ಹೆಂಡತಿಯನ್ನೇ ಹೊಡೆದು ಕೊಂದ ದುಷ್ಟ ಪತಿರಾಯ

ಕ್ಷುಲ್ಲಕ ವಿಚಾರಕ್ಕೆ ಪತಿಯೇ ಪತ್ನಿಯನ್ನು ಹೊಡೆದು ಕೊಲೆಮಾಡಿದ ಘಟನೆ ಮೈಸೂರಿನ ಹೂಟಗಳ್ಳಿಯಲ್ಲಿ ಇಂದು ನಡೆದಿದೆ.

ಮೈಸೂರು, ಮೇ 29: ಕ್ಷುಲ್ಲಕ ವಿಚಾರಕ್ಕೆ ಪತಿಯೇ ಪತ್ನಿಯನ್ನು ಹೊಡೆದು ಕೊಲೆಮಾಡಿದ ಘಟನೆ ಮೈಸೂರಿನ ಹೂಟಗಳ್ಳಿಯಲ್ಲಿ ಇಂದು ನಡೆದಿದೆ.

ಬಿಎಂಟಿಸಿ ಕಂಡಕ್ಟರ್ ಮಹದೇವ್ ಪ್ರಸಾದ್ ತನ್ನ ಪತ್ನಿಯನ್ನು ಹೊಡೆದು ಕೊಂದು ಬಳಿಕ ನೇಣು ಹಾಕಿದ್ದಾನೆ. ಕೆ.ಆರ್.ಪೇಟೆ ತಾಲೂಕಿನ ಪಲ್ಲವಿ ಅವರನ್ನು ಕಳೆದ ಏಳು ವರ್ಷಗಳ ಹಿಂದೆ ಮಹದೇವ್ ಪ್ರಸಾದ್ ಗೆ ವಿವಾಹವಾಗಿದ್ದರು.[ಮೈಸೂರಿನಲ್ಲಿ ಗಾಂಜಾ ಮಾರುತ್ತಿದ್ದ ನಾಲ್ವರ ಬಂಧನ]

For a silly reason a husband kills his wife in Mysuru

ರಾತ್ರಿ ಹೆಂಡತಿಗೆ ಕಿರುಕುಳ ನೀಡಿ ಬಳಿಕ ಆತನೇ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಬಂದಿದ್ದ. ಆದರೆ ಆದ್ರೆ ಮಾರ್ಗ ಮಧ್ಯೆ ಪಲ್ಲವಿ ಕೊನೆಯುಸಿರೆಳೆದಿದ್ದಾರೆ. ಲಕ್ಷ್ಮೀಪುರಂ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿಗೆ ಸಿಲುಕಿ ವ್ಯಕ್ತಿ ಸಾವು
ನಗರದ ಅಶೋಕಪುರಂ ರೈಲ್ವೆ ಹಳಿಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾಗಿದ್ದು, ರೈಲ್ವೆ ಡಿಕ್ಕಿಯಾಗಿ ಸಾವು ಸಂಭವಿಸಿದೆ.

For a silly reason a husband kills his wife in Mysuru

ಮೃತರನ್ನು ಅಶೋಕಪುರಂ ನಿವಾಸಿ ದೇವರಾಜು ಅವರ ಪುತ್ರ ಸಂಜು(27) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ 10.30ರ ಸುಮಾರಿಗೆ ಊಟ ಮುಗಿಸಿ ಅಡ್ಡಾಡಲು ತೆರಳಿದ ಸಂಜು ಮತ್ತೆ ವಾಪಸ್ ಮನೆಗೆ ಬಂದಿಲ್ಲ. ಸೋಮವಾರ (ಮೇ 29) ಬೆಳಿಗ್ಗೆ 6.30ರ ಸುಮಾರಿಗೆ ರೈಲ್ವೆ ಹಳಿ ದಾಟಲು ತೆರಳಿದ ಅಕ್ಕಪಕ್ಕದವರು ನೋಡಿ ರೈಲ್ವೆ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.

ರೈಲ್ವೆ ಪೊಲೀಸ್ ಇನ್ಸಪೆಕ್ಟರ್ ಅಶೋಕ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆ.ಆರ್.ಆಸ್ಪತ್ರೆಗೆ ಮೃತದೇಹವನ್ನು ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವೇ ನಿಖರ ಕಾರಣ ತಿಳಿದುಬರಬೇಕಿದೆ. ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+