ಮಾಜಿ ಪೊಲೀಸ್ ಟೈಗರ್ ಅಶೋಕ್ ಈಗ ಆಮ್ ಆದ್ಮಿ
ಮೈಸೂರು, ಮಾರ್ಚ್ 11: ಆಮ್ ಆದ್ಮಿ ಪಕ್ಷದ ವತಿಯಿಂದ ಮೈಸೂರು ಲೋಕಸಭಾ ಕ್ಷೇತ್ರದ ಮತದಾರರಿಗೆ ಅಚ್ಚರಿಯೊಂದು ಕಾದಿದೆ. ದಕ್ಷ ಪೊಲೀಸ್ ಅಧಿಕಾರಿ ಮಾಜಿ ಎಸಿಪಿ ಟೈಗರ್ ಅಶೋಕ್ ಕುಮಾರ್ ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ತಮ್ಮ ಅದೃಷ್ಟ ಪರೀಕ್ಷಸಲಿದ್ದಾರೆ ಎಂದು ತಿಳಿದುಬಂದಿದೆ.
ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾ ಅವರು ಇದೇ 15/16ರಂದು ಕರ್ನಾಟಕಕ್ಕೆ ಬರುತ್ತಿದ್ದು, ಪಕ್ಷದ ವತಿಯಿಂದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಆ ವೇಳೆ, ಬಿಬಿ ಅಶೋಕ್ ಕುಮಾರ್ ಅವರ ಹೆಸರು ಅಧಿಕೃತವಾಗಿ ಪ್ರಕಟಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಹಾಗೆ ನೋಡಿದರೆ ಮೈಸೂರು ಟೈಗರ್ ಅಶೋಕ್ ಅವರ ಕರ್ಮಭೂಮಿ. ಕ್ಷೇತ್ರದ ಅಂಚಿಗೆ ಹೋದರೆ ತವರು ಸಹ ಆಗುತ್ತದೆ. ಹಾಗಾಗಿ ಮೈಸೂರು-ಕೊಡಗು ಕಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭಾ ಕಣಕ್ಕಿಳಿಯಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ. (ಹುಷಾರು, ಟೈಗರ್ ಅಶೋಕ್ ಕೈಯಲ್ಲಿದೆ ರಿವಾಲ್ವರು!)
ಮೈಸೂರು, ಟೈಗರ್ ಅಶೋಕ್ ಕುಮಾರ್ ಹೆಸರುಗಳು ಪ್ರಸ್ತಾಪವಾದ ಮೇಲೆ ಕಾಡುಗಳ್ಳ ವೀರಪ್ಪನ್ ಹೆಸರೂ ಕಾಣಿಸಿಕೊಳ್ಳಬೇಕು. ಏಕೆಂದರೆ ವೀರಪ್ಪನ್ ಬೇಟೆ ಸಂದರ್ಭದಲ್ಲಿ ಮೈಸೂರು-ಚಾಮರಾಜನಗರ ಭಾಗಗಳಲ್ಲಿನ ಅರಣ್ಯವನ್ನು ಇಂಚಿಂಚೂ ಅಳೆದವರು ಟೈಗರ್ ಅಶೋಕ್ (ವೆಬ್ ಸೈಟ್).
'ನನ್ನ ಹೆಸರು ಪ್ರಸ್ತಾಪಕ್ಕೆ ಬಂದಿರುವುದು ನಿಜ. ಆದರೆ ನಿಲ್ಲಬೇಕೋ/ ಬೇಡ್ವೋ ಎಂಬ ಬಗ್ಗೆ ಇನ್ನೂ ಆಲೋಚಿಸುತ್ತಿದ್ದೇನೆ' ಎಂದು ಟೈಗರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ. (ಗೆಳೆಯ ಬಿಕೆಶಿ ಗೆಲುವಿಗಾಗಿ ತುಡಿಯುತ್ತಿರುವ ಟೈಗರ್ ಬಿಬಿ)












Click it and Unblock the Notifications