ಮೈಸೂರು ಸಿಎಫ್ ಟಿಆರ್ ಐ ನಲ್ಲಿ ಕನ್ನಡಿಗರಿಗೆ ಕಿರುಕುಳ

ಮೈಸೂರು, ಜುಲೈ 4 : ಸಿಎಫ್ ಟಿ ಆರ್ ಐ(Central Food Technological Research Institute) ನಿರ್ದೇಶಕರ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಸಂಸ್ಥೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯ ಇಂದು ಭೇಟಿ ನೀಡಿದರು.

ಕಳೆದ ದಿನಗಳ ಹಿಂದೆ ಕನ್ನಡ ನೌಕರರಿಗೆ ಇಲ್ಲಿನ ನಿರ್ದೇಶಕ ರಾಮ್ ರಾಜಶೇಖರ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಕನ್ನಡದ ಅನುಷ್ಠಾನ ಯಾವ ರೀತಿ ಇದೆ ಎಂದು ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಪರಿಶೀಲನೆ ನಡೆಸುತ್ತಿದ್ದು, ಆಡಳಿತದಲ್ಲಿ ಸಾಮರಸ್ಯ ಹಾಳಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

Harassment on Kannadigas: CFTRI Mysuru director accused

ಜತೆಗೆ ಕೇಂದ್ರ ಆಡಳಿತ ಸಂಸ್ಥೆ ಸ್ಥಳೀಯ ಭಾಷಿಕರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಕನ್ನಡ ಘಟಕ ವನ್ನು ಏಕ ಏಕಿ ಕಿತ್ತಿಹಾಕಿದ್ದಿರಿ ಎಂದು ಪ್ರೊ.ರಾಮ್ ರಾಜಶೇಖರನ್ ಗೆ ಎಸ್ ಜಿ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡರು. ಪ್ರಾಧಿಕಾರದ ಅಧ್ಯಕ್ಷರ ಜೊತೆ ಸಾಹಿತಿಗಳು ಸಾಥ್ ನೀಡಿದರು.

Harassment on Kannadigas: CFTRI Mysuru director accused

ನಿದೇರ್ಶಕರಿಂದ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ. ಸಿ ಎಫ್ ಟಿ ಅರ್ ಐ ನಿರ್ದೇಶಕರು ಕನ್ನಡ ವಿರೋಧಿ ಧೊರಣೆ ತೋರುತ್ತಿದ್ದು. ಕನ್ನಡ ನೌಕರರನ್ನು ಕೀಳಾಗಿ ನೋಡಲಾಗುತ್ತಿದೆ ಎಂದು ಸಿಎಫ್ ಟಿಆರ್ ಐ ಕನ್ನಡ ನೌಕರರು ಆರೋಪಿಸಿದ್ದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+