ಕಾಂಗ್ರೆಸ್ ವಿರುದ್ಧ ಮತ್ತೆ ಗರಂ ಆದ ಸಿಎಂ ಎಚ್.ಡಿ. ಕುಮಾರಸ್ವಾಮಿ
ಮೈಸೂರು, ಫೆಬ್ರವರಿ 19: ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಗರಂ ಆಗಿದ್ದಾರೆ.
ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಸಿಎಂ, "ನಾವು ಬೆಗ್ಗರ್ಸ್ ಅಲ್ಲ. ನಮಗೆ ಏಳೋ, ಐದೋ, ಮೂರೋ ಸೀಟು ಬಿಟ್ಟು ಕೊಡ್ತಾರೋ ಗೊತ್ತಿಲ್ಲ. ವೀ ಆರ್ ನಾಟ್ ಬೆಗ್ಗರ್ಸ್" ಎಂದು ಸಿಟ್ಟಾದರು.
ರಾಷ್ಟ್ರಕ್ಕೆ ಒಂದು ಸಂದೇಶ ರವಾನೆ ಆಗಬೇಕಾದರೆ ಎಲ್ಲರೂ ಕೂತು ಸೀಟು ಹಂಚಿಕೆ ಬಗ್ಗೆ ಚರ್ಚೆ ಮಾಡಬೇಕು.ಆಡಳಿತದ ಕಡೆಗೆ ನಾನು ಗಮನಹರಿಸಿದ್ದೇನೆ. ನಮ್ಮ ರಾಷ್ಟ್ರಧ್ಯಕ್ಷರು ಕಾಂಗ್ರೆಸ್ ಜೊತೆ ಕೂತು ಮಾತಾಡಿ ಸೀಟು ಹಂಚಿಕೆ ಮಾಡಿಕೊಳ್ತಾರೆ.ನಾನು ಈ ಸ್ಥಾನ ಹಂಚಿಕೆ ಬಗ್ಗೆ ಯೋಚನೆ ಮಾಡಿಲ್ಲ ಎಂದು ಮೈಸೂರಿನಲ್ಲಿ ಎಚ್.ಡಿ.ಕೆ. ಹೇಳಿಕೆ ನೀಡಿದ್ದಾರೆ.

ಲ್ಯಾನ್ಸ್ ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದೊಂದು ಭಾವನಾತ್ಮಕ ಸಂಬಂಧದ ವಿಚಾರ.ಇಂದು ಕಟ್ಟಡ ವೀಕ್ಷಣೆ ಮಾಡಿದ್ದೇನೆ.ಕಟ್ಟಡ ನೆಲಸಮ ಮಾಡೋ ವಿಚಾರ ಸಂಬಂಧ ಯಾವುದೇ ವರದಿ ನನ್ನ ಕೈ ಸೇರಿಲ್ಲ.
ನಾನು ಖುದ್ದು ಕಟ್ಟಡ ವೀಕ್ಷಣೆ ಮಾಡಿದ್ದೇನೆ, ಅಲ್ಲಲ್ಲಿ ಕಟ್ಟಡ ಶಿಥಿಲವಾಗಿದೆ.ಪಾರಂಪರಿಕತೆ, ಭಾವನಾತ್ಮಕ ವಿಚಾರಕ್ಕೆ ಧಕ್ಕೆ ಬಾರದಂತೆ ಅಂತಿಮ ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕಾರಿಗಳು, ತಜ್ಞರು, ಇತಿಹಾಸ ತಜ್ಞರ ಜೊತೆ ಸಭೆ ಮಾಡಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದರು.












Click it and Unblock the Notifications