ವಿಶ್ವನಾಥ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ
Recommended Video
ಮೈಸೂರು, ಜುಲೈ 4: ನೆಟ್ಟಗೆ 6 ತಿಂಗಳು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನಿರ್ವಹಿಸಲು ಆಗದಿರುವವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಶಾಸಕ ಎಚ್. ವಿಶ್ವನಾಥ್ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮೈತ್ರಿ ಮುನ್ನಡೆಸುವಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ ವಿಫಲರಾಗಿದ್ದಾರೆ ಎಂಬ ಎಚ್.ವಿಶ್ವನಾಥ್ ಆರೋಪ ವಿಚಾರದ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ಸರಿಯಾಗಿ 6 ತಿಂಗಳು ನಿರ್ವಹಿಸದೆ ರಾಜೀನಾಮೆ ಕೊಟ್ಟಿದ್ದಾರೆ. ಅವರ ಮಾತಿಗೆ ಏನು ಪ್ರತಿಕ್ರಿಯೆ ನೀಡುವುದು ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿರುವುದು ಸತ್ಯ. ನಮ್ಮ ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಕೋಟಿ ಕೋಟಿ ಆಫರ್ ಮಾಡಿರೋದು ನಿಜ. ಬಿಜೆಪಿಯವರು ಶಾಸಕರನ್ನು ದುಡ್ಡು ಕೊಟ್ಟು ಖರೀದಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಪ್ರಯತ್ನ ಮಾಡಿ ವಿಫಲವಾಗಿರೋದು ಸಹ ನಿಜ. ಏನೇ ಇದ್ರು ಮೈತ್ರಿ ಸರ್ಕಾರ ಕಲ್ಲು ಬಂಡೆ ರೀತಿ ಇರುತ್ತದೆ ಎಂದರು.

ಬಿಜೆಪಿಯವರು ಆಪರೇಷನ್ ಮಾಡಿಲ್ಲ ಎಂದಿದ್ದ ಸಚಿವ ಜಿಟಿಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಜಿ.ಟಿ. ದೇವೇಗೌಡನಿಗೆ ಏನ್ ಮಾಹಿತಿ ಇದೆಯೋ ಗೊತ್ತಿಲ್ಲ. ನಾನು ಅಮಿತ್ ಶಾ ಜೊತೆಗೂ ಮಾತಾಡಿಲ್ಲ. ಮೋದಿ ಜೊತೆಗೂ ಮಾತಾಡಿಲ್ಲ. ಈಗಾಗಿ ಅವ್ರು ಅಪರೇಷನ್ ಕಮಲ ಮಾಡುತ್ತಿಲ್ಲ ಅಂತ ನಾನು ಹೇಳಲ್ಲ ಎಂದರು.
ಇದಕ್ಕೂ ಮುನ್ನ ಮೈಸೂರಿನಲ್ಲಿ ಖಾಸಗಿ ಹೊಟೇಲ್ ಒಂದಕ್ಕೆ ಆಗಮಿಸುತ್ತಿದ್ದ ವೇಳೆಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಅಭಿಮಾನಿಯೊಬ್ಬರು ನೀವು ಎವರ್ ಗ್ರೀನ್ ಹೀರೊ ಅಂತ ಕರೆದರು. ಸಿದ್ದರಾಮಯ್ಯ ಅವರು ಪ್ರೀತಿಯಿಂದ ಏಯ್... ನಡೆಯೋ ಮೂದೇವಿ ಅಂತ ಗದರಿದರು.












Click it and Unblock the Notifications