ದಸರೆ ಮುಗಿದು 3 ತಿಂಗಳಾಯ್ತು, ಇನ್ನೂ 12 ಕೋಟಿ ಅನುದಾನ ಬಂದಿಲ್ಲ!

ಮೈಸೂರು, ಜನವರಿ 2: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ 15 ಕೋಟಿಗೂ ಅಧಿಕ ಖರ್ಚಾಗಿದ್ದು, ಸರ್ಕಾರದಿಂದ ಕೇವಲ 3 ಕೋಟಿ ಬಿಡುಗಡೆಯಾಗಿದೆ. ಹೀಗಾಗಿ, ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ನೂರಾರು ಕಲಾವಿದರು, ಯುವ ದಸರಾದಲ್ಲಿ ಕಾರ್ಯಕ್ರಮ ನೀಡಿದ ವಿದ್ಯಾರ್ಥಿಗಳ ಖಾತೆಗೆ ಇನ್ನೂ ಹಣ ಸೇರಿಲ್ಲ.‌

ದಸರೆ ಮುಗಿದು ಮೂರು ತಿಂಗಳಾಗಿದ್ದು, 12 ಕೋಟಿ ಅನುದಾನ ಬರಬೇಕಿದೆ. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು, ಏಜೆನ್ಸಿಗಳು, ಉಪಸಮಿತಿಗಳ ಕಾರ್ಯದರ್ಶಿಗಳು ಹಣ ಪಾವತಿಸುವಂತೆ ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಧಿಕಾರಿಗೆ ನಿತ್ಯ ಮನವಿ ಮಾಡುತ್ತಿದ್ದಾರೆ. ಜಿಲ್ಲಾಡಳಿತವು ಈ ವಿಚಾರವನ್ನು ಪತ್ರ ವ್ಯವಹಾರದ ಮೂಲಕ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಗಮನಕ್ಕೂ ತಂದಿದೆ.

ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಯುವ ಸಂಭ್ರಮ ಹಾಗೂ ಯುವ ದಸರಾ ಕಾರ್ಯಕ್ರಮದಲ್ಲಿ ಸುಮಾರು 162 ಕಾಲೇಜುಗಳಿಂದ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಿಗೆ ಸುಮಾರು 72 ಲಕ್ಷ ಹಣ ಪಾವತಿಸಬೇಕಿದೆ. ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಗಮನಕ್ಕೆ ತಂದಿದ್ದು, ಶೀಘ್ರವೇ ಹಣ ಬಿಡುಗಡೆಯಾಗುವ ಭರವಸೆ ಇದೆ ಎನ್ನುತ್ತಾರೆ ಅಧಿಕಾರಿಗಳು.

In Dasara celebrations 15 crore has been spent

ಮೆರವಣಿಗೆಯಲ್ಲಿ ಸಾಗಿದ ಸ್ತಬ್ಧಚಿತ್ರ ನಿರ್ಮಿಸಲು ಏಜೆನ್ಸಿಗಳಿಗೆ ಗುತ್ತಿಗೆ ನೀಡಲಾಗಿತ್ತು. ಅವರಿಗೂ ಪೂರ್ಣ ಹಣ ಲಭಿಸಿಲ್ಲ. ಯುವ ದಸರೆಯಲ್ಲಿ ಭಾಗವಹಿಸಿದ್ದ ಹೊರ ರಾಜ್ಯದ ಕಲಾವಿದರಿಗೆ ಪೂರ್ಣ ಹಣ ಪಾವತಿಸಲಾಗಿದೆ. ಜೊತೆಗೆ ಅವರ ವಿಮಾನದ ಖರ್ಚು ಕೂಡ ಭರಿಸಲಾಗಿದೆ. ಆದರೆ, ರಾಜ್ಯದ ಕೆಲ ಕಲಾವಿದರಿಗೆ ಹಣ ನೀಡದೆ ಸತಾಯಿಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಆದ್ದರಿಂದ ದಸರೆ ಮುಗಿದರೂ ಮಾತ್ರ ಈ ಘಟನೆ ಮರುಕಳಿಸುತ್ತಿರುವುದು ಖೇದಕರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+