• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಡ್ಡಂಡ ಕಾರ್ಯಪ್ಪ ರಂಗಾಯಣದ ನಿರ್ದೇಶಕರಲ್ಲ: ಎಚ್‌.ವಿಶ್ವನಾಥ್‌

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್‌, 11: ಮೈಸೂರಿನ ರಂಗಾಯಣ ಮತ್ತೊಮ್ಮೆ ಸುದ್ದಿಯಲ್ಲಿದೆ. ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಚಿಸಿ ನಿರ್ದೇಶಿಸುತ್ತಿರುವ 'ಟಿಪ್ಪು ಕನಸುಗಳು' ಎನ್ನುವ ನಾಟಕ ಇದೀಗ ಪರ-ವಿರೋಧ ಚರ್ಚೆ ಹುಟ್ಟು ಹಾಕಿದೆ. ಹಾಗೆಯೇ ಮೈಸೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಡ್ಡಂಡ ಕಾರ್ಯಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಇವರು ರಂಗಾಯಣದ ನಿರ್ದೇಶಕ ಅಲ್ಲ, ಅಡ್ನಾಡಿ ಕಾರ್ಯಪ್ಪ ಎಂದು ವ್ಯಂಗ್ಯವಾಡಿದ್ದಾರೆ.

ಇತ್ತೀಚಿಗೆ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅಡ್ಡಂಡ ಸಿ.ಕಾರ್ಯಪ್ಪ, ''ಟಿಪ್ಪು ಬಗ್ಗೆ ಕೃತಿ ಬರೆದಿದ್ದೇನೆ. ಬೆಂಗಳೂರಿನ ಆಯೋಧ್ಯಾ ಪ್ರಕಾಶನ ಪ್ರಕಟಿಸಿದ್ದು, ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಮುನ್ನುಡಿ ಬರೆದಿದ್ದಾರೆ. ನವೆಂಬರ್‌ 13ರಂದು ನಡೆಯುವ ಕಾರ್ಯಕ್ರಮದಲ್ಲಿ ಅವರೇ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಜೊತೆಗೆ ನವೆಂಬರ್‌ 20ರಂದು ಸಂಜೆ 6 ಗಂಟೆಗೆ ನಾಟಕದ ಪ್ರಥಮ ಪ್ರದರ್ಶನ ರಂಗಾಯಣದ ಭೂಮಿಗೀತದಲ್ಲಿ ನಡೆಯಲಿದೆ. ನಂತರ ನವೆಂಬರ್‌ 21, 24, 26, 27, 30 ಹಾಗೂ ಡಿಸೆಂಬರ್‌ 4ರಂದು ಈ ನಾಟಕ ಪ್ರದರ್ಶನ ಇರಲಿದೆ,'' ಎಂದು ಮಾಹಿತಿ ನೀಡಿದ್ದರು.

ಇದೀಗ ಟಿಪ್ಪು ಕೃತಿ ಹಾಗೂ ನಾಟಕವೇ ವಿವಾದದ ವಸ್ತುವಾಗಿದೆ.
ಅಡ್ಡಂಡ ಕಾರ್ಯಪ್ಪಗೆ ಎಚ್.ವಿಶ್ವನಾಥ್ ಟಾಂಗ್‌ ಮೈಸೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಡ್ಡಂಡ ಕಾರ್ಯಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಇವರು ರಂಗಾಯಣದ ನಿರ್ದೇಶಕ ಅಲ್ಲ, ಅಡ್ನಾಡಿ ಕಾರ್ಯಪ್ಪ ಎಂದು ವ್ಯಂಗ್ಯವಾಡಿದ್ದಾರೆ. ಅಡ್ಡಂಡ ಕಾರ್ಯಪ್ಪ ಪುಸ್ತಕ ಬರೆಯಲು ಟಿಪ್ಪು ಕಾಲದಲ್ಲಿ ಅವರು ಹುಟ್ಟಿದ್ದರಾ? ಟಿಪ್ಪು ನಿಜ ಕನಸುಗಳು ಎನ್ನುವ ನಾಟಕ ಪ್ರದರ್ಶನವನ್ನು ನಾನು ಖಂಡಿಸುತ್ತೇನೆ,'' ಎಂದು ಹರಿಹಾಯ್ದರು.

H Vishwanath said in mysuru Addanda Karyappa is not director of Rangayana

ನಾನು ಯಾವ ಪಕ್ಷದಲ್ಲಿ ಇದ್ದರೂ ಟಿಪ್ಪು ಬಗ್ಗೆ ಮಾತನಾಡುತ್ತೇನೆ. ಟಿಪ್ಪು ಸ್ವಾಭಿಮಾನಿ ಕನ್ನಡಿಗ, ಮೈಸೂರು ಹುಲಿ ಎಂದು ಹೊಗಳಿದ್ದಾರೆ. ಕೊಡಗಿನಲ್ಲಿ ಟಿಪ್ಪು 80 ಸಾವಿರ ಜನರ ಹತ್ಯಾಕಾಂಡ ನಡೆಸಿದ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಆಗ ಮೈಸೂರು ಸಾಮ್ರಾಜ್ಯದ ಜನಸಂಖ್ಯೆ ಎಷ್ಟಿತ್ತು ಎನ್ನುವ ಸಾಮಾನ್ಯ ಜ್ಞಾನ ಬೇಡವೇ? ನಂಜನಗೂಡು ಶ್ರೀಕಂಠೇಶ್ವರನಿಗೆ ಹಕೀಂ ನಂಜುಂಡ ಎಂದು ಹೆಸರಿಟ್ಟವರು ಯಾರು? ಯಾರೋ ಏನೋ ಹೇಳುತ್ತಾರೆ ಎಂದು ಚರಿತ್ರೆ ಬದಲಾಗುವುದಿಲ್ಲ,'' ಎಂದು ಆಕ್ರೋಶ ವ್ಯಕ್ತಪಡಿಸಿದರು.

English summary
Member of Legislative Council H Vishwanath expressed outrage in Mysuru, Addanda Karyappa is not director of Rangayana. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X