ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾದ ನಂಜನಗೂಡು ಶ್ರೀಕಂಠೇಶ್ವರ

ಮೈಸೂರು, ಜೂ. 20 : ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಐತಿಹಾಸಿಕ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಹುಂಡಿಯಲ್ಲಿ 1 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಣೆಯಾಗಿದೆ. ಒಂದು ತಿಂಗಳ ಅವಧಿಯಲ್ಲಿ ಸಂಗ್ರಹವಾಗಿರುವ ಹೆಚ್ಚು ಹಣವಿದಾಗಿದೆ.

ಶುಕ್ರವಾರ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯವನ್ನು ಆರಂಭಿಸಲಾಗಿತ್ತು. ದೇವಾಲಯದ 10 ಹುಂಡಿಗಳಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡಲಾಯಿತು. ಒಟ್ಟು 1 ಕೋಟಿ 59 ಸಾವಿರದ 334 ರೂ. ಹಣ ಒಟ್ಟಾರೆ ಸಂಗ್ರಹವಾಗಿದೆ. [ವಿಘ್ನಗಳ ನಡುವೆ ನಂಜನಗೂಡಿನ ರಥೋತ್ಸವ ಸಂಪನ್ನ]

Nanjangud

ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಗಳು ದೇವಾಲಯದ ಆವರಣದಲ್ಲಿ ಮಾಸಿಕ ಹುಂಡಿ ಎಣಿಕೆ ಕಾರ್ಯವನ್ನು ಮಾಡಿದರು. ಸ್ತ್ರೀಶಕ್ತಿ ಸಂಘಗಳ ಮಹಿಳಾ ಸದಸ್ಯರ ನೆರವಿನೊಂದಿಗೆ ಈ ಕಾರ್ಯ ನಡೆಯಿತು. 65 ಗ್ರಾಂ. ಚಿನ್ನ ಮತ್ತು 3.5 ಕೆಜಿ ಬೆಳ್ಳಿ ಮತ್ತು 11 ವಿದೇಶಿ ಕರೆನ್ಸಿಗಳೂ ಸಹ ಹುಂಡಿಯಲ್ಲಿ ಸಿಕ್ಕಿವೆ. [ನಂಜನಗೂಡು ಹಲ್ಲುಪುಡಿಗೆ 100!]

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಯಪ್ರಕಾಶ್, ಎಇಒ ಗಂಗಯ್ಯ, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಎಸ್.ಮೋಹನ್, ಸದಸ್ಯರಾದ ಶಿವನಾಗಪ್ಪ, ಮಲ್ಲಿಕಾರ್ಜುನ್ ಮುಂತಾದವರು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಅಂದಹಾಗೆ ನಂಜನಗೂಡಿನಲ್ಲಿ ಏಪ್ರಿಲ್‌ 1ರಂದು ವಾರ್ಷಿಕ ರಥೋತ್ಸವ ನಡೆದಿತ್ತು. ಕಳೆದ ವರ್ಷದಂತೆ ಈ ವರ್ಷವೂ ರಥದ ಚಕ್ರ ಮಾರ್ಗಮಧ್ಯೆ ಸಿಲುಕಿಕೊಂಡು ಭಕ್ತರಲ್ಲಿ ಆತಂಕ ಮೂಡಿಸಿತ್ತು. ಜೆಸಿಬಿ ನೆರವಿನಿಂದ ರಥವನ್ನು ಮೇಲೆತ್ತಿ ರಥೋತ್ಸವ ನಡೆಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+