ಯದುವೀರ್ ಹೆಸರಲ್ಲಿ ನಕಲಿ ಖಾತೆ: ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಪೋಸ್ಟ್
ಮೈಸೂರು, ಫೆಬ್ರವರಿ 5: ಮೈಸೂರು ರಾಜಮನೆತನದ ಯದುವೀರ್ ಒಡೆಯರ್ ಅವರ ಹೆಸರಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದು ಕೆಲವು ಕಿಡಿಗೇಡಿಗಳು ಅದರಲ್ಲಿ ರೈತ ಹೋರಾಟವನ್ನು ಬೆಂಬಲಿಸುವ ಪೋಸ್ಟ್ ಹಾಕಿದ್ದಾರೆ.
ರೈತರನ್ನು ಬೆಂಬಲಿಸುವುದು ನಮ್ಮ ಆದ್ಯತೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಕೃಷಿ ಸಮಸ್ಯೆಗಳನ್ನು ಬಗೆಹರಿಸಿ ಎಂದು ಟ್ವೀಟ್ ಮಾಡಲಾಗಿದೆ. ಇದನ್ನು ಗಮನಿಸಿದ ಯದುವೀರ್ ಆಪ್ತರು ಅವರ ಗಮನಕ್ಕೆ ತಂದಿದ್ದಾರೆ.

ಕೂಡಲೇ ಯದುವೀರ್ ಒಡೆಯರ್ ಅವರು, ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ, ಯದುವೀರ್ ಕೆ.ಸಿ. ಒಡೆಯರ್ ಎಂಬ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ಕ್ರಿಯೇಟ್ ಆಗಿದ್ದು, ಇದು ನನ್ನ ಅಸಲಿ ಟ್ವಿಟ್ಟರ್ ಖಾತೆಯಲ್ಲ, ನಕಲಿ ಖಾತೆ ಎಂದು ಸ್ಪಷ್ಟಪಡಿಸಿದ್ದಾರೆ.

ಟ್ವಿಟ್ಟರ್ ಖಾತೆಯ ಸ್ಕ್ರೀನ್‍ಶಾಟ್ ಜೊತೆ ಇನ್‍ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವ ಯದುವೀರ್ ಒಡೆಯರ್ ಅವರು, ಇದು ನನ್ನ ಅಥವಾ ಮೈಸೂರು ಅರಮನೆಯ ಅಭಿಪ್ರಾಯವಲ್ಲ ಎಂದು ಪೋಸ್ಟ್ ಹಾಕಿ ಸ್ಪಷ್ಟಪಡಿಸಿದ್ದಾರೆ.
ರೈತ ಹೋರಾಟಕ್ಕೆ ಅಂತರಾಷ್ಟ್ರೀಯ ಕಲಾವಿದರು, ಸೆಲೆಬ್ರಿಟಿಗಳು ಟ್ವಿಟ್ಟರ್ ನಲ್ಲಿ ಬೆಂಬಲ ವ್ಯಕ್ತಪಡಿಸಿದ್ದು, ಇದನ್ನು ವಿರೋಧಿಸಿ ಕೆಲವರು ಟ್ವಿಟ್ಟರ್ ಅಭಿಯಾನ ಆರಂಭಿಸಿದ್ದಾರೆ.












Click it and Unblock the Notifications