ಕುಮಾರಸ್ವಾಮಿ ಸಿಎಂ ಆಗಲು 'ಈ ದೇವಿ'ಯ ಆಶೀರ್ವಾದವೇ ಕಾರಣವಂತೆ

Recommended Video

      Lok Sabha Elections 2019 : ಕುಮಾರಸ್ವಾಮಿ ಸಿಎಂ ಆಗಲು ಆಶೀರ್ವಾದವೇ ಕಾರಣವಂತೆ

      ಮೈಸೂರು, ಮಾರ್ಚ್ 1 : ನಾನು ಮುಖ್ಯಮಂತ್ರಿ ಆಗಲು ತ್ರಿಪುರ ಸುಂದರಿ ಅಮ್ಮನನ್ನು ಪೂಜಿಸಿದ್ದೇ ಕಾರಣ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

      ಟಿ.ನರಸೀಪುರದ ಮೂಗೂರಿನಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿಯಾಗಿಯೇ ಮೂಗೂರು ಒಳಗೆ ಬರುತ್ತೇನೆಂದು ಹರಕೆ ಹೊತ್ತಿದ್ದೆ. ಈಗ ಸಿಎಂ ಸ್ಥಾನ ಸಿಕ್ಕಿರುವುದರಿಂದ ತಾಯಿಯ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಹೇಳಿದರು.

      ಈ ಕಾರಣ ತ್ರಿಪುರ ಸುಂದರಿ ಅಮ್ಮನ ದೇವಾಲಯದ ಅಭಿವೃದ್ಧಿಗೆ ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ. ಈ ದೇಗುಲದ ಅಭಿವೃದ್ಧಿಯಾಗಬೇಕು. ತಾಯಿಯ ಆರ್ಶೀವಾದ ಇದ್ದರೆ ರಾಜ್ಯದಲ್ಲಿ ಮಳೆ- ಬೆಳೆಯಾಗುತ್ತದೆ. ನನಗಾಗಿ ಏನೂ ಬೇಡಿಕೊಂಡಿಲ್ಲ. ನನ್ನಿಂದ ಈ ರಾಜ್ಯದ ಜನರ ಕಷ್ಟಗಳನ್ನು ಪರಿಹರಿಸುವಂತೆ ಬೇಡಿಕೊಂಡಿದ್ದೇನೆ ಎಂದರು.

      I became chief minister because of Goddess Tripurasudari devi worship, said HDK

      ನಮ್ಮ ಯೋಜನೆಗಳು ಮನೆಮನೆಗೆ ತಲುಪಬೇಕು. ಇನ್ನು ರೈತರು ಆತ್ಮಹತ್ಯೆಗೆ ಮುಂದಾಗಬಾರದು. ಸಮಸ್ಯೆಗಳನ್ನು ಒಂದೇ ರಾತ್ರಿಗೆ ಬದಲಾಯಿಸಲು ಆಗುವುದಿಲ್ಲ. ಹಾಗಾಗಿ ಸ್ವಲ್ಪ ಸಮಯದಲ್ಲಿ ಎಲ್ಲವೂ ಬದಲಾವಣೆ ಆಗಲಿದೆ. ಎಲ್ಲರಿಗೂ ತ್ರಿಪುರ ಸುಂದರಿ ತಾಯಿ ಒಳ್ಳೆಯದು ಮಾಡಲಿ ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+