ಮೈಸೂರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಮದ್ಯ ವಶ
ಮೈಸೂರು, ಏಪ್ರಿಲ್ 13: ಕೊರೊನಾ ವೈರಸ್ ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿರುವ ಎಲ್ಲ ಮದ್ಯದಂಗಡಿಗಳನ್ನು ಹಾಗೂ ಮದ್ಯ ಗೋದಾಮು, ಡಿಸ್ಟಿಲರಿ ಮತ್ತು ಬ್ರಿವರಿಗಳನ್ನು ಬಂದ್ ಮಾಡಲಾಗಿದೆ.
ಲಾಕ್ ಡೌನ್ ಘೋಷಣೆ ಆದಾಗಿನಿಂದ ಅಬಕಾರಿ ಅಧಿಕಾರಿಗಳು ಮೈಸೂರು ಜಿಲ್ಲೆಯಲ್ಲಿ ಒಟ್ಟು 526 ಕಡೆಗಳಲ್ಲಿ ದಾಳಿ ನಡೆಸಿ, 8 ಗಂಭೀರ ಪ್ರಕರಣಗಳನ್ನು ದಾಖಲಿಸಿ, 8 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ, ಒಟ್ಟು 111 ಲೀ ಮದ್ಯ, 7.260 ಲೀ ಬಿಯರ್ 40 ಲೀ. ಸೇಂಧಿ ಹಾಗೂ 01 ಕಾರು ಮತ್ತು 05 ದ್ವಿಚಕ್ರ ವಾಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ 6,59,109 ರೂ.ಗಳಾಗಿರುತ್ತದೆ.
ಅಬಕಾರಿ ಜಿಲ್ಲಾಧಿಕಾರಿಗಳು ಇಂದು ಪತ್ರಿಕಾ ಹೇಳಿಕೆಯಲ್ಲಿ ಈ ಮಾಹಿತಿ ತಿಳಿಸಿದ್ದಾರೆ. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಅಬಕಾರಿ ಅಧಿಕಾರಿ ಮತ್ತು ಸಿಬ್ಬಂದಿಯನ್ನೊಳಗೊಂಡ ಒಟ್ಟು 13 "ಸಂಚಾರಿ ತಂಡ' ಗಳನ್ನು ರಚಿಸಲಾಗಿದ್ದು, ಈ ತಂಡಗಳು 24*7 ರಂತೆ ಮೂರು ಪಾಳೆಯಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುತ್ತವೆ.

ಅಬಕಾರಿ ಅಕ್ರಮಗಳ ಬಗ್ಗೆ ಇಲಾಖೆಗೆ ದೂರು ಅಥವಾ ಮಾಹಿತಿಯನ್ನು ನೀಡಲು ಸಾರ್ವಜನಿಕರು ಹಾಗೂ ಇತರೆ ವ್ಯಕ್ತಿಗಳ ಅನೂಕೂಲಕ್ಕಾಗಿ 24*7 ರಂತೆ ಕಾರ್ಯನಿರ್ವಹಿಸುವ "ಜಿಲ್ಲಾ ಕಂಟ್ರೋಲ್ ರೂಂ" (ದೂರವಾಣಿ ಸಂಖ್ಯೆ: 0821-2541863) ನ್ನು ಅಬಕಾರಿ ಉಪ ಆಯುಕ್ತರ ಕಛೇರಿಯಲ್ಲಿ ತೆರೆಯಲಾಗಿದೆ. ಕಂಟ್ರೋಲ್ ರೂಮ್ ಹಾಗೂ ಅಧಿಕಾರಿಗಳ ದೂರವಾಣಿ ಸಂಖ್ಯೆಗಳಿಗೆ ಬಂದಂತಹ ದೂರುಗಳನ್ನು ದಾಖಲಿಸಿಕೊಂಡು, ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಅಬಕಾರಿ ಲಾಕೌಟ್ ಆದೇಶ ತೆರವಾದ ಕೊಡಲೇ ಸಂಶಯಾಸ್ಪದ ಮತ್ತು ಸೂಕ್ಷ್ಮವೆಂದು ಪರಿಗಣಿಸಲಾದ ಸನ್ನುದು ಮಳಿಗೆಗಳಲ್ಲಿನ ಮದ್ಯ ಮತ್ತು ಬೀಯರ್ ದಾಸ್ತಾನನ್ನು ಕೂಲಂಕುಷವಾಗಿ ತನಿಖೆಗೆ ಒಳಪಡಿಸಿ, ಸನ್ನದು ಬಂದ್ ಮಾಡಲಾದ ವೇಳೆಯಲ್ಲಿನ ಅಂತಿಮ ದಾಸ್ತಾನು ಮತ್ತು ಹಾಲಿ ಸನ್ನದಿನಲ್ಲಿರುವ ದಾಸ್ತಾನು ತಾಳೆಯಾಗದಿದ್ದಲ್ಲಿ, ಅಕ್ರಮ ಕಂಡುಬಂದ ಸನ್ನದಿನ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 29 ರಂತೆ ಸನ್ನದನ್ನು ಅಮಾನತ್ತು/ ರದ್ದುಪಡಿಸಲು ಕ್ರಮ ಜರುಗಿಸಲಾಗುವುದು.












Click it and Unblock the Notifications