ಸದಾಚಾರದಿಂದ ಸಮಾಜ ಸುಧಾರಣೆ : ಮೈಸೂರಿನಲ್ಲಿ ವೆಂಕಯ್ಯ ನಾಯ್ಡು ಅಭಿಮತ
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ಶ್ರೀ ಗಣಪತಿ ಸಚ್ಚಿದಾನಂದಸ್ವಾಮೀಜಿ ಅವರ 75ನೇ ಜನ್ಮದಿನೋತ್ಸವ ಮತ್ತು ನಾದಮಂಟಪದ 19ನೇ ವಾರ್ಷಿಕೋತ್ಸವದಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಭಾಗವಹಿಸಿ, ಮಾತನಾಡಿದರು.
ಮೈಸೂರು, ಮೇ 22 : ಭಾರತವು ಅಧ್ಯಾತ್ಮದ ಮೂಲಕ ಜಗತ್ತಿಗೆ ಗುರುವಾಗಿದೆ, ಒಂದರ್ಥದಲ್ಲಿ ಇಡಿ ಜಗತ್ತಿಗೂ ಭಾರತ ಪ್ರೇರಣೆ ಎಂದು ಕೇಂದ್ರ ನಗರಾಭಿವೃದ್ಧಿ, ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಎಂ.ವೆಂಕಯ್ಯ ನಾಯ್ಡು ತಿಳಿಸಿದರು.
ಮೈಸೂರಿನ ಶ್ರೀ ಅವಧೂತ ದತ್ತ ಪೀಠ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ಶ್ರೀ ಗಣಪತಿ ಸಚ್ಚಿದಾನಂದಸ್ವಾಮೀಜಿ ಅವರ 75ನೇ ಜನ್ಮದಿನೋತ್ಸವ ಮತ್ತು ನಾದಮಂಟಪದ 19ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಂಪರೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಧ್ಯಾತ್ಮದ ಮೂಲಕ ದೇಶವನ್ನು ಪ್ರತಿನಿಧಿಸುತ್ತಿರುವ ಅವರು ದೇಶದ ಆಸ್ತಿಯಾಗಿದ್ದಾರೆ ಎಂದು ಅವರು ಹೇಳಿದರು.
ಶ್ರೀಗಳು ಜ್ಞಾನ, ಭಕ್ತಿ ಮಾರ್ಗಗಳ ಮೂಲಕ ಸಮಾಜದಲ್ಲಿ ಸುಧಾರಣೆಯನ್ನು ಬಯಸುವವರಾಗಿದ್ದಾರೆ. ಆ ನಿಟ್ಟಿನಲ್ಲಿ ಅವರು ಅಧ್ಯಾತ್ಮ ಕುರಿತು ಪ್ರಸಾರ ಮಾಡಿರುವ ರಾಗ, ರಾಗಿಣಿ ಅಧ್ಯಾತ್ಮ ಗೀತೆಯು ವಿಶ್ವದಾದ್ಯಂತ ಹೆಚ್ಚು ಜನಪ್ರಿಯವಾಗಿದೆ. ಅದಲ್ಲದೆ ಸುಮಾರು 3 ಸಾವಿರ ಅಧ್ಯಾತ್ಮ ಗೀತೆಗಳು ಕನ್ನಡ, ತೆಲುಗು, ಹಿಂದಿ ಭಾಷೆಯಲ್ಲಿ ಜನಪ್ರಿಯವಾಗಿರುವುದನ್ನು ಕಾಣಬಹುದು ಎಂದರು.

ಸದಾಚಾರದಿಂದ ಸಮಾಜ ಬದಲಾವಣೆ
ಗುರುಗಳ ಸಂಸ್ಕೃತಿ, ಸದಾಚಾರ, ಸನ್ಮಾರ್ಗವು ಸಮಾಜದಲ್ಲಿ ಉತ್ತಮವಾದ ಬದಲಾವಣೆಯನ್ನುತರಬಲ್ಲದು. ಭಾರತವು ಅಧ್ಯಾತ್ಮದ ಮೂಲಕ ಪ್ರಪಂಚದಲ್ಲಿ ಗುರುತಿಸಿಕೊಂಡಿದ್ದು, ಸಾಂತ್ವನ, ಕರುಣೆ, ಮನುಷ್ಯತ್ವಕ್ಕೆ ಇಲ್ಲಿ ಹೆಚ್ಚಿನ ಬೆಲೆ ಎಂದು ವೆಂಕಯ್ಯ ನಾಯ್ಡು ತಾಯ್ನಾಡಿನ ಕುರಿತು ಅಭಿಮಾನ ವ್ಯಕ್ತಪಡಿಸಿದರು.

ಜ್ಞಾನದಿಂದ ಸನ್ಮಾರ್ಗ
ಜ್ಞಾನ, ಧ್ಯಾನ, ಸಂಗೀತ ಇವುಗಳಿಂದ ಮನಸ್ಸನ್ನು ಸನ್ಮಾರ್ಗದಲ್ಲಿ ನಡೆಸಲು ಸಾಧ್ಯವಾಗುತ್ತದೆ. ಇಂದು ನಡೆಯುತ್ತಿರುವ ಹಲವು ವಿಪ್ಲವಗಳಿಂದ ಹೊರಬರುವುದಕ್ಕೆ ಅದು ಉತ್ತಮ ಉಪಾಯ ಎಂದು ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.[ಮೈಸೂರಿನಲ್ಲಿ ಹಣ್ಣುಗಳ ರಾಜನ ಕಾರುಬಾರು ಬಲು ಜೋರು]

ರುದ್ರಾಕ್ಷಿ ರಥಕ್ಕೆ ಭಕ್ತಾದಿಗಳಿಂದ ಆತ್ಮೀಯ ಸ್ವಾಗತ
ಆಕರ್ಷಕವಾದ ಕಮಾನುಗಳು ರುದ್ರಾಕ್ಷಿ ರಥದಲ್ಲಿ ಕುಳಿತಿದ್ದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರನ್ನು ವಿವಿಧ ಕಲಾತಂಡಗಳ ನೃತ್ಯಗಳ ಸಹಿತ ನಾದಮಂಟಪಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ರಂಗೋಲಿ ಮೆರಗು
ದತ್ತಪೀಠದ ಶೀ ದತ್ತ ವೆಂಕಟೇಶ್ವರ ದೇವಸ್ಥಾನದ 18ನೇ ಬ್ರಹ್ಮೋತ್ಸವ, ಗಣಪತಿ ಸಚ್ಚಿದಾ ನಂದ ಸ್ವಾಮೀಜಿ 75ನೇ ಜನ್ಮ ದಿನೋತ್ಸವ ಮತ್ತು ನಾದಮಂಟಪದ 19ನೇ ವಾರ್ಷಿಕೋ ತ್ಸವದ ಅಂಗವಾಗಿ ನಂಜನಗೂಡು ರಸ್ತೆಯಲ್ಲಿ ರುವ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ದಿಂದ ನಾದಮಂಟಪದವರೆಗೆ ಭಕ್ತಾದಿಗಳು ಬಿಡಿಸಿದ್ದ ಸುಂದರ ರಂಗೋಲಿಗಳು, ವಿಶೇಷ ವಾದ ದೀಪಾಲಂಕಾರಗಳು ಸ್ವಾಮೀಜಿಯವರ ಮೆರವಣಿಗೆ ಯನ್ನು ಸ್ವಾಗತಿಸಿದವು.[ನಾಳೆಯಿಂದ ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ರಿಂಗಣ]

ಗಣ್ಯರ ಉಪಸ್ಥಿತಿ
ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ , ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ , ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ದತ್ತ ಪೀಠದ ಶ್ರೀ ವಿಜಯಾನಂದ ತೀರ್ಥ ಸ್ವಾಮೀಜಿ, ಸಂಸದ ಪ್ರತಾಪಸಿಂಹ, ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು, ಜಿ.ಟಿ.ದೇವೇಗೌಡ, ಮಾಜಿ ಸಚಿವ ಎಸ್.ಎ. ರಾಮದಾಸ್ ಪಾಲ್ಗೊಂಡಿದ್ದರು.[ಮೈಸೂರು: ಬಡವರಿಗೆ ಉಚಿತ ರೋಟಿ ನೀಡುವ ರೋಟಿ ಬ್ಯಾಂಕ್]
{promotion-urls}












Click it and Unblock the Notifications