ದೆಹಲಿ ಜನರ ಮೇಲೆ ಬಿರುಬಿಸಿಲಿನ ಪ್ರತಾಪ
ನವದೆಹಲಿ,
ಜೂ.7 : ಕಳೆದವಾರ ಭಾರೀ ಮಳೆ, ಬಿರುಗಾಳಿಗೆ ಸಾಕ್ಷಿಯಾಗಿದ್ದ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಈ ವಾರದ ಕೊನೆಯಲ್ಲಿ ಬಿಸಿಲ ಝಳ ಹೆಚ್ಚಾಗಿದೆ. ಶನಿವಾರ ರಾಜಧಾನಿಯಲ್ಲಿ ಉಷ್ಣಾಂಶ 45 ಡಿಗ್ರಿಯಾಗಿದ್ದು, ಜನ ಸಾಮಾನ್ಯರು ಮತ್ತು ಪ್ರಾಣಿಗಳು ಬಿಸಿಲ ಝಳದಿಂದಾಗಿ ಕಂಗೆಟ್ಟಿದ್ದಾರೆ. id="toptextpromo"> id='are-slot-1' class='oiad oi-axt oiadv'>ಕಳೆದವಾರ
ಬಿರುಗಾಳಿ ಬಿಸಿ ಮಳೆ ಸುರಿದರೂ ನವದೆಹಲಿಯ ಉಷ್ಣಾಂಶದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಗುರುವಾರ ಮತ್ತು ಶುಕ್ರವಾರ 46, 47 ಡಿಗ್ರಿ ಇದ್ದ ಉಷ್ಣಾಂಶ, ಶನಿವಾರ 45 ಡಿಗ್ರಿಗೆ ಬಂದಿಳಿದಿದೆ. ಬಿರುಬಿಸಿಲಿನಿಂದಾಗಿ ಜನರ ಸಂಚಾರಕ್ಕೆ ವಿಘ್ನ ಉಂಟಾಗಿದೆ. ದೆಹಲಿಯ ಬಿಸಿಲ ಝಳದ ಚಿತ್ರಗಳು ಇಲ್ಲಿವೆ. [ಚಿತ್ರಗಳು : ಪಿಟಿಐ]id='are-slot-2' class='oiad oi-axt oiadv'>

ಅಬ್ಬಾ ಎಂಥ ಬಿಸಿಲು
ನವದೆಹಲಿಯಲ್ಲಿ ಶನಿವಾರವೂ ಬಿಸಿಲಿನ ಝಳ ಹೆಚ್ಚಾಗಿತ್ತು. ಕಾಲೇಜು ವಿದ್ಯಾರ್ಥಿಗಳು ಬಿಸಿಲಿನಲ್ಲೇ ಹೊರಟಿದ್ದರೆ, ಸಿಕ್ಕ ನೆರಳಿನಲ್ಲಿಯೇ ವ್ಯಕ್ತಿಯೊಬ್ಬರು ನಿದ್ರೆಗೆ ಜಾರಿದ್ದರು.

ತಣ್ಣೀರಿನ ಸ್ನಾನ ಮಾಡೋಣ
ದೆಹಲಿಯ ಬಿಸಿಲಿನ ಝಳ ಪ್ರಾಣಿಗಳಿಗೂ ತಟ್ಟಿದೆ ಮೃಗಾಲಯವೊಂದರಲ್ಲಿ ಸಿಕ್ಕ ತಣ್ಣನೆ ನೀರಿನಲ್ಲಿ ಹಕ್ಕಿಯೊಂದು ಮಿಂದು ಬಿಸಿಲಿಗೆ ಹಿಡಿಶಾಪ ಹಾಕಿತು.

ಬೇಗ ಬಾರೇ ಹೋಗೋಣ
ಶನಿವಾರ ನವದೆಹಲಿಯಲ್ಲಿ ಬಿರುಬಿಸಿಲಿನ ನಡುವೆಯೇ ಯುವತಿಯರು ಬೇಗ-ಬೇಗ ಹೆಜ್ಜೆ ಹಾಕುತ್ತಾ ಸಾಗುತ್ತಿರುವುದು.

ಇಲ್ಲೊಂದು ಚೂರು ನೆರಳಿದೆ ಅಲ್ವಾ?
ನವದೆಹಲಿಯ ಬಿಸಿಲ ಝಳಕ್ಕೆ ಪ್ರಾಣಿಗಳು ಕಂಗೆಟ್ಟುಹೋಗಿವೆ. ಮೃಗಾಲಯದಲ್ಲಿ ಸಿಕ್ಕ ನೆರಳಿನ ಆಶ್ರಯದಲ್ಲಿ ಜಿಂಕೆಗಳು ದಣಿವಾರಿಸಿಕೊಂಡವು

ಇವರು ಭಯೋತ್ಪಾದಕರಲ್ಲ
ಇವರ ವೇಷ ನೋಡಿ ಭಯೋತ್ಪಾದಕರು ಎಂದುಕೊಳ್ಳಬೇಡಿ. ದೆಹಲಿಯಲ್ಲಿ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಯುವತಿಯರು ಹೀಗೆ ವೇಷ ತೊಟ್ಟಿದ್ದಾರೆ.

ಅಬ್ಬಾ ಸ್ವಲ್ಪ ಸಮಾಧಾನ ವಾಯ್ತು
ಹುಲಿರಾಯನೂ ದೆಹಲಿಯ ಬಿಸಿಲನ್ನು ನೋಡಿ ಕಂಗೆಟ್ಟು ಹೋಗಿದ್ದಾನೆ. ಮೃಗಾಲಯದಲ್ಲಿ ಸಿಕ್ಕ ನೀರಿನಲ್ಲಿ ಮಿಂದೆದ್ದು, ಸಮಾಧಾನ ಮಾಡಿಕೊಳ್ಳುತ್ತಿದ್ದಾನೆ.

ಎಲ್ಲರೂ ಬನ್ರಪ್ಪ ಸ್ನಾನ ಮಾಡೋಣ
ಮಕ್ಕಳಿಗೂ ದೆಹಲಿಯ ಬಿಸಿಲಿನ ಬಿಸಿ ಮುಟ್ಟಿದೆ. ರಾಜಪಥ್ ಸಮೀಪದ ಕೊಳವೊಂದರಲ್ಲಿ ಚಿಣ್ಣರು ನೀರಾಟವಾಡುವ ಮೂಲಕ ದಣಿವಾರಿಸಿಕೊಂಡರು.












Click it and Unblock the Notifications