ಮೈಸೂರಿನಲ್ಲಿ ವಿನೂತನ ವಿಶ್ವ ಭೂಮಿ ದಿನ ಆಚರಣೆ: ಮರಗಳಿಗೆ ಬಂಧ ಮುಕ್ತ
ಮೈಸೂರು, ಏಪ್ರಿಲ್ 22: ಮೈಸೂರಿನಲ್ಲಿ ಮರಗಳ ಬುಡಕ್ಕೆ ಕಾಂಕ್ರೀಟ್, ಡಾಂಬರ್ ಹಾಕಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸುತ್ತಿರುವುದನ್ನು ಖಂಡಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆ ಬದಿಯಲ್ಲಿರುವ ಮರಗಳನ್ನು ಬಂಧ ಮುಕ್ತಗೊಳಿಸಿ ವಿನೂತನವಾಗಿ ವಿಶ್ವ ಭೂಮಿ ದಿನ ಆಚರಿಸಲಾಯಿತು.
ಮರಗಳ ಬುಡಕ್ಕೆ ಸಿಮೆಂಟ್, ಕಾಂಕ್ರೀಟ್ ಬ್ಲಾಕ್ ಹಾಗೂ ಡಾಂಬರ್ ಹಾಕುವ ಮೂಲಕ ಬುಡಕ್ಕೆ ನೀರು ಹೋಗದ ಪರಿಸ್ಥಿತಿ ನಿರ್ಮಾಣ ಮಾಡಲಾಗಿತ್ತು. ಇದರಿಂದ ಮರಗಳಿಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗಿತ್ತು. ರೈತ ಮುಖಂಡರು ಇದನ್ನು ಖಂಡಿಸಿ ಮರಗಳಿಗೆ ಹಾಕಲಾಗಿದ್ದ ಸಿಮೆಂಟ್, ಕಾಂಕ್ರೀಟ್ ತೆಗೆದು ಬಂಧಮುಕ್ತಗೊಳಿಸಿದರು.

ಈ ವೇಳೆ ರೈತ ಮುಖಂಡ ಮಂಜು ಕಿರಣ್ ಮಾತನಾಡಿ, ನಗರಪಾಲಿಕೆ ಮರಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಮುಂದಿನ ದಿನಗಳಲ್ಲಿ ಗುತ್ತಿಗೆದಾರರಿಗೆ ಟೆಂಡರ್ ಕೊಡುವಾಗಲೇ ಮರಗಳ ಸುತ್ತ ಎರಡರಿಂದ ಮೂರು ಅಡಿ ಜಾಗ ಬಿಟ್ಟು ಉಳಿದ ಜಾಗಕ್ಕೆ ಕಾಂಕ್ರೀಟ್ ಬ್ಲಾಕ್ ಹಾಕುವಂತೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಮಳೆಗಾಲ ಶುರುವಾಗುತ್ತಿರುವುದರಿಂದ ಇನ್ನು 15 ದಿನಗಳ ಒಳಗಾಗಿ ಮೈಸೂರು ಮಹಾನಗರ ಪಾಲಿಕೆ ಈ ಕೆಲಸ ಮಾಡಬೇಕು. ಇಲ್ಲದಿದ್ದರೆ ರೈತ ಸಂಘ ಸಿದ್ದಾರ್ಥ ನಗರ ಬಡಾವಣೆಯಲ್ಲಿ ಪ್ರತಿ ಭಾನುವಾರ ಬೆಳಗ್ಗೆ 6.30 ರಿಂದ 8.30ರವರೆಗೆ ಅವೈಜ್ಞಾನಿಕವಾಗಿ ಮುಚ್ಚಿರುವ ಮರದ ಬುಡಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಾಗರಿಕರು ತಮ್ಮ ತಮ್ಮ ಬೀದಿಗಳಲ್ಲಿ ಪ್ರತಿ ಭಾನುವಾರ ಎರಡು ಗಂಟೆ ಮರದ ಬುಡ ಬಿಡಿಸಿಕೊಳ್ಳುವ ಕೆಲಸ ಮಾಡಿದರೆ ಮೈಸೂರಿನ ನಗರದಲ್ಲಿ ಹಳೆಯ ಮರಗಳನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದರು.
ಮರವಿಲ್ಲದೇ ನರನಿರಬಲ್ಲನೇ
ಮತ್ತೊಂದೆಡೆ 41 ಮರಗಳ ಹನನ ನಡೆದ ಜಾಗದಲ್ಲಿ, ಪರಿಸರ ಉಳಿವಿನ ಜವಾಬ್ದಾರಿ ಹೊತ್ತಿರುವ ಭವಿಷ್ಯದ ಮಕ್ಕಳಿಗೆ ಪರಿಸರ ಸಂರಕ್ಷಣೆ ಪಾಠ ಹೇಳುವ ಮುಖಾಂತರ ವಿಶ್ವ ಭೂದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪರಿಸರ ಬಳಗದ ವತಿಯಿಂದ ಜಿಲ್ಲಾ ಎಸ್ಪಿ ಕಚೇರಿ ಮುಂಭಾಗದ ಹೈದರಾಲಿ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರದಿಂದ ನಾವು ಪರಿಸರಕ್ಕಾಗಿ ನಾವು, ಮರವಿಲ್ಲದೇ ನರನಿರಬಲ್ಲನೇ ಎಂಬುದರ ಕುರಿತು ವಿದ್ಯಾಥಿಗಳಿಗೆ ಪರಿಸರ ಅರಿವು ಮೂಡಿಸಲಾಯಿತು.
ಹತ್ತು ಬಾವಿಗಳು ಒಂದು ಕೆರೆಗೆ ಸಮ, ಹತ್ತು ಕೆರೆಗಳಿಂದ ಒಂದು ಸರೋವರ, ಹತ್ತು ಸರೋವರ ಒಂದು ಮಗುವಿಗೆ ಸಮ, ಒಂದು ವೃಕ್ಷ ಹತ್ತು ಮಕ್ಕಳಿಗೆ ಸಮ ಎಂಬ ಸಂದೇಶ ಸಾರಲಾಯಿತು. ಇದೇ ವೇಳೆ ಕರಾಮುವಿವಿ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಡಾ.ಟಿ.ಎಸ್.ಹರ್ಷ ಮಾತನಾಡಿ, ವೃಕ್ಷ ಒಂದು ಜೀವಿಗೆ ಜೀವಿಸಲು ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಬಲ್ಲ ಪ್ರತ್ಯಕ್ಷ ಸಂಜೀವಿನಿ. ಆದರೂ ಇವೆಲ್ಲವನ್ನು ಲೆಕ್ಕಿಸದೆ ಅಭಿವೃದ್ಧಿ ಹೆಸರಿನಲ್ಲಿ ವೃಕ್ಷಗಳ ದಹನ ಸರಿಯಲ್ಲ ಎಂದರು.
ಪರಿಸರ ಎಂದರೆ ಭೂಮಿ. ಮರ, ಗಿಡ ಹಾಗೂ ನಾವು ಪಡೆಯುತ್ತಿರುವ ಪ್ರತಿಯೊಂದು ಸಂಪತ್ತು ಸಹ ಭೂಮಿಯಿಂದ. ಮನುಷ್ಯನ ಬದುಕಲು ಅವಶ್ಯವಿರುವ ನೀರು ಸಹ ಹುಟ್ಟುವುದು ಭೂಮಿಯಿಂದ. ಹಿಂದೆ ಶುದ್ಧವಾದ ನೀರು ಅಂತರ್ಜಲದಿಂದ ಸಿಗುತ್ತಿತ್ತು. ನಮ್ಮ ದೇಹಕ್ಕೆ ಅವಶ್ಯವಿರುವ ಮಿನರಲ್ಸ್ಗಳು ನೀರಿನಲ್ಲಿ ಸಿಗುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರು ಸಿಗದಂತಾಗಿದೆ ಎಂದರು.
ಪ್ರಸ್ತುತ ಹವಾಮಾನವೇ ಬದಲಾಗಿದೆ. ಸಕಾಲಕ್ಕೆ ಮಳೆಯಾಗದೇ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ.ಪರಿಸರವನ್ನು ನಿರ್ಲಕ್ಷಿಸಿದ್ದೇವೆ. ಜೀವ ಪರಿಸರ ವ್ಯವಸ್ಥೆಯಲ್ಲಿ ನಮಗೆ ಬೇಕಾದ ಎಲ್ಲಾ ವಸ್ತುಗಳು ಸಿಗುತ್ತಿವೆ ಎಂದರೆ ಅದಕ್ಕೆ ಕಾರಣವೇ ಮರಗಳು. ಮನುಷ್ಯ ಪರಿಸರವನ್ನು ಬಿಟ್ಟು ಇರಲಾರ. ಆದರೆ, ಪರಿಸರ ಯಾವ ಮನುಷ್ಯನ ಅವಶ್ಯಕತೆಯೂ ಇಲ್ಲದೆ ಇರುತ್ತದೆ ಎಂದರು. ಅಲ್ಲದೇ ಪರಿಸರಕ್ಕೆ ವೃಕ್ಷಗಳ ಕೊಡುಗೆ ಏನು? ಹೆಚ್ಚುತ್ತಿರುವ ತಾಪಮಾನ ತಗ್ಗಿಸುವಲ್ಲಿ ಮರದ ಪಾತ್ರವೇನು? ಪರಿಸರ ಉಳಿವಿನಲ್ಲಿ ಜನರ ಪಾತ್ರವೇನು? ಎಂಬುದನ್ನು ವಿಸ್ತೃತವಾಗಿ ವಿವರಿಸಿದರು.
-
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ -
Basavaraj Bommai: ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ












Click it and Unblock the Notifications