ಮೈಸೂರು ಮಳೆಗೆ ಮಹಾನಗರ ಪಾಲಿಕೆಯೂ ತತ್ತರ!
ಮೈಸೂರಿನಲ್ಲಿ ನಿನ್ನೆ ಸುರಿದ ಮಳೆಗೆ ಮೈಸೂರು ಮಹಾನಗರ ಪಾಲಿಕೆಯ ಜನನ-ಮರಣ ಪ್ರಮಾಣ ಪತ್ರ ವಿಭಾಗದ ಕಚೇರಿಗೂ ನೀರು ನುಗ್ಗಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
ಮೈಸೂರು, ಮೇ 19: ಅರಮನೆ ನಗರಿ ಮೈಸೂರಿನಲ್ಲಿ ನಿನ್ನೆ (ಮೇ 18) ಸುರಿದ ಭಾರೀ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಶೋಚನೀಯವೆಂದರೆ ಇಲ್ಲಿನ ಮಹಾನಗರ ಪಾಲಿಕೆಯ ಜನನ-ಮರಣ ಪ್ರಮಾಣ ಪತ್ರ ವಿಭಾಗದ ಕಚೇರಿಗೂ ನೀರು ನುಗ್ಗಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
ಕಚೇರಿಯಿಂದ ಮಹತ್ವದ ದಾಖಲೆಗಳನ್ನು ಸಂರಿಕ್ಷಿಸಲಾಗಿದ್ದು, ಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ, ಅಭಯ ತಂಡದಿಂದ ಕಾರ್ಯಾಚರಣೆ ನಡೆದಿದೆ.

ಒಂದು ನಗರದ ಎಲ್ಲಾ ಮಹತ್ವದ ದಾಖಲೆಗಳನ್ನು ಒಳಗೊಂಡಿರುವ ಕೇಂದ್ರವಾಗಿರುವ ಮಹಾನಗರ ಪಾಲಿಕೆಗೇ ಮಳೆಯಿಂದ ಸರಿಯಾದ ರಕ್ಷಣೆ ಇಲ್ಲ ಎಂಬುದು ಶೋಚನೀಯವೆನ್ನಿಸಿದರೂ ಸತ್ಯ!












Click it and Unblock the Notifications