ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಂಸ್ಕೃತಿಕ ನಗರಿಯಲ್ಲಿ ಗುಜರಾತ್ ಕರಕುಶಲ ಉತ್ಸವದ ಸಂಭ್ರಮ

|
Google Oneindia Kannada News

ಮೈಸೂರು, ಡಿಸೆಂಬರ್ 29: ಕೊರೊನಾದಿಂದಾಗಿ ವ್ಯಾಪಾರ ಕ್ಷೇತ್ರದಲ್ಲಿ ಗಣನೀಯ ಕುಸಿತ ಕಂಡಿದೆ. ಸಂಪಾದನೆಯಿಲ್ಲದೆ ಜನ ಅಗತ್ಯ ವಸ್ತುಗಳ ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಹೀಗಿರುವಾಗ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಕ್ಷೇತ್ರಕ್ಕೂ ಅದರ ಬಿಸಿ ತಟ್ಟಿದ್ದು, ಈ ವೃತ್ತಿಯನ್ನು ನಂಬಿ ಬದುಕುವವರ ಬದುಕು ಮೂರಾಬಟ್ಟೆಯಾಗಿದೆ. ಇದೀಗ ಇಂತಹ ನೇಕಾರರು ಮತ್ತು ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಮೈಸೂರಿನ ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ಗುಜರಾತ್ ಕರಕುಶಲ ಉತ್ಸವವನ್ನು ನಡೆಸಲಾಗುತ್ತಿದೆ.

ನವದೆಹಲಿಯ ಜವಳಿ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಮಂತ್ರಾಲಯ, ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿದೇರ್ಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಂಗಳೂರು, ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿಯ ಸಹಯೋಗದೊಂದಿಗೆ ಗುಜರಾತ್ ಕರಕುಶಲ ಉತ್ಸವವು ಡಿಸೆಂಬರ್ 30 ರಿಂದ ಜನವರಿ 12ರವರೆಗೆ ನಡೆಸಲಾಗುತ್ತಿದೆ.

ಡಿ.30ರಂದು ಮೈಸೂರಿಗೆ ಭೇಟಿ ನೀಡುವವರ ಗಮನಕ್ಕೆಡಿ.30ರಂದು ಮೈಸೂರಿಗೆ ಭೇಟಿ ನೀಡುವವರ ಗಮನಕ್ಕೆ

ಒಂದೇ ಸೂರಿನಡಿ ಹಲವು ಉತ್ಪನ್ನಗಳು

ಒಂದೇ ಸೂರಿನಡಿ ಹಲವು ಉತ್ಪನ್ನಗಳು

ನೇಕಾರರು, ನೇಕಾರರ ಸಹಕಾರ ಸಂಘಗಳು ತಯಾರು ಮಾಡುತ್ತಿರುವ ಕೈಮಗ್ಗ ಉತ್ಪನ್ನಗಳು ಹೆಚ್ಚು ಮಾರುಕಟ್ಟೆ ಒದಗಿಸುವ ದೃಷ್ಠಿಯಿಂದ ಹಾಗೂ ಕೈಮಗ್ಗ ಉತ್ಪನ್ನಗಳು ನಶಿಸಿ ಹೋಗದಂತೆ ಕಾಪಾಡಿಕೊಂಡು ಹೋಗಲು ಈ ರೀತಿಯ ಮೇಳವನ್ನು ಆಯೋಜಿಸುತ್ತಿರುವುದು ಸರ್ಕಾರದ ಮೂಲ ಉದ್ದೇಶವಾಗಿದೆ. ಈ ವೃತ್ತಿಯನ್ನು ಅವಲಂಬಿಸಿ ಜೀವನ ನಿರ್ವಹಣೆ ಮಾಡುತ್ತಿರುವ ನೇಕಾರರ ಕುಟುಂಬಗಳಿಗೆ ಉತ್ತೇಜಿಸಿ ಒಂದೇ ಸೂರಿನಡಿ ಮಾರುಕಟ್ಟೆಯನ್ನು ಕಲ್ಪಿಸಿ ವಿವಿಧ ಪ್ರಕಾರಗಳಿಗೆ ಕೈಮಗ್ಗ ಉತ್ಪನ್ನಗಳ ಅರಿವು ಮೂಡಿಸಿ ಉತ್ಪನ್ನಗಳನ್ನು ಬಳಸಲು ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಮೇಳಕ್ಕೆ ಬಂದಿರುವ ವಿವಿದೆಡೆಯ ನೇಕಾರರು

ಮೇಳಕ್ಕೆ ಬಂದಿರುವ ವಿವಿದೆಡೆಯ ನೇಕಾರರು

ಇನ್ನು ಈ ವಿಶೇಷ ಕೈಮಗ್ಗ ಮೇಳಕ್ಕೊಂದು ಸುತ್ತು ಬಂದರೆ ಜಮ್ಮು-ಕಾಶ್ಮೀರ, ದೆಹಲಿ, ರಾಜಸ್ತಾನ್, ಗುಜರಾತ್, ಜಾರ್ಖಂಡ್,ಪಶ್ಚಿಮ ಬಂಗಾಳ, ಒರಿಸ್ಸಾ, ಹರಿಯಾಣ, ಬಿಹಾರ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಉತ್ತರಪ್ರದೇಶ ಮತ್ತು ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಗದಗ, ಬಾಗಲಕೋಟೆ, ಗುಲ್ಬರ್ಗ ಮತ್ತು ಇಳಕಲ್ ಪ್ರದೇಶದ ಕೈಮಗ್ಗ ನೇಕಾರ ಸಹಕಾರಿ ಸಂಘಗಳಲ್ಲಿ ಕೈಮಗ್ಗ ನೇಕಾರರು ತಯಾರಿಸಿದ ರೇಷ್ಮೆ, ಹತ್ತಿ ಮತ್ತು ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಲುಗಳಿಂದ ತಯಾರಿಸಲಾದ ಕೈಮಗ್ಗ ಉತ್ಪನ್ನಗಳು ಗಮನ ಸೆಳೆಯುತ್ತಿವೆ.

ಉತ್ಸವದಲ್ಲಿ ಗುಜರಾತ್ ರಾಜ್ಯಕ್ಕೆ ಹೆಚ್ಚಿನ ಒತ್ತು

ಉತ್ಸವದಲ್ಲಿ ಗುಜರಾತ್ ರಾಜ್ಯಕ್ಕೆ ಹೆಚ್ಚಿನ ಒತ್ತು

ಈ ಉತ್ಸವದಲ್ಲಿ ಗುಜರಾತ್ ರಾಜ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇಲ್ಲಿ ಗುಜರಾತಿನ 45ಕ್ಕೂ ಹೆಚ್ಚು ಕುಶಲಕರ್ಮಿಗಳು ತಯಾರಿಸಿದ ಪ್ರಸಿದ್ಧ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ ಶೀಟ್ ಗಳು, ಟವಲ್‍ಗಳು, ಕುಶನ್ ಕವರ್ ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್‍ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ, ಬಾಂದಿನಿ ಹಾಗೂ ಇನ್ನಿತರ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶನಕ್ಕಿಡಲಾಗಿದೆ.

ವಿವಿಧ ಬಗೆಯ ಆಕರ್ಷಕ ರೇಷ್ಮೆ ಸೀರೆಗಳು

ವಿವಿಧ ಬಗೆಯ ಆಕರ್ಷಕ ರೇಷ್ಮೆ ಸೀರೆಗಳು

ಇಷ್ಟೇ ಅಲ್ಲದೆ ರೇಷ್ಮೇ ಸೀರೆ, ಮೊಳಕಾಲ್ಮೂರು ಸೀರೆ, ಇಳಕಲ್ ಸೀರೆ, ಕಸೂತಿ ಸೀರೆ, ತಮಿಳುನಾಡಿನ ಕಾಂಚಿಪುರಮ್ ಸೀರೆ, ಬಿಹಾರದ ತಷರ್ ಸೀರೆ, ಕಾಂತ ಸೀರೆ, ಬಲಚುರಿ ಸೀರೆ, ಬುಟಿಕ್ ಸೀರೆ, ಪಶ್ಚಿಮ ಬಂಗಾಳದ ಬೆಂಗಾಲಿ ಕಾಟನ್ ಸೀರೆ, ಉತ್ತರಪ್ರದೇಶದ ಬನಾರಸ್ ಸೀರೆ, ಚಿಕನ್ ಎಂಬ್ರಾಯ್ಡಿರಿ ಸೀರೆ, ಮಧ್ಯಪ್ರದೇಶದ ಚಂದೇರಿ, ಮಹೇಶ್ವರಿ ಸೀರೆ, ಒರಿಸ್ಸಾ ರಾಜ್ಯದ ಸಂಬಲ್‍ಪುರಿ ಸೀರೆ, ಇಕ್ಕತ್, ಬೊಂಕಾಯಿ ಸೀರೆ, ಕಾಶ್ಮೀರ ರಾಜ್ಯದ ಪಶ್ಮಿನಾ ಶಾಲ್, ಆಂಧ್ರಪ್ರದೇಶದ ಗೊದ್‍ವಾಲ್ ರೇಷ್ಮೆ ಸೀರೆ, ಕಲ್ಮಕಾರಿ ಸೀರೆ, ಪೆಚಂಪಲ್ಲಿ ಸೀರೆಗಳು ಮತ್ತು ಮಧುರೈ ಟೈ ಅಂಡ್ ಡೈ, ಗುಜರಾತ್ ರಾಜ್ಯದ ಪಟೋಲ ರೇಷ್ಮೆ ಸೀರೆಗಳು ಇತರೆ ಎಲ್ಲ್ಲ ರಾಜ್ಯದ ರೇಷ್ಮೆ ಹಾಗೂ ಕಾಟನ್ ಸೀರೆಗಳು, ಡ್ರೆಸ್ ಮೆಟೀರಿಯಲ್‍ಗಳು, ಕಸೂತಿ ವಸ್ತ್ರಗಳು, ಟವಲ್‍ಗಳು, ಮೇಲು ಹಾಸು ಮತ್ತು ಹೊದಿಕೆಗಳು, ನೆಲಹಾಸು ಮತ್ತು ಇತರೆ ಕೈಮಗ್ಗ ಉತ್ಪನ್ನಗಳು ಹಾಗೂ ಗುಜರಾತ್ ರಾಜ್ಯದ ಕಸೂತಿ ಮಾಡಿದ ವಸ್ತ್ರಾಭರಣಗಳು, ಸೀರೆ, ಕರಕುಶಲ ವಸ್ತುಗಳು ಇಲ್ಲಿವೆ. ಈ ಮೇಳದ ವಿಶೇಷ ಏನೆಂದರೆ ತಯಾರಕರಿಂದಲೇ ನೇರವಾಗಿ ಗ್ರಾಹಕರಿಗೆ ತಲುಪಿಸುವುದಾಗಿದೆ.

English summary
The Gujarat Handicrafts Festival is being held from December 30 to January 12 in collaboration with the Government of Karnataka and the Karnataka State Cooperative Handloom Weavers Federation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X