ಜ್ವರದಿಂದ ಬಳಲುತ್ತಿದ್ದ ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ
ಪ್ರೊ. ಕೆ.ಎಸ್. ರಂಗಪ್ಪ ಅವರ ಮಗನ ಮದುವೆ ಸಮಾರಂಭಕ್ಕಾಗಿ ಮೈಸೂರಿಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ; ಮಾ. 1ರ ಮಧ್ಯರಾತ್ರಿಯಿಂದ ಜ್ವರದಿಂದ ಬಳಲಿದ್ದ ಜೆಡಿಎಸ್ ನಾಯಕ.
ಮೈಸೂರು, ಮಾರ್ಚ್ 3: ಜಾತ್ಯಾತೀತ ಜನತಾದಳ (ಜೆಡಿಎಸ್) ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಗ್ಯದಲ್ಲಿ ಸದ್ಯ ಚೇತರಿಕೆ ಕಂಡಿದೆ. ಹಾಗಾಗಿ, ಅವರು, ಗುರುವಾರ ಸಂಜೆ ನಡೆದ ಪ್ರೊ. ಕೆ.ಎಸ್ ರಂಗಪ್ಪರ ಮಗನ ಮದುವೆ ಆರತಕ್ಷತೆಯಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಪಾಲ್ಗೊಂಡು ವಧು-ವರರಿಗೆ ಹರಿಸಿದರು.
ಮದುವೆ ಮಹೂರ್ತ ಬುಧವಾರ (ಮಾರ್ಚ್ 2ರಂದು) ನಡೆದಿದ್ದರಿಂದ ಮೈಸೂರಿಗೆ ಬುಧವಾರವೇ ಆಗಮಿಸಿದ್ದ ಅವರು, ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಆನಂತರ, ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು.[ಬಿಜೆಪಿ, ಕಾಂಗ್ರೆಸ್ ನಿಂದ ರಾಜ್ಯ ಹಾಳಾಗಿದೆ ಎಂದ ದೇವೇಗೌಡರು]
ಮರುದಿನ (ಮಾರ್ಚ್ 3) ನಡೆಯಲಿದ್ದ ಆರತಕ್ಷತೆ ಕಾರ್ಯಕ್ರಮಕ್ಕೆ ಅವರು ಹಾಜರಾಗುವ ಉದ್ದೇಶದಿಂದ ಅವರು ಮೈಸೂರಿನಲ್ಲೇ ತಂಗಿದ್ದರು. ಆದರೆ, ಮಾ. 1ರ ಮಧ್ಯರಾತ್ರಿಯಿಂದಲೇ ಅವರಿಗೆ ಜ್ವರ ಕಾಣಿಸಿಕೊಂಡಿತ್ತು.
ಬೆಳಗಾಗುವಷ್ಟರಲ್ಲಿ ತೀವ್ರ ಅಸ್ವಸ್ಥರಾದ ಅವರನ್ನು ವೈದ್ಯರು ಬಂದು ಸೂಕ್ತ ಚಿಕಿತ್ಸೆ ನೀಡಿ ವಿಶ್ರಾಂತಿ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದರು. ಹಾಗಾಗಿ, ಗುರುವಾರ ಬೆಳಗ್ಗೆ (ಮಾರ್ಚ್ 3) ಅವರು ನಡೆಸಿಕೊಡಬೇಕಿದ್ದ ಪತ್ರಿಕಾಗೋಷ್ಠಿ ರದ್ದಾಗಿತ್ತು.[ಮೈಸೂರಿನಲ್ಲೆಲ್ಲೂ ಕೋತಿಗಳು ಸಾರ್ ಕೋತಿಗಳು !]
ಆದರೆ, ಸಂಜೆ ವೇಳೆಗೆ ಚೇತರಿಸಿಕೊಂಡಿರುವ ಕುಮಾರಸ್ವಾಮಿ, ಆರತಕ್ಷತೆಯಲ್ಲಿ ಪಾಲ್ಗೊಂಡರು. ಸಮಾರಂಭ ಮುಗಿದ ನಂತರ ಅವರು ಬೆಂಗಳೂರಿಗೆ ತೆರಳುವುದಾಗಿ ಕುಮಾರಸ್ವಾಮಿಯವರ ಹತ್ತಿರದ ಮೂಲಗಳು ತಿಳಿಸಿವೆ.[ಮೈಸೂರಿನಲ್ಲಿ ಪತಿಯ ಎದುರೇ ಪ್ರಾಣ ಬಿಟ್ಟ ಗರ್ಭಿಣಿ]












Click it and Unblock the Notifications