ನಾನು ಜ್ಯೋತಿಷಿ ಅಲ್ಲ, ಆಶಾವಾದಿ ಎಂದ ಡಿಕೆ ಶಿವಕುಮಾರ್
ಮೈಸೂರು, ನವೆಂಬರ್ 27: ನಾನು ಜ್ಯೋತಿಷಿ ಅಲ್ಲ, ಆಶಾವಾದಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಹಾರಾಷ್ಟ್ರದ ರಾಜಕಾರಣ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರುವುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಜ್ಯೋತಿಷಿ ಅಲ್ಲ, ಆಶಾವಾದಿ ಎಂದು ಹೇಳಿದರು.
ರಾಜ್ಯ ರಾಜಕಾರಣದ ಬಗ್ಗೆ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ನುಡಿದಿದ್ದಾರೆ. ಚುನಾವಣೆ ಬಗ್ಗೆ ಹಲವು ನಾಯಕರು ಮಾತನಾಡುವುದನ್ನು ನೋಡಿದ್ದೇನೆ. ನಾನು ಭವಿಷ್ಯ ನುಡಿಯಲ್ಲ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ ಎಂದರು.

ಸ್ವಾರ್ಥ ಬಿಟ್ಟು ರಾಜ್ಯದ ವಿಚಾರದಲ್ಲಿ ಚಿಂತನೆ ನಡೆಸಬೇಕು, ರಾಜ್ಯಕ್ಕೆ ಗೌರವ ಸಿಗಬೇಕು ಸಂವಿಧಾನಕ್ಕೆ ಗೌರವ ಸಿಗಬೇಕು. ರಾಜಕಾರಣಿಗಳಿಗೂ ಗೌರವ ಸಿಗಬೇಕು.
ಇತ್ತೀಚಿನ ಬೆಳವಣಿಗೆ ರಾಜಕಾರಣಿಗಳಿಗೆ ಗೌರವ ಸಿಗುತ್ತಿಲ್ಲ. ಅದು ಆಗಲಿ ಅಂತ ಬಯಸುತ್ತೇನೆ ಎಂದು ನುಡಿದರು.
ವಕೀಲರಿಗೆ ಕೃತಜ್ಞತೆ ಸಲ್ಲಿಸಿದ, ಕಷ್ಟ ಕಾಲದಲ್ಲಿ ಸಹಕಾರ ನೀಡಿದಕ್ಕೆ ಧನ್ಯವಾದ ಸಮರ್ಪಿಸಿದರು. ನನ್ನ ಪರವಾಗಿ ಹೋರಾಟ ಮಾಡಿದ್ದಕ್ಕೆ ಧನ್ಯವಾದ, ನ್ಯಾಯಾಂಗದ ಮೇಲೆ ವಿಶ್ವಾಸವಿದೆ ಎಂದರು.












Click it and Unblock the Notifications