ದಸರಾದಲ್ಲಿ ಕುಶಲ ತೋಪು ಸಿಡಿಸುವ ಪೊಲೀಸ್ ಸಿಬ್ಬಂದಿಗಳ ತಾಲೀಮು ಶುರು
ಮೈಸೂರು, ಸೆಪ್ಟೆಂಬರ್.19: ಇಂದಿನಿಂದ(ಸೆ.19) ಕುಶಲ ತೋಪು ಸಿಡಿಸುವ ಪೊಲೀಸ್ ಸಿಬ್ಬಂದಿಗಳಿಂದ ತಾಲೀಮು ನಡೆಯುತ್ತಿದ್ದು, ಮೈಸೂರು ಅರಮನೆಯ ಆವರಣದಲ್ಲಿ ಫಿರಂಗಿ ಗಾಡಿ ಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಪೂಜೆ ಸಲ್ಲಿಸಿದರು.
ವಿಜಯ ದಶಮಿದಿನ ಅರಮನೆ ಮತ್ತು ಬನ್ನಿ ಮಂಟಪದಲ್ಲಿ ಸಿಡಿ ಮದ್ದಿನ ಪ್ರದರ್ಶನ ಇರುವ ಕಾರಣ ಇಂದಿನಿಂದ ತಾಲೀಮು ನಡೆಯುತ್ತಿದ್ದು, ಪ್ರತಿ ವರ್ಷದಂತೆ ಫಿರಂಗಿ ಸಿಡಿ ಮದ್ದಿನ ಜವಬ್ದಾರಿಯನ್ನು ಸೂಕ್ಷ್ಮವಾಗಿ ನಿಭಾಯಿಸುವ ಹಾಗೂ ಸುರಕ್ಷತೆ ಜವಾಬ್ದಾರಿ ಹೊತ್ತಿದ್ದೇವೆ ಎಂದು ಸುಬ್ರಮಣ್ಯೇಶ್ವರ ರಾವ್ ತಿಳಿಸಿದ್ದಾರೆ.
ವಿಜಯ ದಶಮಿ ದಿನದಂದು ಸಿಡಿಮದ್ದುಗಳ ಪ್ರದರ್ಶನ ಇರುವುದರಿಂದ ತಾಲೀಮು ಬೇಕಾಗುತ್ತದೆ. ಸಿಡಿ ಮದ್ದನ್ನು ಸಿಡಿಸುವ ವೇಳೆ ಆನೆ, ಕುದುರೆ ಗಳು ಇರಲಿವೆ. ಆ ಶಬ್ದಕ್ಕೆ ಹೊಂದಿಕೊಳ್ಳಲು ಇಂದಿನಿಂದ ತಾಲೀಮು ನೀಡಲಾಗುವುದು.

ಸದ್ಯಕ್ಕೆ ಇಂದು ಪ್ರಾಕ್ಟೀಸ್ ಮಾಡುವ ವೇಳೆಯಲ್ಲಿ ಮದ್ದನ್ನು ಸಿಡಿಸೋದಿಲ್ಲ . ರಿಹರ್ಸಲ್ ನಲ್ಲಿ 15 ರಿಂದ 20 ನುರಿತ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಅರಮನೆಯ ಆವರಣದಲ್ಲೇ ತಾಲೀಮು ಶುರುವಾಗಲಿದೆ ಎಂದು ಸುಬ್ರಮಣ್ಯೇಶ್ವರ ರಾವ್ ತಿಳಿಸಿದ್ದಾರೆ.












Click it and Unblock the Notifications