ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ನಾನು ಸಿಎಂ ಆಗಿದ್ದಿದ್ರೆ ಪ್ರತಿ ಕುಟುಂಬಕ್ಕೆ 10 ಸಾವಿರ ರೂಪಾಯಿ ಕೊಡ್ತಿದ್ದೆ"

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 05: "ನಾನು ಸಿಎಂ ಆಗಿದ್ದರೆ ಕುಟುಂಬಕ್ಕೆ 10 ಸಾವಿರ ರೂ ನೀಡುತ್ತಿದ್ದೆ. ಬರೋಬ್ಬರಿ 1 ಕೋಟಿ ಕುಟುಂಬಗಳಿಗೆ 10 ಸಾವಿರ ಕೊಡುತ್ತಿದ್ದೆ" ಎಂದು ಹೇಳಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.

Recommended Video

Monsoon Begin right on time | Karnataka Forecast | Oneindia Kannadaa

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸರ್ಕಾರ ಇನ್ನೂ ಮೂರು ತಿಂಗಳು ಶಾಲೆಗಳನ್ನು ತೆರೆಯಬಾರದು. ರಾಜ್ಯ ಸರ್ಕಾರಕ್ಕೆ ಇದು ನನ್ನ ಸಲಹೆ. ಸಾಧ್ಯವಾದರೆ ಎರಡು ಶಿಫ್ಟ್ ನಲ್ಲಿ ಕ್ಲಾಸ್ ಮಾಡಬೇಕು. ಮಕ್ಕಳಿಗೆ ಕೊರೊನಾ ತಗುಲಿದರೆ ಇಡೀ ಕುಟುಂಬಕ್ಕೆ ಹರಡುತ್ತೆ. ಸರ್ಕಾರ ಪೂರ್ವ ಸಿದ್ದತೆ ಮಾಡಿಕೊಂಡು ಶಾಲೆ ತೆರೆಯಬೇಕು. ಸಚಿವ ಸುರೇಶ್ ಕುಮಾರ್‌ಗೆ ಈ ಬಗ್ಗೆ ಮಾತನಾಡುತ್ತೇನೆ. ಎಲ್ಲ ರೀತಿಯ ಶಾಲೆಗಳಿಗು ಇದು ಅನ್ವಯ ಆಗಬೇಕು. ಈಗಲೇ ಶಾಲೆ ಆರಂಭಿಸಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಸಲಹೆಯನ್ನೂ ನೀಡಿದ್ದಾರೆ.

ಸಿದ್ದರಾಮಯ್ಯ, ಡಿಕೆಶಿ 'ರಾಜಕೀಯ ಜ್ಞಾನ'ದ ಬಗ್ಗೆ ಈಶ್ವರಪ್ಪ ವಿವರಣೆ ಸಿದ್ದರಾಮಯ್ಯ, ಡಿಕೆಶಿ 'ರಾಜಕೀಯ ಜ್ಞಾನ'ದ ಬಗ್ಗೆ ಈಶ್ವರಪ್ಪ ವಿವರಣೆ

 ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ

ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ

ಕೊರೊನಾ ವೈರಸ್ ಗೆ ಯಾವುದೇ ಔಷಧಿ ಕಂಡುಹಿಡಿದಿಲ್ಲ. ಮಾಸ್ಕ್ ಹಾಕೋಳೋದು, ಸ್ಯಾನಿಟೈಸ್ ಮಾಡಿಕೊಳ್ಳುವುದೇ ಇದಕ್ಕೆ ಮದ್ದು. ಇದಕ್ಕೆ ಔಷಧ ಕಂಡು ಹಿಡಿಯುವವರೆಗೂ ತಾಳ್ಮೆಯಿಂದ ಇರಬೇಕು. ಫ್ರಾನ್ಸ್‌ನಲ್ಲಿ ಇದೇ ರೀತಿ ಶಾಲೆ ತೆರೆದು ಮಕ್ಕಳಿಗೆ ಕೊರೊನಾ ವೈರಸ್ ತಗುಲಿದೆ. ಆದ್ದರಿಂದ ಸರ್ಕಾರ ಶಾಲೆ ತೆರೆಯಲು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಶಾಲೆಯನ್ನು ಈಗಲೇ ಆರಂಭಿಸಬಾರದು ಎಂದು ಸಲಹೆ ನೀಡಿದರು.

"ಇವರನ್ನು ಪ್ರಶ್ನಿಸಲೆಂದೇ ವಿರೋಧ ಪಕ್ಷವಿರೋದು"

ವಿರೋಧ ಪಕ್ಷವಾಗಿ ಬಿಜೆಪಿಗೆ ಸಹಕಾರ ನೀಡಿದೆ. ಆದರೆ ಬಿಜೆಪಿಗೆ ಕೊರೊನಾ ನಿಭಾಯಿಸಲು ಬರಲಿಲ್ಲ. ಇವರಿಗೆ ಸರಿಯಾದ ಬದ್ಧತೆಯೂ ಇಲ್ಲ. ಕೇರಳದಲ್ಲಿ ಮೊದಲ ಪ್ರಕರಣ ಬಂದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಇವರು ಏಪ್ರಿಲ್ ವರೆಗು ಸುಮ್ಮನಿದ್ದು, ಏನ್ ಮಾಡಿದ್ರು? ಚಪ್ಪಾಳೆ ತಟ್ಟಿಸಿದ್ರು, ಮಧ್ಯರಾತ್ರಿಯೇ ಲಾಕ್ ಡೌನ್ ಜಾರಿ ಮಾಡಿದ್ರು. ಜನರಿಗೆ ಸಿದ್ಧತೆ ಮಾಡಿಕೊಳ್ಳಲು ಸಮಯ ನೀಡಲಿಲ್ಲ. ಇದರಿಂದ ಎಷ್ಟೋ ಕಾರ್ಮಿಕರಿಗೆ, ಬಡ ವರ್ಗದವರಿಗೆ ತೊಂದರೆ ಆಗಿದೆ. ಇದನ್ನು ಪ್ರಶ್ನಿಸೋದು, ಕೇಳೋದು ತಪ್ಪಾ? ಇದನ್ನು ಕೇಳಲೆಂದೇ ನಾವು ವಿರೋಧ ಪಕ್ಷದಲ್ಲಿರೋದು ಎಂದು ಕಿಡಿಕಾರಿದರು.

ಶಾಲೆಗಳ ಆರಂಭ; ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆಗಳುಶಾಲೆಗಳ ಆರಂಭ; ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆಗಳು

 ಖರ್ಗೆ ಹೆಸರಿಗೆ ಒಪ್ಪಿಗೆ ಸೂಚಿಸಿದ್ದ ಸಿದ್ದರಾಮಯ್ಯ

ಖರ್ಗೆ ಹೆಸರಿಗೆ ಒಪ್ಪಿಗೆ ಸೂಚಿಸಿದ್ದ ಸಿದ್ದರಾಮಯ್ಯ

ರಾಜ್ಯಸಭೆ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್‌ನ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದ್ದು, ಕರ್ನಾಟಕದಿಂದ ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿ ಎಂದು ಎಐಸಿಸಿ ಘೋಷಣೆ ಮಾಡಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಖರ್ಗೆ ಹೆಸರಿಗೆ ಒಪ್ಪಿಗೆ ಸೂಚಿಸಿದ್ದರು. "ನನ್ನ ಶಿಫಾರಸ್ಸು ಖರ್ಗೆ ಅಂತ ಹೇಳಿದ್ದೆ. ವೇಣುಗೋಪಾಲ್ ಅವರಿಗೆ ಈ ಬಗ್ಗೆ ಹೇಳಿದ್ದೆ. ಕೊಪ್ಪಳದಲ್ಲಿ, ನಾನು ಆಸಕ್ತಿ ಇದ್ದರೆ ಖರ್ಗೆ ಹೆಸರು ಶಿಫಾರಸ್ಸು ಮಾಡ್ತಿವಿ ಎಂದಿದ್ದೆ. ಹಾಗೇ ಮಾಡಿದೆ" ಎಂದಿದ್ದಾರೆ.

"ನಾನು ಸಿಎಂ ಆಗಿದ್ರೆ ಕುಟುಂಬಕ್ಕೆ 10 ಸಾವಿರ ರೂ. ನೀಡುತ್ತಿದ್ದೆ"

ನಾನು ಸಿಎಂ ಆಗಿದ್ದರೆ ಕುಟುಂಬಕ್ಕೆ 10 ಸಾವಿರ ರೂ ನೀಡುತ್ತಿದ್ದೆ. ಬರೋಬ್ಬರಿ 1 ಕೋಟಿ ಕುಟುಂಬಗಳಿಗೆ 10 ಸಾವಿರ ಕೊಡುತ್ತಿದ್ದೆ. ಇದನ್ನು ಯಡಿಯೂರಪ್ಪ ಅವರಿಗೆ ಹೇಳುತ್ತಿದ್ದೇನೆ. ಸಾಲ ತೆಗೆದುಕೊಂಡು 10,000 ಕೋಟಿ ರೂ. ಜನರಿಗೆ ಖರ್ಚು ಮಾಡುತ್ತಿದ್ದೆ. ಬಜೆಟ್‌ನಲ್ಲಿ 53 ಸಾವಿರ ಕೋಟಿ ಸಾಲ ಪಡಿತೀನಿ ಅಂತಾರೆ ಸಿಎಂ ಯಡಿಯೂರಪ್ಪ. ಅದರಲ್ಲಿ 1 ಕೋಟಿ‌ ಕುಟುಂಬದವರಿಗೆ 10 ಸಾವಿರ ರೂ. ನೀಡಬಹುದಿತ್ತು ಎಂದು

English summary
"I would have give 10 thousand to family if i am in place of yediyurappa" said former cm Siddaramaiah in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X