ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಕಲಿ ವೈದ್ಯರ ಹಾವಳಿ?

ಮೈಸೂರು, ಫೆಬ್ರವರಿ 04: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈದ್ಯಕೀಯ ಪದವಿ ಪಡೆಯದ ನಕಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪವನ್ನು ವಿಜಿಲೆನ್ಸ್ ಆಂಡ್ ಮಾನಿಟರಿಂಗ್ ಸಮಿತಿ ಸದಸ್ಯರು ಮಾಡಿದ್ದಾರೆ.

ಕಾನೂನು ಬಾಹಿರ ಚಿಕಿತ್ಸಾಲಯ ಹಾಗೂ ನಕಲಿ ವೈದ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ವಿಜಿಲೆನ್ಸ್ ಆಂಡ್ ಮಾನಿಟರಿಂಗ್ ಸಮಿತಿ ಸದಸ್ಯರು ಹೇಳಿದ್ದಾರೆ.

ಡಾಕ್ಟರ್ ಪದ್ಮಿನಿ ಎಂಬುವವರು ಮೂರು ಪರವಾನಗಿ ಪಡೆದು ಬೇರೆಯವರಿಗೆ ಮಾರಿಕೊಂಡಿರೆಂಬ ಆರೋಪ ಕೇಳಿಬಂದಿದೆ. ಪದ್ಮಿನಿಯವರ ಹೆಸರಿನಲ್ಲಿ ಇರುವ ಕ್ಲಿನಿಕ್ ಗಳಲ್ಲಿ ನಕಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.

 Fake Doctors In Mysuru Clinics

ಇಲವಾಲದ ಚಾಮುಂಡೇಶ್ವರಿ ಕ್ಲಿನಿಕ್ ನಲ್ಲಿ ನಿವೃತ್ತ ಶಾಲಾ ಶಿಕ್ಷಕ ದೇವೇಂದ್ರಪ್ಪ, ಹೆಬ್ಬಾಳದ ಧನ್ವಂತರಿ ಕ್ಲಿನಿಕ್ ನಲ್ಲಿ ಮಹೇಂದ್ರ, ಶಾಂತಿ ನಗರದ ಎಚ್.ಕೆ.ಕ್ಲಿನಿಕ್, ಫಾತಿಮಾ ಕ್ಲಿನಿಕ್ ನಲ್ಲಿ ನಕಲಿ ವೈದ್ಯರು ಇದ್ದಾರೆ.

ಇದರ ಬಗ್ಗೆ ಡಿಎಚ್ಓ ಡಾ.ವೆಂಕಟೇಶ, ಆಯುಷ್ ಅಧಿಕಾರಿ ಡಾ.ಸೀತಾ ಲಕ್ಷ್ಮೀ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ನಕಲಿ ವೈದ್ಯರು ಮಾಡುವ ಕೆಲಸದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿದೆ.

 Fake Doctors In Mysuru Clinics

ಈ ಸಮಸ್ಯೆಗೆ ಮುಕ್ತಿ ಸಿಗುವವರೆಗು ನಾವು ಹೋರಾಟ ಮುಂದುವರೆಸುತ್ತೇವೆ ಎಂದು ವಿಜಿಲೆನ್ಸ್ ಆಂಡ್ ಮಾನಿಟರಿಂಗ್ ಸಮಿತಿಯ ಸದಸ್ಯೆ ಭಾಗ್ಯ.ಎಚ್.ಕೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+