ಶತಮಾನ ಪೂರೈಸಿದ ಸಂಭ್ರಮದಲ್ಲಿ ಮೈಸೂರು ಸಿಲ್ಕ್
ಮೈಸೂರು, ಅಕ್ಟೋಬರ್, 19 : ಮೈಸೂರು ಸಿಲ್ಕ್ ಶತಮಾನ ಪೂರೈಸಿರುವ ಸವಿನೆನಪಿಗಾಗಿ ಅಂಚೆ ಇಲಾಖೆ ಮೈಸೂರು ಅರಮನೆ ಮತ್ತು ಮೈಸೂರು ಸಿಲ್ಕ್ ಚಿಹ್ನೆ ಹೊಂದಿರುವ ಅಂಚೆ ಚೀಟಿ ಹಾಗೂ ಕವರ್‌ಗಳನ್ನು ಅಕ್ಟೋಬರ್ 18ರ ಭಾನುವಾರದಂದು ಹೊರತಂದಿದೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾದ ಕೌಶಿಕ್ ಮುಖರ್ಜಿ ಅವರು ಬಿಡುಗಡೆಗೊಳಿಸಿದರು.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ತನ್ನ ಶ್ರೇಷ್ಟ ಉತ್ಪನ್ನವಾದ ಮೈಸೂರು ಸಿಲ್ಕ್ ಸೀರೆ ಹಾಗೂ ಉತ್ಪನ್ನಗಳನ್ನು 2014-15ನೇ ಸಾಲಿನಲ್ಲಿ ದಾಖಲೆ ನಿರ್ಮಿಸಿದ್ದು, 146.42 ಕೋಟಿ ರೂ. ವಹಿವಾಟು ನಡೆಸಿ 27 ಕೋಟಿ ರೂ. ಲಾಭ ಗಳಿಸಿದೆ. ಈ ವರ್ಷ ಇದುವರೆಗೆ 75,000 ಮೈಸೂರು ಸಿಲ್ಕ್ ಸೀರೆಗಳನ್ನು ಮಾರಾಟ ಮಾಡಲಾಗಿದೆ ಎಂದು ಕೆ.ಎಸ್.ಐ.ಸಿ. ಅಧ್ಯಕ್ಷ ಡಿ. ಬಸವರಾಜ ತಿಳಿಸಿದ್ದಾರೆ.[ಗಂಗಾವತಿಯಲ್ಲೇ ಮೈಸೂರು ಸಿಲ್ಕ್ ರೇಷ್ಮೆ ಸೀರೆ ಕೊಳ್ಳಿ]

ನೈಜವಾದ ಮೈಸೂರು ಸಿಲ್ಕ್ ಸೀರೆಗಳು ಹಾಗೂ ಅದರ ಉತ್ಪನ್ನಗಳು ಮೈಸೂರು ಸಿಲ್ಕ್ ಅಧಿಕೃತ ಮಳಿಗೆಗಳನ್ನು ಬಿಟ್ಟು ಬೇರೆಲ್ಲೂ ಮಾರಾಟ ಮಾಡಲಾಗುವುದಿಲ್ಲ. ಕೆಲವು ಬಟ್ಟೆ ಅಂಗಡಿಗಳಲ್ಲಿ ಮೈಸೂರು ಸಿಲ್ಕ್ ಎಂದು ಕಳಪೆ ಗುಣಮಟ್ಟದ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರು ಎಚ್ಚರದಿಂದ ಇರಬೇಕೆಂದು ಡಿ. ಬಸವರಾಜ ವಿನಂತಿಸಿದರು.[]
'ಮೈಸೂರು ಸಿಲ್ಕ್ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಸಂಸ್ಥೆಯಾಗಿದ್ದು, ಕರ್ನಾಟಕ ಸರ್ಕಾರದ ಸಾರ್ವಜನಿಕ ಉದ್ಯಮಗಳ ಪೈಕಿ, ಶತಮಾನ ಪೂರೈಸಿ ಪ್ರಪ್ರಥಮ ಸಂಸ್ಥೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವಾಗಿದೆ. ಅಂಚೆ ಇಲಾಖೆ ಮೈಸೂರು ಅರಮನೆ ಮತ್ತು ಮೈಸೂರು ಸಿಲ್ಕ್ ಚಿಹ್ನೆ ಇರುವ ಅಂಚೆ ಚೀಟಿ ಹಾಗೂ ಕವರ್‌ಗಳನ್ನು ಬಿಡುಗಡೆ ಮಾಡಿರುವುದು ಹೆಮ್ಮೆ ಎನಿಸಿದೆ.[ಮೊಳಕಾಲ್ಮೂರು ಸೀರೆಗೂ ಹತ್ತಿದ ತೆಲಂಗಾಣ ಕಿಚ್ಚು]
ಅಕ್ಟೋಬರ್ 17ರ ಶನಿವಾರದಂದು ವಿಂಟೇಜ್ ಸೀರೆಗಳ ಸ್ಪರ್ಧೆಯನ್ನು ಕೆ.ಎಸ್.ಐ.ಸಿ. ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 126 ಸ್ಪರ್ಧಿಗಳ ಪೈಕಿ 3 ಜನರಿಗೆ ತಲಾ 15,000 ರೂ, 25 ಜನರಿಗೆ ತಲಾ 1,500 ರೂ. ಬಹುಮಾನ ನೀಡಲಾಯಿತು' ಎಂದು ಡಿ. ಬಸವರಾಜ ತಿಳಿಸಿದರು.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications