ಸಿದ್ದು ವಿರುದ್ಧ ಅಸಮಾಧಾನ ಹೊರಹಾಕಿದ ವಿಶ್ವನಾಥ್ ಪುತ್ರ ಅಮಿತ್

ಮೈಸೂರು, ಮೇ 10:ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ತಮ್ಮ ತಂದೆ ವಿಶ್ವನಾಥ್ 71ನೇ ಹುಟ್ಟು ಹಬ್ಬದ ಅಂಗವಾಗಿ ರಾಮಾನುಜ ರಸ್ತೆಯಲ್ಲಿರುವ ಕಾಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ನಮ್ಮ ತಂದೆ ಮೇಲೆ ಸಿದ್ದರಾಮಯ್ಯನವರಿಗೆ ಇನ್ನು ಕೂಡ ಕೋಪವಿದೆ.ಹೀಗಾಗಿಯೇ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಡೆಗಣಿಸಿ ದೂರವಿರಿಸಿದ್ದಾರೆ.ಈ ವಯಸ್ಸಿನಲ್ಲೂ ನಮ್ಮ ತಂದೆಯ ಮನಸ್ಸು ನೋಯಿಸುವುದು ನನಗೆ ವೈಯಕ್ತಿಕವಾಗಿ ಬೇಸರವಾಗಿದೆ ಎಂದರು.

H Vishwanath son Amith expressed dissatisfaction against Siddaramaiah

ಸಚಿವ ಜಿಟಿ ದೇವೇಗೌಡ ಜೊತೆ ಅವರು ಯಾವ ರೀತಿ ಹೊಂದಿಕೊಂಡಿದ್ದಾರೋ ಹಾಗೆಯೇ ನಮ್ಮ ತಂದೆಯವರ ಜೊತೆಯೂ ಹೊಂದಿಕೊಂಡು ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

36 ಸಾವಿರ ಮತಗಳಿಂದ ಸೋಲಿಸಿದ ಸಚಿವ ಜಿಟಿಡಿ ಜೊತೆ ವೇದಿಕೆ ಹಂಚಿಕೊಂಡು ಮಾತನಾಡುತ್ತಾರೆ. ಆದರೆ ಅವರನ್ನು ಕಾಂಗ್ರೆಸ್ ಗೆ ಕರೆತಂದು ಇಂದಿನ ಬೆಳವಣಿಗೆಗೆ ಕಾರಣರಾದ ನಮ್ಮ ತಂದೆಯನ್ನೇ ಕಡೆಗಣಿಸಿರುವುದು ಸರಿಯಲ್ಲ. ಹುಣಸೂರಿನ ಜನರು ಕೂಡ ತಂದೆ ಹಾಗೂ ಸಿದ್ದರಾಮಯ್ಯರವರನ್ನು ಒಟ್ಟಿಗೆ ನೋಡಲು ಇಷ್ಟಪಟ್ಟಿದ್ದರು. ಆದರೂ ಬರಲಿಲ್ಲ. ನಮ್ಮ ತಂದೆ ಸಿಟ್ಟು ಮಾಡಿಕೊಳ್ಳದೇ ಕಾಂಗ್ರೆಸ್ ಅಭ್ಯರ್ಥಿ ವಿಜಯ್ ಶಂಕರ್ ಪರ ಪ್ರಚಾರ ಮಾಡಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+