ಮೈಸೂರಿನಲ್ಲಿ ಡಿಕೆಶಿಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

ಮೈಸೂರು, ನವೆಂಬರ್ 7: ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಮೈಸೂರಿಗೆ ತಮ್ಮ ಬೆಂಬಲಿಗರ ಜತೆ ಇಂದು ಮಧ್ಯಾಹ್ನ ರೈಲಿನಲ್ಲಿ ಬಂದಿಳಿದಿದ್ದು, ಮೈಸೂರಿನಲ್ಲಿ ಅವರ ಅಭಿಮಾನಿಗಳು, ಬೆಂಬಲಿಗರು ಭವ್ಯ ಸ್ವಾಗತ ನೀಡಿದರು.

ದೇವಾಲಯಗಳ ಭೇಟಿಗಾಗಿ ಅವರು 2ನೇ ಬಾರಿಗೆ ಮೈಸೂರಿಗೆ ಬಂದಿದ್ದು, ಮೈಸೂರಿನ ಚಾಮುಂಡೇಶ್ವರಿ ಬೆಟ್ಟ, ಸುತ್ತೂರು ಮಠ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಲು ಮೈಸೂರಿಗೆ ರೈಲಿನಲ್ಲಿ ಆಗಮಿಸಿದರು. ರೈಲಿನಲ್ಲಿ ಮೈಸೂರಿಗೆ ಬಂದಿಳಿಯುತ್ತಿದ್ದಂತೆಯೇ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಸೇಬಿನ ಹಾರ ಹಾಕುವ ಮೂಲಕ ಭವ್ಯ ಸ್ವಾಗತ ನೀಡಿದರು. ಬಳಿಕ ತೆರೆದ ವಾಹನದಲ್ಲಿ ಕರೆ ತಂದರು. ಈ ವೇಳೆ ಎಲ್ಲ ಅಭಿಮಾನಿಗಳತ್ತ ಡಿ.ಕೆ.ಶಿವಕುಮಾರ್ ಕೈಬೀಸುತ್ತ, ಕೈಮುಗಿಯುತ್ತ ಬರುತ್ತಿರುವುದು ಕಂಡು ಬಂತು.

Grand Welcome To Dk Shivakumar By Followers In Mysuru

ಹುಣಸೂರು ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಮಂಜು, ಕಿಸಾನ್​ ಘಟಕದ ಸದಸ್ಯರು ಡಿಕೆಶಿಗೆ ಸಾಥ್​ ನೀಡಿದರು. ಈ ವೇಳೆ ಮಾಜಿ ಸಂಸದ ಆರ್.ಧ್ರುವನಾರಾಯಣ್, ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಶಾಸಕ ತನ್ವೀರ್ ಸೇಠ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+