ಮೈಸೂರಿನ ಈ ಖಾಸಗಿ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತ ಚಿಕಿತ್ಸೆ.!
ಮೈಸೂರು, ಮೇ, 27: ಇತ್ತೀಚಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳೆಂದರೆ ಸಾಕು ಬಡ ಜನರು ಮೂಗು ಮುರಿಯುತ್ತಾರೆ. ಏಕೆಂದರೆ, ತಲೆನೋವು, ಜ್ವರದಂತಹ ಸಣ್ಣ ಖಾಯಿಲೆ ಕಾಣಿಸಿಕೊಂಡರೂ ಕೂಡ ಚಿಕಿತ್ಸೆಗೆಂದು ಕಂತೆ ಕಂತೆ ಹಣ ಎಳೆಯುತ್ತಿದ್ದಾರೆ. ಇಂತಹದ್ದರ ನಡುವೆಯೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಂದು ಖಾಸಗಿ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡಿ, ವೈದ್ಯರು ಗಮನ ಸೆಳೆದಿದ್ದು, ಇದಕ್ಕೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.
ಬಡವರಿಗೆ ಉಚಿತ ಚಿಕಿತ್ಸೆಗಳನ್ನು ನೀಡುವ ಮೂಲಕ ಮೈಸೂರಿನ ಜೈನ್ ಚಿಕಿತ್ಸಾಲಯ ಜನ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಯವ ಮಾಹಿತಿ ಲಭ್ಯವಾಗುದೆ. 100, 500 ರೂಪಾ ಅಲ್ಲ, ಕೇವಲ 20 ರೂಪಾಯಿ ಕೌಂಟರ್ ಫೀಸ್ ಕಟ್ಟಿ, ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದಾಗಿದೆ. ತ್ಯಾಗರಾಜ ರಸ್ತೆಯಲ್ಲಿರುವ ಜೈನ್ ಚಿಕಿತ್ಸಾಲಯವು ಕಳೆದ 9 ವರ್ಷಗಳಿಂದ ಬಡ ರೋಗಿಗಳ ಸೇವೆಯಲ್ಲಿ ನಿರತವಾಗಿದೆ ಅಂತಾ ನ್ಯೂಸ್ 18 ಕನ್ನಡ ವರದಿ ಮಾಡಿದೆ.

ಈ ಆಸ್ಪತ್ರೆಯು ನೇತೃತ್ವವನ್ನು ಶ್ರೀಸ್ಥಾನಕ್‌ವಾಸಿ ಜೈನ್ ಯುವ ಸಂಘಟನೆ (ರಿ) ವಹಿಸಿದೆ. ಈ ಸಂಘಟನೆಯು ಕಳೆದ 9 ವರ್ಷಗಳಿಂದ ಆಸ್ಪತ್ರೆಯನ್ನು ನಡೆಸುತ್ತಾ ಬಂದಿದೆ. ಎರಡು ಪಾಳಿಯಲ್ಲಿ ಇಲ್ಲಿ ವೈದ್ಯರು ಕೆಲಸ ಮಾಡುತ್ತಿದ್ದು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಈ ಜೈನ ಚಿಕಿತ್ಸಾಲಯವು ಬಡವರು ಹಾಗೂ ಶ್ರೀಮಂತರು ಎಂದು ಲೆಕ್ಕ ಹಾಕದೇ ಎಲ್ಲಾ ವರ್ಗದ ಜನರಿಗೂ ಕೇವಲ 20 ರೂಪಾಯಿ ಎಂಟ್ರಿ ಶುಕ್ಲವನ್ನಷ್ಟೇ ಪಡೆಯಲಾಗುತ್ತಿದ್ದು, ಬಳಿಕ ಉಚಿತ ಚಿಕಿತ್ಸೆ, ತಪಾಸಣೆಯನ್ನು ಮಾಡುತ್ತಿದ್ದಾರೆ.
ಇನ್ನು ಈ ಖಾಸಗಿ ಆಸ್ಪತ್ರೆಯಲ್ಲಿ ಜ್ವರ, ಬಿಪಿ, ಶುಗರ್ ಹಾಗೂ ಚರ್ಮದ ಕಾಯಿಲೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗುತ್ತದೆ. ಬೆಳಗ್ಗೆ 10 ಗಂಟೆಯಿಂದ 12 ಗಂಟೆ ಹಾಗೂ ಸಾಯಂಕಾಲ 4 ಗಂಟೆಯಿಂದ 6 ಗಂಟೆಯವರೆಗೆ ಎರಡು ಪಾಳಿಯಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸಲಿದೆ. ಹೀಗೆ ಈ ಆಸ್ಪತ್ರೆ ಸೇವೆ ಒದಗಿಸುವ ಮೂಲಕ ಜನರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಶಸ್ತ್ರಚಿಕಿತ್ಸೆ ಯಶಸ್ವಿ: ಗರ್ಭಾಶಯ ಗಡ್ಡೆ ಮೂತ್ರಕೋಶದ ತನಕ ಬೆಳೆದು ಯಾತನೆ ಪಡುತ್ತಿದ್ದ ಮಹಿಳೆಯ ನೋವಿಗೆ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಸಮುದಾಯ ಆರೋಗ್ಯ ಕೇಂದ್ರವು ಮುಕ್ತಿ ಕೊಟ್ಟಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ 45 ವರ್ಷದ ಪುಟ್ಟಮ್ಮ ಎಂಬವರು ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆ. ಸಾಮಾನ್ಯವಾಗಿ ಗರ್ಭಕೋಶದ ಹೊರಮೈ ಹಾಗೂ ಒಳಗಡೆ ಗೆಡ್ಡೆ ಬೆಳೆಯಲಿದೆ. ಆದರೆ, ಈ ಮಹಿಳೆಗೆ ಗರ್ಭಕೋಶ ಹಾಗೂ ಮೂತ್ರಕೋಶದ ನಡುವೆ ಗೆಡ್ಡೆ ಬೆಳೆದು ಎರಡು ಅಂಟುಕೊಂಡಿದ್ದವು.
ವೈದ್ಯಕೀಯ ಲೋಕದಲ್ಲಿ ಅಪರೂಪವಾದ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಕಬ್ಬಹಳ್ಳಿ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯ ಡಾ.ವೆಂಕಟಸ್ವಾಮಿ 2.5 ತಾಸು ಶಸ್ತ್ರಚಿಕಿತ್ಸೆ ನಡೆಸಿ, 4.5 ಕೆಜಿ ತೂಕದ ಗೆಡ್ಡೆಯನ್ನು ಹೊರತೆಗೆದಿದ್ದಾರೆ.
ಅಪರೂಪವಾದ ಈ ಪ್ರಕರಣದಲ್ಲಿ ಗೆಡ್ಡೆ ತೆಗೆಯುವುದೇ ಕಷ್ಟವಾಗಿತ್ತು. ಸದ್ಯ, ಮಹಿಳೆ ಆರೋಗ್ಯವಾಗಿದ್ದಾರೆ. ಕಬ್ಬಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ರೀತಿ ಕಠಿಣ ಶಸ್ತ್ರಚಿಕಿತ್ಸೆ ಇದೇ ಮೊದಲು ಎಂದರು.












Click it and Unblock the Notifications