Get Updates
Get notified of breaking news, exclusive insights, and must-see stories!

ಮೈಸೂರಿನ ಲಕ್ಷ್ಮಣ ತೀರ್ಥದಲ್ಲಿ ಆಂಜನೇಯ ಶಿಲ್ಪ ಪತ್ತೆಯಾಗಿದ್ದು ಹೇಗೆ?

ಮೈಸೂರು, ಜನವರಿ 15: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯಾಗುತ್ತಿರುವ ಈ ಸಮಯದಲ್ಲಿಯೇ ಲಕ್ಷ್ಮಣ ತೀರ್ಥ ನದಿಯಲ್ಲಿ ಪ್ರಾಚೀನ ಆಂಜನೇಯ ಮೂರ್ತಿಯ ಶಿಲ್ಪ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದ್ದು, ಇದನ್ನು ಇತಿಹಾಸ ಸಂಶೋಧಕರಾದ ಡಾ.ಎಸ್.ಜಿ.ರಾಮದಾಸ ರೆಡ್ಡಿ ಅವರು ಗ್ರಾಮಸ್ಥರ ಸಹಕಾರದೊಂದಿಗೆ ಶೋಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ಬನ್ನಿಕುಪ್ಪೆ ಹೋಬಳಿಯ ಮರದೂರು ಗ್ರಾಮದಲ್ಲಿ ಹರಿದು ಹೋಗುವ ಲಕ್ಷ್ಮಣ ತೀರ್ಥ ನದಿಯ ಮಧ್ಯಭಾಗದಿಂದ ಶೋಧಿಸಿ ಆಂಜನೇಯ ಮೂರ್ತಿಶಿಲ್ಪವನ್ನು ತೆಗೆಯಲಾಗಿದೆ. ಇದು ಸುಮಾರು 15-16ನೇ ಶತಮಾನದ ಪ್ರಾಚೀನ ಶಿಲ್ಪ ಎಂದು ಹೇಳಲಾಗಿದೆ. ಇನ್ನು ಈ ಶಿಲ್ಪವನ್ನು ದನಕಾಯುವ ಹುಡುಗರು ದನಗಳಿಗೆ ನೀರು ಕುಡಿಸಲು ನದಿಯ ಮಧ್ಯಭಾಗಕ್ಕೆ ಹೋದಾಗ ಅಂಜನೇಯ ಮೂರ್ತಿ ಶಿಲ್ಪವೊಂದು ಇರುವುದನ್ನು ನೋಡಿ ಗ್ರಾಮಸ್ಥರ ಗಮನಕ್ಕೆ ತಂದಿದ್ದರು.

How Was The Sculpture Of Anjaneya Found In Lakshmana Tirtha?

ಕೂಡಲೇ ಗ್ರಾಮದ ಮುಖಂಡರಾದ ಅಶೋಕರವರು ಮೈಸೂರಿನ ಇತಿಹಾಸ ಸಂಶೋಧಕರಾದ ಡಾ.ಎಸ್.ಜಿ.ರಾಮದಾಸರೆಡ್ಡಿ ಅವರ ಗಮನಕ್ಕೆ ತಂದಿದ್ದರು. ಹೀಗಾಗಿ ಗ್ರಾಮಕ್ಕೆ ಸ್ನೇಹಿತರಾದ ಗೋಪಾಲಕೃಷ್ಣ ಶೆಟ್ಟಿ ಅವರ ಜೊತೆಗೆ ಆಗಮಿಸಿದ ಸಂಶೋಧಕರಾದ ಡಾ.ಎಸ್.ಜಿ.ರಾಮದಾಸ ರೆಡ್ಡಿ ಅವರು ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀಕುಮಾರ್, ಮುಖಂಡರಾದ ಶ್ರೀರಾಮಶೆಟ್ಟಿ, ಚೌಡನಾಯಕ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ನದಿಯಲ್ಲಿ ಸಂಚರಿಸಿ ಶಿಲ್ಪವನ್ನು ನೋಡಿ ಇದು ಪ್ರಾಚೀನ ಆಂಜನೇಯ ಮೂರ್ತಿ ಶಿಲ್ಪ ಎಂದು ತಿಳಿಸಿದರಲ್ಲದೆ, ಸುಮಾರು 15-16ನೇ ಶತಮಾನದ ಪ್ರಾಚೀನ ಆಂಜನೇಯ ಮೂರ್ತಿ ಎಂದು ಅಭಿಪ್ರಾಯಪಟ್ಟರು. ಜತೆಗೆ ಎಲ್ಲರ ಸಹಕಾರದೊಂದಿಗೆ ಅಂಜನೇಯ ಮೂರ್ತಿಶಿಲ್ಪವನ್ನು ಲಕ್ಷ್ಮಣ ತೀರ್ಥ ನದಿಯ ದಡದ ಮೇಲಿರುವ ಮಂಟಪದಲ್ಲಿ ಇಟ್ಟು ಸಂರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಜನೇಯ ಮೂರ್ತಿ ಶಿಲ್ಪ ಹೇಗಿದೆ?

ಮಂಟಪದಲ್ಲಿ ಗರ್ಭಗುಡಿ, ಹೊರಾಂಡ ಇದೆ. ಈ ಮಂಟಪವನ್ನು ಹಿಂದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಸ್ವಯಂ ಸೇವಕರು ಸಂರಕ್ಷಿಸಿದ್ದರು. ಗರ್ಭಗುಡಿಯಲ್ಲಿ ಪಾಣಿ ಪೀಠವಿದ್ದು, ಈ ಪೀಠದ ಮೇಲೆ ಯಾವ ಮೂರ್ತಿಶಿಲ್ಪವಿತ್ತು ಎಂಬ ಸಂದೇಹವಿತ್ತು. ಈ ಪ್ರಾಚೀನ ಆಂಜನೇಯ ಮೂರ್ತಿಶಿಲ್ಪ ದೊರಕಿದ ಮೇಲೆ ಈ ಮಂಟಪದ ಒಳಗಡೆ ಇರುವ ಪಾಣಿಪೀಠ ಆಂಜನೇಯ ಮೂರ್ತಿಶಿಲ್ಪದ್ದೆಂದು, ಹಾಗೂ ಈ ಮಂಟಪ ಆಂಜನೇಯನ ದೇವಾಲಯವಾಗಿತ್ತೆಂದು ತಿಳಿಯಲು ಹೆಚ್ಚಿನ ಅಧ್ಯಯನದ ಅಗತ್ಯತೆ ಇದೆ.

How Was The Sculpture Of Anjaneya Found In Lakshmana Tirtha?

ಈ ಆಂಜನೇಯ ಮೂರ್ತಿ ಶಿಲ್ಪದ ಎತ್ತರ ಪಾಣಿಪೀಠದಿಂದ ಮೂರುವರೇ ಅಡಿ, ಅಗಲ ಎರಡು ಕಾಲು ಅಡಿ, ಶಿಲ್ಪದ ದಪ್ಪ ಕಾಲು ಅಡಿ, ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿದೆ. ಆಂಜನೇಯ ಮೂರ್ತಿ ಶಿಲ್ಪದ ಬಲಭಾಗದ ಕೈ ಮೇಲೆ ಎತ್ತಿದ್ದು ಆಭಯ ಹಸ್ತ, ಎಡ ಭಾಗದ ಕೈ ಸೊಂಟದ ಮೇಲೆ ಇದೆ. ಕೊರಳಿಗೆ ಕಂಠಾಹಾರ, ತಲೆಗೆ ಕಿರೀಟ, ಮುಂಗೈಗಳಿಗೆ ಕಡಗ, ವೀರಗಚ್ಚೆ ಧರಿಸಿದ್ದಾನೆ. ಆಂಜನೇಯನ ಬಾಲ ಬಲ ಭಾಗದ ಮೂಲಕ ತಲೆಯ ಮೇಲೆ ಭಾಗಿದೆ. ಸ್ಪಷ್ಟತೆ ಇಲ್ಲ. ಶಿಲ್ಪದ ಎಡಭಾಗದ ಮೇಲೆ ಸ್ಪಲ್ಪ ತ್ರುಟಿತವಾಗಿದೆ. ಈ ಶಿಲ್ಪ ಶೈಲಿಯನ್ನು ನೋಡಿದರೆ ವಿಜಯನಗರ ಸಾಮ್ರಾಜ್ಯದ ಕಾಲದ ವ್ಯಾಸತೀರ್ಥರ ಪ್ರತಿಷ್ಠಾನ ಆಗಿದೆ. ಅಂದರೆ 15-16ನೇ ಶತಮಾನದ ಶಿಲ್ಪವಾಗಿದೆ.

ಆಂಜನೇಯ ಮೂರ್ತಿ ಶಿಲ್ಪ ಬಂದಿದ್ದೇಗೆ?

ಲಕ್ಷ್ಮಣ ತೀರ್ಥ ನದಿಯ ಮಧ್ಯ ಭಾಗಕ್ಕೆ ಮೂರ್ತಿಶಿಲ್ಪ ಹೇಗೆ ಬಂದಿತು ಎಂದು ಗ್ರಾಮದ ಯಜಮಾನರಾದ ಚೌಡನಾಯಕ, ಪುಟ್ಟನಾಯಕ, ರಾಮಶೆಟ್ಟಿ ಅವರನ್ನು ಕೇಳಿದಾಗ ನಮಗೆ 70 ವರ್ಷ ವಯಸ್ಸಾಗಿದೆ. ಇಲ್ಲಿಯವರೆಗೂ ನದಿ ಬತ್ತಿಹೋಗಿರವುದನ್ನು ನಾವು ನೋಡಿರಲಿಲ್ಲ ಈಗ ನದಿ ಒಣಗಿ ಹೋಗಿ ಈ ಶಿಲ್ಪ ಪತ್ತೆಯಾಗಿ ನಮಗೆ ಅಚ್ಚರಿ ತಂದಿದೆ. ಆದರೂ ಗ್ರಾಮದಲ್ಲಿ ಮೂರ್ತಿಶಿಲ್ಪಗಳಿಲ್ಲದ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ಯಾವುದೋ ಒಂದು ದೇವಾಲಯದ ಶಿಲ್ಪ ಇದಾಗಿರ ಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

How Was The Sculpture Of Anjaneya Found In Lakshmana Tirtha?

ಈ ಆಂಜನೇಯ ಮೂರ್ತಿಶಿಲ್ಪವನ್ನು ಲಕ್ಷ್ಮಣತೀರ್ಥ ನದಿ ದಡದ ಮೇಲಿರುವ ಮಂಟಪದಲ್ಲಿ ಸಂರಕ್ಷಿಸಲಾಗಿದೆ. ಮುಂದೆ ಈ ಶಿಲ್ಪವನ್ನು ಸಂರಕ್ಷಿಸುವ ಕಾರ್ಯ ಸಂಬಂಧಪಟ್ಟ ಇಲಾಖೆ ಹಾಗೂ ಪೂಜಾ ಕಾರ್ಯಗಳನ್ನು ಮಾಡುವ ಕಾರ್ಯ ಗ್ರಾಮಸ್ಥರು ಮಾಡ ಬೇಕಿದೆ. ನದಿಯಲ್ಲಿದ್ದ ಅಂಜನೇಯ ಮೂರ್ತಿಶಿಲ್ಪವನ್ನು ಸಂರಕ್ಷಿಸುವಲ್ಲಿ ಸಹಕಾರ ನೀಡಿದ ಗ್ರಾಮದ ಮುಖಂಡರಿಗೆ ಸಂಶೋಧಕ ಡಾ.ಎಸ್.ಜಿ.ರಾಮದಾಸರೆಡ್ಡಿ ಅವರು ಅಭಿನಂದಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+