ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಂಡ್ಲುಪೇಟೆ: ಕಾರಿನಲ್ಲಿ ಸಿಕ್ತು 20 ಲಕ್ಷ ರೂ.ನಗದು

ಗುಂಡ್ಲುಪೇಟೆಯ ಖಾಸಗಿ ಹೊಟೇಲ್ ಮುಂದೆ ನಿಂತಿದ್ದ ಸಾರಿಗೆ ಸಂಸ್ಥೆಯ ನಿರ್ದೇಶಕರೊಬ್ಬರ ಕಾರಿನಲ್ಲಿ ಎರಡುಸಾವಿರ ಮುಖಬೆಲೆಯ ಹತ್ತು ಕಂತೆ ಪತ್ತೆಯಾಗಿದೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 7 : ಗುಂಡ್ಲುಪೇಟೆ ಖಾಸಗಿ ಹೊಟೇಲ್ ಬಳಿಯಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕರೊಬ್ಬರ ಕಾರಿನಲ್ಲಿ ಲಕ್ಷಾಂತರ ರೂ.ನಗದು ಪತ್ತೆಯಾಗಿದ್ದು, ಈ ಹಣ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ್ದಿರಬಹುದೆಂದು ಅನುಮಾನಿಸಲಾಗಿದೆ..

ಗುಂಡ್ಲುಪೇಟೆಯ ಖಾಸಗಿ ಹೊಟೇಲ್ ಮುಂದೆ ನಿಂತಿದ್ದ ಈ ಕಾರಿನಲ್ಲಿ ಎರಡುಸಾವಿರ ಮುಖಬೆಲೆಯ ಹತ್ತು ಕಂತೆ ಪತ್ತೆಯಾಗಿದೆ.

ಇದರಲ್ಲಿ ಸುಮಾರು 20 ಲಕ್ಷರೂ ಹಣ ಇರಬಹುದೆಂದು ಅಂದಾಜಿಸಲಾಗಿದ್ದು, ಬಿಜೆಪಿ ಕಾರ್ಯಕರ್ತರು ಕಾರ್ಯಚಾರಣೆ ನಡೆಸಿ ಹಣ ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಗುಂಡ್ಲುಪೇಟೆ ಪಟ್ಟಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.[ಕಾಂಗ್ರೆಸ್-ಬಿಜೆಪಿ ಉಪಚುನಾವಣೆ ಅಬ್ಬರ ಪ್ರಚಾರದ ಅಸಲಿಯತ್ತು ಏನು?]

Gundlupet: 20 lakhs rupees of cash in a car creates confusion

ಉಪಚುನಾವಣೆ: ಬಿಜೆಪಿಯಿಂದ 13 ಪ್ರಕರಣ ದಾಖಲು
ಏಪ್ರಿಲ್ 9 ರಂದು ರಾಜ್ಯದ ಗುಂಡ್ಲುಪೇಟೆ ಮತ್ತು ನಂಜನಗೂಡು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಬಿಜೆಪಿಯಿಂದ ಇಲ್ಲಿಯವರೆಗೆ ಒಟ್ಟು 13 ದೂರುಗಳು ದಾಖಲಾಗಿವೆ.[ಗೆಲುವು ನಮ್ಮದೇ : ನಿರಂಜನ್ ಕುಮಾರ್ ಮನದ ಮಾತು]

ಗುಂಡ್ಲುಪೇಟೆ ಹಾಗೂ ನಂಜನಗೂಡಿನಲ್ಲಿ ಕಾಂಗ್ರೆಸ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ ಎಂಬ ವಿವರವನ್ನೊಳಗೊಂಡ ಈ ದೂರುಗಳು ನಂಜನಗೂಡು, ಗುಂಡ್ಲುಪೇಟೆ ಹಾಗೂ ಬೆಂಗಳೂರಿನ ಆಯೋಗದ ಕಚೇರಿಗಳಲ್ಲಿ ದಾಖಲಾಗಿವೆ. ಕಾಂಗ್ರೆಸ್ ನ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು, ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ವಿರುದ್ಧವೂ ದೂರು ದಾಖಲಾಗಿದೆ.

English summary
BJP supporters found more than 20 lakh rupees of cash in a transport officer's car in Gundlupet. Gundlupet police are investigating the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X