ ಒಗ್ಗಿಕೊಂಡಿದ್ದರೂ ಗೌರಿ ಹಬ್ಬ ಪಾರಂಪರಿಕ ಸಂಸ್ಕೃತಿಯನ್ನು ಇನ್ನು ಉಳಿಸಿಕೊಂಡು ಬಂದಿದೆ ಎನ್ನುವುದಕ್ಕೆ ಬಿದಿರಿನ ಮೊರದ ಬಾಗಿನವೇ ಸಾಕ್ಷಿ.

ತವರು ಮನೆಗೆ ಬರುವ ಹೆಣ್ಣುಮಕ್ಕಳು ಮನೆಯಲ್ಲಿ ಗೌರಿಯನ್ನು ಪೂಜಿಸಿ, ದೇವಿಗೆ ಜೋಡಿ ಮೊರದ ಬಾಗಿನ ಅರ್ಪಿಸುತ್ತಾರೆ. ಪೂಜೆ ಮುಗಿದ ನಂತರ ಸಂಜೆ ಅಥವಾ ಮರುದಿನ ಸಹೋದರಿಯರಿಗೆ, ಬಂಧುಗಳಿಗೆ ಹಾಗೂ ಅಕ್ಕಪಕ್ಕದ ಮನೆಯವರಿಗೆ ತಮ್ಮ ಶಕ್ತ್ಯಾನುಸಾರ ಬಾಗಿನ ನೀಡಿ ಪರಸ್ಪರರಿಗೂ ಗೌರಿ ಆಯುರಾರೋಗ್ಯ, ದೀರ್ಘಕಾಲ ಮುತ್ತೈದೆ ಭಾಗ್ಯ ಹಾಗೂ ಐಶ್ವರ್ಯ ನೀಡಲೆಂದು ಪ್ರಾರ್ಥಿಸುತ್ತಾರೆ.

ಸ್ವರ್ಣಗೌರೀವ್ರತದ ಹಿನ್ನೆಲೆ, ವಿಶೇಷತೆ ಮತ್ತು ಸಿದ್ಧತೆಸ್ವರ್ಣಗೌರೀವ್ರತದ ಹಿನ್ನೆಲೆ, ವಿಶೇಷತೆ ಮತ್ತು ಸಿದ್ಧತೆ

 ಬಾಗಿನ ಕೊಡುವ ಸಂಪ್ರದಾಯ

ಬಾಗಿನ ಕೊಡುವ ಸಂಪ್ರದಾಯ

ಬಾಗಿನಕೊಟ್ಟು ತೆಗೆದುಕೊಳ್ಳುವ ಈ ಸಂಪ್ರದಾಯಕ್ಕೂ ಹಿನ್ನೆಲೆಯಿದೆ. ನಾಗರಪಂಚಮಿಯ ಹಬ್ಬದಂದು ಸಹೋದರಿಯರು ತಮ್ಮಅಣ್ಣ-ತಮ್ಮಂದಿರಿಗೆ ಭಂಡಾರ ಕೂರಿಸಿ, ಪೂಜೆ ಮಾಡಿರುತ್ತಾರೆ. ಆ ಸಂದರ್ಭದಲ್ಲಿ ದಕ್ಷಿಣೆ ಪಡೆದು ಹೋದ ಸಹೋದರರು ತಮ್ಮ ತವರಿನ ಕುಡಿಗಳಾದ ಸೋದರಿಯರಿಗೆ ಮತ್ತೆ ಏನನ್ನಾದರೂ ನೀಡಿ ಬಾಂಧವ್ಯ ವೃದ್ಧಿಸಿಕೊಳ್ಳಲು ಕಾದಿರುತ್ತಾರೆ.

ಗೌರಿಹಬ್ಬದ ಈ ಸಂದರ್ಭವೇ ಅವರಿಗೆ ಪ್ರಶಸ್ತ. ಆದ್ದರಿಂದಲೇ ಬಿದಿರಿನ ಮೊರದಲ್ಲಿ ಮಂಗಲದ್ರವ್ಯಗಳನ್ನಿಟ್ಟು ತವರಿನಿಂದ ನೀಡಿ ಆಶೀರ್ವದಿಸುತ್ತಾರೆ. ಇದನ್ನು ಪಡೆದ ಸ್ತ್ರೀಯರು ತಮ್ಮ ಅಮ್ಮಂದಿರ ಹೆಸರಿನಲ್ಲಿ 'ತಾಯಿ ಬಾಗಿನ'ವನ್ನು ತೆಗೆದಿಟ್ಟುಕೊಳ್ಳುತ್ತಾರೆ.

 ಬಾಗಿನದಲ್ಲಿ ಇರುವ ಸಾಮಾನುಗಳು – ದೇವತೆಗಳು ಇಂತಿದೆ

ಬಾಗಿನದಲ್ಲಿ ಇರುವ ಸಾಮಾನುಗಳು – ದೇವತೆಗಳು ಇಂತಿದೆ

ಅರಿಶಿನ-ಗೌರೀದೇವಿ
ಕುಂಕುಮ-ಮಹಾಲಕ್ಷ್ಮೀ
ಸಿಂಧೂರ-ಸರಸ್ವತಿ
ಕನ್ನಡಿ-ರೂಪಲಕ್ಷ್ಮೀ.
ಬಾಚಣಿಗೆ-ಶೃಂಗಾರಲಕ್ಷ್ಮೀ.
ಕಾಡಿಗೆ-ಲಜ್ಜಾಲಕ್ಷ್ಮೀ.
ಅಕ್ಕಿ-ಶ್ರೀ ಲಕ್ಷ್ಮೀ.
ತೊಗರಿಬೇಳೆ-ವರಲಕ್ಷ್ಮೀ
ಉದ್ದಿನಬೇಳೆ-ಸಿದ್ದಲಕ್ಷ್ಮೀ
ತೆಂಗಿನಕಾಯಿ-ಸಂತಾನಲಕ್ಷ್ಮೀ
ವೀಳ್ಯದ ಎಲೆ-ಧನಲಕ್ಷ್ಮೀ
ಅಡಿಕೆ-ಇಷ್ಟಲಕ್ಷ್ಮೀ
ಫಲ(ಹಣ್ಣು)-ಜ್ಞಾನಲಕ್ಷ್ಮೀ
ಬೆಲ್ಲ-ರಸಲಕ್ಷ್ಮೀ
ವಸ್ತ್ರ-ವಸ್ತ್ರಲಕ್ಷ್ಮೀ
ಹೆಸರುಬೇಳೆ-ವಿದ್ಯಾಲಕ್ಷ್ಮೀ ಎಂಬ ವಾಡಿಕೆಯಿದೆ.

English summary
Everyone who worships the Gauri will give the bagina. Bamboo mora are essentially the main ingredient for this bagina. Here is a detailed information about Gauri Pooja, Importance of the bagina.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X