ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುಜರಾತ್ ವೈಭವದ ದರ್ಶನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 10: ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್ ಎಸ್ ಅರ್ಬನ್ ಹಾತ್ ನಲ್ಲಿ ಗುಜರಾತ್ ಕರಕುಶಲ ಉತ್ಸವ ಆರಂಭವಾಗಿದ್ದು, ಅಲ್ಲಿನ ಆಹಾರ, ಕಲೆ, ಸಂಸ್ಕೃತಿ, ಉಡುಗೆ, ತೊಡುಗೆ ಎಲ್ಲವನ್ನು ತೆರೆದಿಡುತ್ತಿದೆ.

ಉತ್ಸವದ ಹಿನ್ನಲೆಯಲ್ಲಿ ಇಲ್ಲಿ ಪ್ರದರ್ಶನಕ್ಕಿಟ್ಟಿರುವ ವಸ್ತುಗಳು, ಆಹಾರ, ಉಡುಗೆ ತೊಡುಗೆ ಸೇರಿದಂತೆ ಕರಕುಶಲ ವಸ್ತುಗಳು ಗುಜರಾತ್‍ ಸಿರಿವಂತಿಕೆಯನ್ನು ಕಣ್ಮುಂದೆ ತರುತ್ತಿದೆ.

ವರಮಹಾಲಕ್ಷ್ಮೀ ಹಬ್ಬ: ಕೇವಲ 4,500ರೂ.ಗೆ ಮೈಸೂರು ಸಿಲ್ಕ್ ಸೀರೆವರಮಹಾಲಕ್ಷ್ಮೀ ಹಬ್ಬ: ಕೇವಲ 4,500ರೂ.ಗೆ ಮೈಸೂರು ಸಿಲ್ಕ್ ಸೀರೆ

ಇಲ್ಲಿಗೆ ಒಂದು ಸುತ್ತು ಹೊಡೆದರೆ ಗುಜರಾತ್ ರಾಜ್ಯದ ಪ್ರಾತಿನಿಧಿಕ ಪಟೋಲ ಸೀರೆ, ಬಾಂಧಿನಿ, ಬ್ಲಾಕ್ ಪ್ರಿಂಟ್, ಕಛ್ ನ ಕಸೂತಿ, ಎಂಬ್ರಾಯ್ಡರಿ, ಕಛ್ ನ ಮಿರರ್ ವರ್ಕ್, ಕಛ್ ನ ಆಭರಣಗಳು, ಕೈಮಗ್ಗದ ಉತ್ಪನ್ನಗಳು, ಬೀಡ್ ವರ್ಕ್, ಮಡಕೆಗಳು, ಚನ್ಯಚೋಲಿ, ಚರ್ಮದ ಉತ್ಪನ್ನಗಳು, ಬೆಡ್ ಷೀಟ್ ಗಳು, ಕುಷನ್ ಕವರ್‍ ಗಳು ಸೇರಿದಂತೆ ಕಸೂತಿ ಮತ್ತು ಕರಕುಶಲ ವಸ್ತುಗಳ ಬೃಹತ್ ಸಂಗ್ರಹವೇ ಕಣ್ಣಿಗೆ ರಾಚುತ್ತದೆ.

ಕುಶಲಕರ್ಮಿಗಳ ಕೈ ಚಳಕ

ಕುಶಲಕರ್ಮಿಗಳ ಕೈ ಚಳಕ

ಇನ್ನು ಇಲ್ಲಿ ಕುಶಲಕರ್ಮಿಗಳ ಕೈಚಳಕದಲ್ಲಿ ಮಣ್ಣಿನಲ್ಲಿ ತಯಾರಾದ ಹಲವಾರು ವಸ್ತುಗಳು ಆಕರ್ಷಿಸುತ್ತವೆ. ದೈನಂದಿನ ಬಳಕೆ ವಸ್ತುಗಳನ್ನು ಇರಿಸುವಂಥ ಮಣ್ಣಿನಿಂದ ತಯಾರಿಸಿದ ಪರಿಕರ, ಸಂಗೀತ ಉಪಕರಣಗಳ ಮಾದರಿಯಲ್ಲಿರುವ ಪಾತ್ರೆಗಳು, ಐಸ್‍ಕ್ರೀಂಗಾಗಿಯೇ ಮಾಡಲಾದ ಮಣ್ಣಿನ ಬೌಲ್ ಗಳು, ದೀಪದ ಕುಂಡಿಕೆಗಳು, ಗಣಪತಿಯ ಸಣ್ಣ ಮೂರ್ತಿಗಳು, ಮಣ್ಣು ಮತ್ತು ಮರ ಬಳಸಿ ಮಾಡಿರುವ ಕೀ ಹೋಲ್ಡರ್‍ ಗಳು ಇಲ್ಲಿ ಕಾಣಸಿಗುತ್ತವೆ.

ಕೈಯಿಂದ ಮಾಡಿದ ಕುರ್ತಾ

ಕೈಯಿಂದ ಮಾಡಿದ ಕುರ್ತಾ

ಮನೆಯ ಬಾಗಿಲಿಗೆ ಹೊಂದುವ ತೋರಣಗಳು, ಪೂಜೆಯ ತಟ್ಟೆಯ ಅಡಿಗೆ ಇಡುವಂಥ ರುಮಾಲುಗಳು, ಶಾಲ್ ಗಳು, ಜಾಕೆಟ್ ಗಳು ಕಂಬಳಿಗಳು, ಮಿರರ್ ಗಳನ್ನು ಅಳವಡಿಸಿರುವ ಕುರ್ತಾಗಳು, ಕೈಯಿಂದಲೇ ಮಾಡಿರುವ ಕುರ್ತಾಗಳು, ಪರ್ಸ್ ಗಳು, ವ್ಯಾನಿಟಿ ಬ್ಯಾಗ್ ಗಳು, achletಗಳು, ಮಿರರ್ achletಗಳು, ನೆಕ್ಲೆಸ್ ಗಳೂ ಇವೆ. ಮರದಿಂದಲೇ ತಯಾರಿಸಿರುವ ಆಭರಣಗಳು, ತೆಂಗಿನ ಚಿಪ್ಪು, ನಾರಿನಿಂದ ತಯಾರಿಸಿರುವ ಆಲಂಕಾರಿಕ ವಸ್ತುಗಳು ಹೀಗೆ ಎಲ್ಲವೂ ಗಮನಸೆಳೆಯುತ್ತವೆ.

ಮಹಿಳೆಯರಿಗೆ ರೇಷ್ಮೆ ಸೀರೆ ಭಾಗ್ಯ ಯೋಜನೆಗೆ ಸರ್ಕಾರ ಚಿಂತನೆಮಹಿಳೆಯರಿಗೆ ರೇಷ್ಮೆ ಸೀರೆ ಭಾಗ್ಯ ಯೋಜನೆಗೆ ಸರ್ಕಾರ ಚಿಂತನೆ

ಏನೆಲ್ಲ ಇವೆ?

ಏನೆಲ್ಲ ಇವೆ?

ಇಲ್ಲಿನ ಕರಕುಶಲ ಕರ್ಮಿಗಳ ತಯಾರಿಸಿದ ಸಂಬಾರ ಪದಾರ್ಥಗಳ ಆಭರಣವಾದ ಸ್ಪೈಸ್ ಆರ್ಟ್ ಜ್ಯುವೆಲರಿ, ಬಿದಿರಿನಿಂದ ತಯಾರಿಸಿದ ತಯಾರಿಸಿದ ಪೆನ್‍ಸ್ಟ್ಯಾಂಡ್, ಹೂದಾನಿಗಳು, ಬೀಸಣಿಕೆಗಳು, ಲ್ಯಾಂಪ್ ಹೋಲ್ಡರ್‍ ಗಳು, ಫೈಲ್‍ ಗಳು ಆಕರ್ಷಿಸುತ್ತವೆ.

ಬಗೆ ಬಗೆ ಖಾದ್ಯಗಳು

ಬಗೆ ಬಗೆ ಖಾದ್ಯಗಳು

ಇನ್ನು ಬಗೆಬಗೆಯ, ಬಿಸಿ ಬಿಸಿ ಖಾದ್ಯಗಳು ಬಾಯಿಚಪ್ಪರಿಸುವಂತೆ ಮಾಡುತ್ತವೆ. ಮೈಸೂರಿನ ಜಿಟಿ ಜಿಟಿ ಮಳೆಗೆ ತಣ್ಣಗೆ ಮೈ ನಡುಗಿಸುವ ಚಳಿಗೆ ಇಲ್ಲಿನ ಖಾದ್ಯಗಳು ಮುದ ನೀಡುತ್ತವೆ. ತರಹೇವಾರಿ ಖಾದ್ಯಗಳೂ ಇದ್ದು ಇಲ್ಲಿಗೆ ಬರುವ ಜನರು ಈ ರುಚಿ ರುವಿ ಖಾದ್ಯಗಳನ್ನು ಸವಿದು ಖುಷಿಪಡಬಹುದು.

English summary
Exhibition of Gujarat's tradition and culture is taking place in Hebbalu industrial area in cultural capital of Karnataka, Mysuru. Gujarat's traditional hand made items are exhibiting here by traders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X