ಅಂಬಿ ಪುತ್ರ ಅಭಿಷೇಕ್ ಚುನಾವಣೆಗೆ ಸ್ಪರ್ಧಿಸುವಂತೆ ಅಭಿಮಾನಿಗಳ ಒತ್ತಡ

Recommended Video

      Ambareesh: ಅಂಬಿ ಪುತ್ರ ಅಭಿಷೇಕ್ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ | Oneindia Kannada

      ಮೈಸೂರು, ನವೆಂಬರ್ 28 : ಮಂಡ್ಯದ ರಾಜಕಾರಣದಲ್ಲೇ ಹೊಸ ಸಂಚಲವನ್ನು ಉಂಟು ಮಾಡಿದ್ದ ರೆಬೆಲ್ ಸ್ಟಾರ್ ಅಂಬರೀಷ್ ಕಳೆದ 3 ದಿನಗಳ ಕೆಳಗಷ್ಟೇ ದೈವಾಧೀನರಾಗಿದ್ದಾರೆ. ಅವರ ಸಾವಿನ ಬಳಿಕ ಮಂಡ್ಯದ ರಾಜಕಾರಣ ಆಕರ್ಷಣೆ ಕಳೆದುಕೊಂಡಂತಾಗಿದೆ.

      ಎಂಥಹ ಸನ್ನಿವೇಶದಲ್ಲೇ ಆಗಲಿ ಯಾವುದನ್ನು ಸೀರಿಯಸ್ಸಾಗಿ ಸ್ವೀಕರಿಸಿದೇ ತಮ್ಮ ಹಾಸ್ಯ ಚಟಾಕಿಯಿಂದಲೇ ಜಿಲ್ಲೆಯ ರಾಜಕಾರಣವನ್ನು ಆಳೆತ್ತರಕ್ಕೆ ಕೊಂಡೊಯ್ದಿದ್ದ ಅಂಬಿಯನ್ನು ಎಂದಿಗೂ ಜನೆ ಮರೆಯುವುದಿಲ್ಲ.

      ಪಕ್ಷಾತೀತ ರಾಜಕಾರಣಿಯಾಗಿದ್ದ ಅಂಬರೀಶ್ ಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡುವಂತೆ ಕೈ ನಾಯಕರು ಎಷ್ಟೇ ಗೋಗರೆದೂ ತಮ್ಮ ಪಟ್ಟನ್ನು ಕಿಂಚಿತ್ತೂ ಕದಲಿಸಿದೆ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ಆ ನಂತರವೂ ಜಿಲ್ಲೆಯ ಬಗ್ಗೆ, ರಾಜನೀತಿ ಬಗ್ಗೆ ತಮ್ಮ ವಿಶೇಷ ಧಾಟಿಯಿಂದ ಹೇಳಿಕೆ ನೀಡುತ್ತಿದ್ದರು.

      ಅಂಬರೀಷ್ ಗೈರುಹಾಜರಿ ಜನರಿಗೆ ಗೊತ್ತಾಗಿರಲಿಲ್ಲ. ಈಗ ಅವರು ನಿಧನ ಹೊಂದಿದ ಕಾರಣ ಅವರ ಜಾಗವನ್ನು ತುಂಬುವ ಇನ್ನೊಬ್ಬ ರಾಜಕಾರಣಿ ಜಿಲ್ಲೆಯಲ್ಲಿ ಸಿಗುವುದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಒಂದು ರೀತಿಯ ಶೂನ್ಯ ಆವರಿಸಿದಂತಾಗಿದೆ.

      ಚುನಾವಣೆ ಸಂದರ್ಭಗಳಲ್ಲೂ ಬೇರೆ ಪಕ್ಷಗಳ ಮುಖಂಡರೊಂದಿಗೆ ಆತ್ಮೀಯವಾಗಿರುತ್ತಿದ್ದ ಅಂಬರೀಶ್ ಅವರು ಪಕ್ಷಾತೀತ ನಾಯಕರಾಗಿದ್ದವರು. ತಮ್ಮ ಬ್ಯುಸಿ ಕೆಲಸದ ನಡುವೆಯೇ ಅಂಬರೀಷ್ ರಾಜಕೀಯವನ್ನು ಒಂದು ಭಾಗವಾಗಿ ಸ್ವೀಕರಿಸಿದ್ದರು. ಎಂದಿಗೂ ಚುನಾವಣಾ ದ್ವೇಷ, ಕೆಸರೆರಚಾಟವನ್ನು ಅವರು ಮಾಡುತ್ತಿರಲಿಲ್ಲ.

      ನಾವಿಕನಿಲ್ಲದ ದೋಣಿ

      ನಾವಿಕನಿಲ್ಲದ ದೋಣಿ

      ಅಂಬರೀಶ್ ಕಾಂಗ್ರೆಸ್‌ನಲ್ಲಿದ್ದರೂ ಅವರ ಆಪ್ತರು, ಅಭಿಮಾನಿಗಳು ಜೆಡಿಎಸ್ ನಲ್ಲಿದ್ದರು. ಆದರೆ ಅಂಬರೀಷ್ ಎಲ್ಲರನ್ನು ಒಂದೇ ದೃಷ್ಟಿಕೋನದಿಂದ ನೋಡುತ್ತಿದ್ದರು. ಅಂಬರೀಶ್ ಸಾವಿನಿಂದ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ನಷ್ಟವಾಗಿದ್ದು, ಈಗಿನ ಕಾಂಗ್ರೆಸ್ ಸ್ಥಿತಿಯನ್ನು ನಾವಿಕನಿಲ್ಲದ ದೋಣಿ ಎಂದರೂ ತಪ್ಪಾಗದು.

      ಅಂಬಿ ವಿ ಮಿಸ್ ಯೂ....ಕಣ್ಣೀರು ತರಿಸುತ್ತೆ ಅಂತಿಮಯಾತ್ರೆಯ ಈ ಫೋಟೋಗಳು

      ವಿಧಾನಸಭಾ ಚುನಾವಣೆಯಲ್ಲಿ ಸೋತ ಮುಖಂಡರಾರೂ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲು ಮುಂದೆ ಬಂದಿಲ್ಲ. ಒಲ್ಲದ ಮನಸ್ಸಿನಿಂದಲೇ ಮೈತ್ರಿ ಒಪ್ಪಿಕೊಂಡ ಮುಖಂಡರು ಈಗಲೂ ರಾಜ್ಯಮಟ್ಟದ ಮುಖಂಡರ ಮೇಲೆ ಅಸಮಾಧಾನ ಹೊಂದಿದ್ದಾರೆ. ಹೀಗಾಗಿ ಜಿಲ್ಲೆಯ ಕಾಂಗ್ರೆಸ್ ದೋಣಿಯನ್ನು ಮುನ್ನಡೆಸುವವರಾರೂ ಎಂಬ ಪ್ರಶ್ನೆ ಎದುರಾಗಿದೆ.

      ಆಕರ್ಷಕ ನಾಯಕನೊಬ್ಬನ ಯುಗಾಂತ್ಯ

      ಆಕರ್ಷಕ ನಾಯಕನೊಬ್ಬನ ಯುಗಾಂತ್ಯ

      ಅಂಬಿ ನಿಧನ ಮಂಡ್ಯದ ಆಕರ್ಷಕ ನಾಯಕನೊಬ್ಬನ ಯುಗಾಂತ್ಯವಾಗಿದೆ. ಹಲವು ದಶಕಗಳ ಕಾಲ ಅಂಬರೀಶ್ ಜನಸೇವೆ ಮಾಡಿದ್ದರು. ಅವರ ಸಾವು ಜಿಲ್ಲೆಗೆ ಬಲುದೊಡ್ಡ ನಷ್ಟ. ಅಂತೆಯೇ ಕಾಂಗ್ರೆಸ್ ಪಕ್ಷಕ್ಕೂ ನಷ್ಟವಾಗಿದೆ.

      ಅಂಬರೀಶ್ ಅನುಪಸ್ಥಿತಿಯಲ್ಲಿ ಅವರ ಹೆಸರು ಹೇಳಿಕೊಂಡು ವೈಯಕ್ತಿಕ ಕೆಲಸ ಮಾಡಿಕೊಳ್ಳುತ್ತಿದ್ದ ಒಂದಿಷ್ಟು ಬೆಂಬಲಿಗರು ಜಿಲ್ಲೆಯಲ್ಲಿದ್ದಾರೆ. ಇವರೆಲ್ಲರೂ ಅಂಬರೀಶ್ ಗೆ ಕೆಟ್ಟ ಹೆಸರು ತಂದುಕೊಟ್ಟಿದ್ದರು. ಅವರ ಒಳ್ಳೆಯ ಗುಣಗಳನ್ನು ದುರುಪಯೋಗ ಮಾಡಿಕೊಂಡಿದ್ದರು. ಆದರೆ ಸದ್ಯ ಆ ಪರಿಸ್ಥಿತಿ ಇನ್ಮುಂದೆ ಉಂಟಾಗುವುದು ಅಸಾಧ್ಯದ ಮಾತೇ ಸರಿ.

      ಸಾವನ್ನ 'ಜೋಕರ್' ಎಂದು ಗೇಲಿ ಮಾಡಿದ್ರು ಅಂಬಿ: ಹಂಸಲೇಖ

      ಎಲ್ಲಾ ಪಕ್ಷಗಳ ಮುಖಂಡರ ಕಿವಿಗೆ ಬಿತ್ತು

      ಎಲ್ಲಾ ಪಕ್ಷಗಳ ಮುಖಂಡರ ಕಿವಿಗೆ ಬಿತ್ತು

      ಇನ್ನು ಕಳೆದೆರಡು ದಿನಗಳ ಕೆಳಗಷ್ಟೇ ಅಂಬರೀಶ್ ಮೃತದೇಹ ಜಿಲ್ಲಾ ಕ್ರೀಡಾಂಗಣದಲ್ಲಿದ್ದಾಗ ಮಂಡ್ಯದ ಜನರು ಮುಂದಿನ ಎಂ.ಪಿ ಅಭ್ಯರ್ಥಿ ಅಭಿಷೇಕ್ ಗೌಡ ಎಂದು ಕೂಗಿ ಸಾರುತ್ತಿದ್ದರು. ಈ ಕೂಗು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿ ಎಲ್ಲಾ ಪಕ್ಷಗಳ ಮುಖಂಡರ ಕಿವಿಗೆ ಬಿತ್ತು.

      ಪುತ್ರ ಅಭಿಷೇಕ್ ಮುನ್ನಡೆಸಬೇಕು

      ಪುತ್ರ ಅಭಿಷೇಕ್ ಮುನ್ನಡೆಸಬೇಕು

      ಅಂಬರೀಶಣ್ಣನ ರಾಜಕಾರಣದ ನಡೆಯನ್ನು ಅವರ ಪುತ್ರ ಅಭಿಷೇಕ್ ಮುನ್ನಡೆಸಬೇಕು. ಅಪ್ಪನಂತೆಯೇ ಚಿತ್ರರಂಗದಲ್ಲಿ ಇದ್ದುಕೊಂಡೇ ಅವರು ರಾಜಕೀಯ ಮಾಡಬಹುದು. ಅಪ್ಪನಂತೆಯೇ ಮಗನ ಮೇಲೂ ಮಂಡ್ಯ ಜಿಲ್ಲೆಯ ಜನರಿಗೆ ಅಪಾರ ಪ್ರೀತಿ ಇದೆ. ಅವರು ಮುಂದಿನ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದಾದರೂ ಪಕ್ಷದಿಂದ ಕಣಕ್ಕಿಳಿಯಬೇಕು ಎಂದು ಮಂಡ್ಯದ ಅನೇಕರು ಒತ್ತಾಯಿಸಿದ್ದಾರೆ.

      ಆದರೆ ಅಭಿಷೇಕ್ ಸ್ಫರ್ಧೆ ಮಾಡುತ್ತಾರಾ ಅಥವಾ ಇಲ್ಲವೋ ಎಂಬುದನ್ನು ಖುದ್ದು ಅವರೇ ಸ್ಪಷ್ಟಪಡಿಸದರೇ ಸೂಕ್ತವೇನೋ !.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+