ಹುಣಸೂರು: ಮತದಾರರಿಗೆ ಭರ್ಜರಿ ಬಾಡೂಟ, ದೂರು ದಾಖಲು

ಮೈಸೂರು, ನವೆಂಬರ್ 23: ಹುಣಸೂರು ಕ್ಷೇತ್ರದಲ್ಲಿ ಮತದಾರರಿಗೆ ಭರ್ಜರಿ ಬಾಡೂಟ ಉಣಬಡಿಸಿದ್ದು, ಈ ಸಂಬಂಧ ಚುನಾವಣಾ ಆಯೋಗ ದೂರು ದಾಖಲಿಸಿಕೊಂಡಿದೆ.

ಹುಣಸೂರಿನ ಕಾಂಗ್ರೆಸ್ ಅಭ್ಯರ್ಥಿ ಎಚ್‌.ಪಿ.ಮಂಜುನಾಥ ಮತ್ತು ಶಾಸಕ ಅನಿಲ್ ಚಿಕ್ಕಮಾದು ಕಡೆಯಿಂದ ಚಿಕ್ಕಮ್ಮ ದೇವಿ ಬೆಟ್ಟದಲ್ಲಿ ಭರ್ಜರಿ ಬಾಡೂಟ ನಿನ್ನೆ ಏರ್ಪಡಿಸಲಾಗಿತ್ತು.

ಹದಿನೈದಕ್ಕೂ ಹೆಚ್ಚು ಬಸ್ಸುಗಳಲ್ಲಿ ಮತದಾರರನ್ನು ಚಿಕ್ಕಮ್ಮ ದೇವಿ ಬೆಟ್ಟಕ್ಕೆ ಕರೆದುಕೊಂಡು ಬರಲಾಗಿತ್ತು. ಚುನಾವಣಾ ಆಯೋಗದ ಕಣ್ಣು ತಪ್ಪಿಸಲೆಂದು ದೂರ ಬೆಟ್ಟದಲ್ಲಿ ಭೋಜನ ಕೂಟ ಆಯೋಜಿಸಲಾಗಿತ್ತು.

Hunasuru Constituency: Non Veg Party To Voters

ಆದರೆ ಈ ಬಗ್ಗೆ ಮಾಹಿತಿ ಪಡೆದ ಬಿಜೆಪಿಯು ಕ್ಷೇತ್ರದ ಚುನಾವಣಾ ಅಧಿಕಾರಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿ ಪೂವಿಕಾ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ.

ಮತದಾರರಿಗೆ ಬಾಡೂಟ ಹಾಕಿಸಿ ಆಮಿಷ ಒಡ್ಡಿರುವುದಾಗಿ ಬಿಳಿಗೆರೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸವರಾಜು ವಿರುದ್ಧ ಪ್ರಕರಣ ದಾಖಲಾಗಿದೆ.

ಹುಣಸೂರು ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿದ್ದು, ಬಿಜೆಪಿಯಿಂದ 'ಅನರ್ಹ' ಎಚ್.ವಿಶ್ವನಾಥ್ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಎಚ್‌.ಪಿ.ಮಂಜುನಾಥ ಮತ್ತು ಜೆಡಿಎಸ್‌ ನಿಂದ ಸೋಮಶೇಖರ ಸ್ಪರ್ಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+